ಚಿತ್ರಗಳಲ್ಲಿ: ದೆಹಲಿ ಚುನಾವಣಾ ಪ್ರಚಾರ ಭರಾಟೆ

ನವದೆಹಲಿ, ಫೆ. 3: ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿಯ ಪ್ರಚಾರ ಭರಾಟೆ ಹೆಚ್ಚಾಗಿದೆ. ಮಂಗಳವಾರ ಎರಡೂ ಪಕ್ಷದ ನೇತಾರರು ವಿವಿಧೆಡೆ ಪ್ರಚಾರ ಮತ್ತು ರೋಡ್ ಶೋನಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.

ಬಿಜೆಪಿ ಪರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರೆ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಾತಿನ ಬಾಣಗಳು ಕಡಿಮೆಯಿರಲಿಲ್ಲ. ಇತ್ತ ಬಿಜೆಪಿ ತನ್ನ 'ದೆಹಲಿ ಚುನಾವಣೆ ಕುರಿತ ಪಕ್ಷದ ಧ್ಯೇಯಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿತು.[ದೆಹಲಿ ಆರ್ಥಿಕ ಸುಭದ್ರತೆಗೆ ಬೇಡಿ 10 ಸೂತ್ರಗಳು]

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ ಬೇಡಿ ಮತ್ತು ಆಮ್ ಆದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ವಿವಿಧೆಡೆ ರೋಡ್ ಶೋ ಗಳಲ್ಲಿ ಪಾಲ್ಗೊಂಡು ಮತ ಯಾಚನೆ ನಡೆಸಿದರು. ಅತ್ತ ಬಿಎಸ್ಪಿ ನಾಯಕಿ ಮಾಯಾವತಿ ಸಹ ಸೋಮವಾರ ಆಗಮಿಸಿ ಪ್ರಚಾರ ನಡೆಸಿದ್ದರು.

ಬೇಡಿ ರೋಡ್ ಷೋ

ಬೇಡಿ ರೋಡ್ ಷೋ

ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರ ಜೋರಾಗಿದ್ದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ ಬೇಡಿ ವಿವಿಧೆಡೆ ರೋಡ್ ಶೋ ನಲ್ಲಿ ಪಾಲ್ಗೊಂಡು ಮತಯಾಚಿಸಿದರು. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ನರೇಂದ್ರ ಮೋದಿ ನಾಯಕತ್ವ ಬೆಂಬಲಿಸಲು ಮನವು ಮಾಡಿದರು.

ಬಾಬಾ ಮತ್ತು ಮೋದಿ

ಬಾಬಾ ಮತ್ತು ಮೋದಿ

ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಕಾಣಿಸಿಕೊಂಡ ಜ್ಯೂನಿಯರ್ ನರೇಂದ್ರ ಮೋದಿ ಮತ್ತು ಬಾಬಾ ರಾಮ್ ದೇವ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಬಿಜೆಪಿ ಮತ್ತು ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಇಬ್ಬರು ಜ್ಯೂನಿಯರ್ ಗಳು ಈ ಬಾರಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಯಾ ಮೋಡಿ

ಮಾಯಾ ಮೋಡಿ

ಚುನಾವಣಾ ಪ್ರಚಾರದಲ್ಲಿ ಬಹುಜನ ಸಮಾಜವಾದಿ ಪಕ್ಷ ಸಹ ಹಿಂದೆ ಬಿದ್ದಿಲ್ಲ. ಪಕ್ಷದ ಅಧಿನಾಯಕಿ ಮಾಯಾವತಿ ಬಾದರ್ ಪುರ್ ದ ಪ್ರಚಾರದ ವೇಳೆ ಕಾರ್ಯಕರ್ತರಿಗೆ ಪಕ್ಷದ ಚಿಹ್ನೆಯ ಕಾಣಿಕೆ ನೀಡಿ ಹುರಿದುಂಬಿಸಿದರು.

ಕೇಜ್ರಿ ವಾಗ್ದಾಳಿ

ಕೇಜ್ರಿ ವಾಗ್ದಾಳಿ

ರೋಡ್ ಷೋ ಮೂಲಕ ಮತಯಾಚನೆ ಮಾಡಿದ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮತ್ತೊಮ್ಮೆ ಅಧಿಕಾರ ನೀಡುವಂತೆ ಮನವಿ ಮಾಡಿದ ಕೇಜ್ರಿ ದೆಹಲಿಯ ಮಹಿಳಾ ಸುರಕ್ಷತೆ ಮತ್ತು ಬದಲಾವಣೆ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಬಿಜೆಪಿ ಒಗ್ಗಟ್ಟು

ಬಿಜೆಪಿ ಒಗ್ಗಟ್ಟು

ದೆಹಲಿಯ ಕುರಿತಾಗಿ ಧ್ಯೇಯ ಮತ್ತು ಗುರಿಗಳುಳ್ಳ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಕೇಂದ್ರ ಸಚಿವರಾದ ಅನಂತ ಕುಮಾರ್, ಹರ್ಷವರ್ಧನ್ ಮುಂತಾದವರು ಈ ಸಂದರ್ಭ ಹಾಜರಿದ್ದು ಪಕ್ಷದ ನಡವಳಿಕೆಯಮನ್ನು ತಿಳಿಸಿಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+