ಗೋವಾದಲ್ಲಿ ಸೆಕ್ಸ್ ಮಾಡಲು ಆಧಾರ್ ಕಡ್ಡಾಯ!
ಪಣಜಿ, ಡಿಸೆಂಬರ್ 17: ಟೆಲಿಕಾಂ ಕಂಪನಿಗಳು, ಬ್ಯಾಂಕ್ ಸೇರಿದಂತೆ ಹಲವು ಸರ್ಕಾರಿ ಸೇವೆಗಳಿಗೆ ಆಧಾರ್ ಕಾರ್ಡ್ ಗಳು ಕಡ್ಡಾಯವಾಗಿದ್ದು ಗೊತ್ತೇ ಇದೆ ಈಗ ಗೋವಾದಲ್ಲಿ ಪಿಂಪ್ ಗಳು, ಗ್ರಾಹಕರಿಗೆ ಆಧಾರ್ ಕಡ್ಡಾಯ ಮಾಡಿರುವ ಸುದ್ದಿ ಬಂದಿದೆ.
ವೇಶ್ಯಾವಾಟಿಕೆಗೂ ಆಧಾರ್ ಕಡ್ಡಾಯವಾಗಿದೆ ಎನ್ನುವ ಸುದ್ದಿಯನ್ನು ದೆಹಲಿ ಮೂಲದ ಐವರು ಪ್ರವಾಸಿಗರು ಬಹಿರಂಗಪಡಿಸಿದ್ದಾರೆ.
ಸ್ನೇಹಿತನ ಬ್ಯಾಚುಲರ್ ಪಾರ್ಟಿಗಾಗಿ ಗೋವಾಕ್ಕೆ ಬಂದಿದ್ದ ಈ ತಂಡವು ಉತ್ತರ ಗೋವಾದ ಕಡಲ ತೀರದ ಹೋಟೆಲ್ ನಲ್ಲಿ ತಂಗಿದ್ದರು. ಸ್ಥಳೀಯ ಪಿಂಪ್ ಸಂಪರ್ಕಿಸಿ, ಐವರು ಹುಡುಗಿಯರಿಗಾಗಿ ವಿಚಾರಿಸಿದ್ದಾರೆ.

ಯುವಕರ ಬಗ್ಗೆ ಮಾಹಿತಿ ಕೇಳಿದ ಪಿಂಪ್, ದೆಹಲಿಯವರು ಅಂತಾ ಗೊತ್ತಾದ ಕೂಡಲೇ ಐವರ ಆಧಾರ್ ಕಾರ್ಡ್ ಫೋಟೋವನ್ನು ವಾಟ್ಸಾಪ್ ಮೂಲಕ ಕಳಿಸುವಂತೆ ಸೂಚಿಸಿದ್ದಾನೆ. ಜತೆಗೆ ಹೋಟೆಲ್ ರೂಮಿನ ಕೀಗಳ ಫೋಟೋ ಕೂಡ ಬೇಕು ಹೇಳಿದ್ದಾನೆ.
ಇದರಿಂದ ಯುವಕರು ಅಚ್ಚರಿಗೊಂಡಿದ್ದಾರೆ.
ಗೋವಾದಲ್ಲಿ ವೇಶ್ಯಾವಾಟಿಕೆಗೆ ಬ್ರೇಕ್ ಹಾಕಲು ಗೋವಾ ಪೊಲೀಸರು ಮಾರುವೇಷದಲ್ಲಿ ಬಂದರೆ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯಿಂದ ಪಿಂಪ್ ಗಳು ಈ ರೀತಿ ಆಧಾರ್ ಚೀಟಿ ಕೇಳಿರಬಹುದು ಎಂದು ತಿಳಿದು ಬಂದಿದೆ.
ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಪಿಂಪ್ ಗಳ ಸಂಪರ್ಕ ಸಾಧಿಸಿ ಗೋವಾಕ್ಕೆ ಬರುವ ಗ್ರಾಹಕರು ಕೂಡಾ ಮೋಸ ಹೋಗಿರುವ ಪ್ರಸಂಗಗಳು ನಡೆದಿವೆ. ಸುಮಾರು 4 ಸಾವಿರ ರುಪಾಯಿ ಪಿಂಪ್ ಗೆ ನೀಡಿದ ಗ್ರಾಹಕರೊಬ್ಬರು ರೂಮ್ ವೊಂದರ ಬಾಗಿಲು ಬಡಿದಿದ್ದಾರೆ. ಆದರೆ, ಬಾಗಿಲು ತೆಗೆದಿಲ್ಲ. ಪಕ್ಕದ ಅಪಾರ್ಟ್ಮೆಂಟ್ ನವರು ಪ್ರವಾಸಿಗನನ್ನು ಹೊರ ಹಾಕಿದ್ದಾರೆ.
ಗೋವಾದಲ್ಲಿ ಮಾಂಸದಂಧೆಗೆ ಬ್ರೇಕ್ ಹಾಕಲು ಪೊಲೀಸರು ಸಾಕಷ್ಟು ಪ್ರಯತ್ನ ಮಾಡ್ತಿದ್ದಾರಂತೆ. ಹಾಗಾಗಿ ಗ್ರಾಹಕರ ವೇಷದಲ್ಲೇನಾದ್ರೂ ಪೊಲೀಸರು ಬಂದಿದ್ದಾರಾ ಅನ್ನೋದನ್ನು ಕನ್ಫರ್ಮ್ ಮಾಡಿಕೊಳ್ಳಲು ಪಿಂಪ್ ಗಳು ಆಧಾರ್ ವಿವರ ಕೇಳ್ತಿದ್ದಾರೆ. ಪೊಲೀಸರಿಗೆ ಸಿಕ್ಕಿಬೀಳದಂತೆ ಕೇರ್ಫುಲ್ ಆಗಿರಲು ಈ ಪ್ಲಾನ್ ಮಾಡಿದ್ದಾರೆ.












Click it and Unblock the Notifications