ನಾಪತ್ತೆಯಾಗಿದ್ದ ಸುಖೋಯ್ 30 ಯುದ್ಧ ವಿಮಾನ ಭಾರತ-ಚೀನಾ ಗಡಿಯಲ್ಲಿ ಪತ್ತೆ
ಮಂಗಳವಾರ ಕಾಣೆಯಾಗಿದ್ದ ಭಾರತೀಯ ವಾಯು ಸೇನೆಯ ಸುಖೋಯ್ - 30 ಎಂಬ ಯುದ್ಧ ವಿಮಾನದ ಭಗ್ನಾವಶೇಷಗಳು ಇಂದು ಭಾರತ-ಚೀನಾ ಗಡಿಯಲ್ಲಿ ಪತ್ತೆಯಾಗಿದೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ತೇಜ್ ಪುರ(ಅಸ್ಸಾಂ), ಮೇ 26: ಮಂಗಳವಾರ (ಮೇ 23) ಕಾಣೆಯಾಗಿದ್ದ ಭಾರತೀಯ ವಾಯು ಸೇನೆಯ ಸುಖೋಯ್ - 30 ಎಂಬ ಯುದ್ಧ ವಿಮಾನದ ಭಗ್ನಾವಶೇಷಗಳು ಇಂದು ಭಾರತ-ಚೀನಾ ಗಡಿಯಲ್ಲಿ ಪತ್ತೆಯಾಗಿದೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ ಸುಖೋಯ್ - 30 ಯುದ್ಧ ವಿಮಾನದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಯುದ್ಧವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ.[ತೇಜ್ ಪುರ್ ಬಳಿ ಸುಖೋಯ್ 30 ಯುದ್ಧ ವಿಮಾನ ನಾಪತ್ತೆ]

ಭಾರತ ಹಾಗೂ ಚೀನಾ ಗಡಿಭಾಗದ ತೇಜ್ ಪುರ್ ಬಳಿ ಹಾರಾಟ ನಡೆಸಿದ್ದ ಸುಖೋಯ್ 30 ಮಂಗಳವಾರದಂದು ಕಣ್ಮರೆಯಾಗಿತ್ತು. ಮಂಗಳವಾರ ಮಧ್ಯಾಹ್ನ ತೇಜ್ ಪುರ್ ದ ವಾಯುನೆಲೆಯಿಂದ ಟೇಕಾಫ್ ಆಗಿ 60 ಕಿ.ಮೀ ಹಾರಾಟ ನಡೆಸಿದ ಬಳಿಕ ರೇಡಿಯೋ ಹಾಗೂ ರಡಾರ್ ಸಂಪರ್ಕ ಕಳೆದುಕೊಂಡಿತ್ತು.












Click it and Unblock the Notifications