ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖೋಯ್ ನಲ್ಲಿದ್ದ ಪೈಲಟ್ ಗಳು ತೀವ್ರ ಗಾಯದಿಂದ ಸಾವು: ತನಿಖಾ ವರದಿ

ಮೇ 23ರಂದು ಬೆಳಗ್ಗೆ ಆಗಸಕ್ಕೆ ಹಾರಿದ್ದ ಸುಖೋಯ್ ಯುದ್ಧ ವಿಮಾನವು ಏಕಾಏಕಿ ಸಂಪರ್ಕ ಕಳೆದುಕೊಂಡು ಭಾರತ-ಚೀನಾ ಗಡಿ ಭಾಗದ ಅರಣ್ಯದಲ್ಲಿ ಪತನಗೊಂಡಿತ್ತು.

|
Google Oneindia Kannada News

ನವದೆಹಲಿ, ಜೂನ್ 1: ಕಳೆದ ವಾರ ಚೀನಾ ದೇಶದ ಗಡಿ ಭಾಗದಲ್ಲಿ ಪತನಗೊಂಡಿದ್ದ ಭಾರತದ ಎರಡು ಯದ್ಧ ವಿಮಾನಗಳಲ್ಲಿದ್ದ ಇಬ್ಬರು ಪೈಲಟ್ ಗಳು ಗಂಭೀರ ಗಾಯಗಳಿಂದಾಗಿ ನಿಧನರಾಗಿದ್ದಾರೆಂದು ಭಾರತೀಯ ವಾಯುಸೇನೆ ತಿಳಿಸಿದೆ.

ಸ್ಕ್ವಾಡ್ರನ್ ತಂಡದ ನಾಯಕ ಡಿ. ಪಂಕಜ್ ಹಾಗೂ ಫ್ಲೈಟ್ ಲ್ಯೂಟೆನೆಂಟ್ ಎಸ್. ಅಚುದೇವ್ ಅವರು ವಿಮಾನವು ಪತನಗೊಳ್ಳುವ ಮುನ್ನ ಬಾಗಿಲು ತೆರೆದು ಹೊರಗೆ ಹಾರಬೇಕಿತ್ತು. ಆದರೆ, ಅವರಿಗೆ ವಿಮಾನದ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗಿಲ್ಲ.[ನಾಪತ್ತೆಯಾಗಿದ್ದ ಸುಖೋಯ್ 30 ಯುದ್ಧ ವಿಮಾನ ಭಾರತ-ಚೀನಾ ಗಡಿಯಲ್ಲಿ ಪತ್ತೆ]

Crashed Sukhoi Su-30 Fighter Jet

ಹಾಗಾಗಿ, ವಿಮಾನ ಪತನಗೊಂಡ ನಂತರ ತೀವ್ರವಾಗಿ ಗಾಯಗೊಂಡಿದ್ದಲ್ಲದೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ತನಿಖಾ ವರದಿಯು ತಿಳಿಸಿರುವುದಾಗಿ ವಾಯುಸೇನೆ ಹೇಳಿದೆ.

ಮೇ 23ರಂದು ತೇಜಿಪುರದ ವಾಯು ನೆಲೆಯಿಂದ ಬೆಳಗ್ಗೆ ಸುಮಾರು 10:30ಕ್ಕೆ ಆಗಸಕ್ಕೆ ಹಾರಿದ್ದ ಸುಖೋಯ್ ಸು - 30 ಯುದ್ಧ ವಿಮಾನ ಬೆಳಗ್ಗೆ 11:10ರ ನಂತರ ಕಂಟ್ರೋಲಿಂಗ್ ಸ್ಟೇಷನ್ ನ ಸಂಪರ್ಕ ಕಡಿದುಕೊಂಡು ಅರುಣಾಚಲ ಪ್ರದೇಶದ ಚೀನಾ ಗಡಿಭಾಗದಲ್ಲಿ ಪತನಗೊಂಡಿತ್ತು.

English summary
The two missing pilots of the Sukhoi Su-30 fighter jet which crashed on the Arunachal-Assam border last week have been declared dead by the Indian Air Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X