ಕ್ಯಾಮರಾ ಕಣ್ಣಲ್ಲಿ ವಿಶ್ವ ಯೋಗ ದಿನಾಚರಣೆ ಅಂತಿಮ ತಾಲೀಮು
ಬೆಂಗಳೂರು, ಜೂ. 20 : ಪ್ರಥಮ 'ವಿಶ್ವ ಯೋಗ ದಿನಾಚರಣೆಗೆ' ವೇದಿಕೆ ಸಿದ್ಧವಾಗಿದೆ. ದೇಶದ ತುಂಬಾ ಯೋಗದ ಬಗ್ಗೆಯೇ ಮಾತು. ಜೂನ್ 21ರ ಭಾನುವಾರ ದೇಶಾದ್ಯಂತ ಯೋಗ ಪ್ರದರ್ಶನ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ವಿಶ್ವ ಯೋಗ ದಿನಾಚರಣೆಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ತರಬೇತಿ ನಡೆಯುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಸೈನಿಕರು, ವಿವಿಧ ಸಂಟನೆಗಳ ಸದಸ್ಯರು, ಸಿನಿಮಾ ತಾರೆಯರು ಯೋಗ ಪ್ರದರ್ಶನ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. [ವಿಶ್ವ ಯೋಗ ದಿನ, ಬೆಂಗಳೂರಲ್ಲಿ ಎಲ್ಲೆಲ್ಲಿ ಕಾರ್ಯಕ್ರಮ?]
ಪ್ರಧಾನಿ ನರೇಂದ್ರ ಮೋದಿ, ಯೋಗ ಗುರು ಬಾಬಾ ರಾಮದೇವ್ ಮುಂತಾದವರು ಯೋಗದಿನದ ಅಂಗವಾಗಿ ಭಾನುವಾರ ರಾಜಪಥದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ. ಕೇಂದ್ರ ಸಚಿವರು, ಸಶಸ್ತ್ರ ಪಡೆಗಳ ಯೋಧರು, ಎನ್ಸಿಸಿ ಕೆಡೆಟ್ಗಳು ಹಾಗೂ ಕೇಂದ್ರ ಸರ್ಕಾರಿ ನೌಕರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗದಿನದ ಸಿದ್ಧತೆಗಳ ಚಿತ್ರಗಳು ಇಲ್ಲಿವೆ.

ಅಂತಿಮ ತಾಲೀಮು ನಡೆಸುತ್ತಿರುವ ಜ್ಯೋತಿ ಆಮ್ಗೆ
ವಿಶ್ವದ ಅತಿ ಗಿಡ್ಡ ಮಹಿಳೆ ಎಂದು ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿರುವ ಭಾರತೀಯ ಮಹಿಳೆ ನಾಗ್ಪುರ ಮೂಲದ 19ರ ಹರೆಯದ ಜ್ಯೋತಿ ಆಮ್ಗೆ ಪ್ರಥಮ ಅಂತರರಾಷ್ಟ್ರೀಯ ಯೋಗ ದಿನದ ಅಂತಿಮ ಸಿದ್ಧತೆಯಲ್ಲಿ ತೊಡಗಿರುವುದು.

ಹೈದರಾಬಾದ್ನಲ್ಲಿ ವಿದ್ಯಾರ್ಥಿಗಳ ಯೋಗಾಭ್ಯಾಸ
ಪ್ರಥಮ ವಿಶ್ವ ಯೋಗ ದಿನಾಚರಣೆಗೆಯಂದು ಯೋಗ ಪ್ರದರ್ಶನ ಮಾಡಲಿರುವ ಹೈದರಾಬಾದ್ನ ವಿದ್ಯಾರ್ಥಿಗಳು ಶನಿವಾರ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದರು.

ಕೋಲ್ಕತ್ತಾದಲ್ಲೂ ಅಂತಿಮ ಸಿದ್ಧತೆ
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಭಾನುವಾರ ಯೋಗ ಪ್ರದರ್ಶನ ಮಾಡಲಿರುವ ಎನ್ಸಿಸಿ ಕೆಡೆಟ್ಗಳು ಶನಿವಾರ ಮಳೆಯ ನಡುವೆಯೇ ಅಭ್ಯಾಸ ಮಾಡಿದರು.

ಸೈನಿಕರಿಂದ ಯೋಗದ ತಾಲೀಮು
ಪ್ರಥಮ ಅಂತರರಾಷ್ಟ್ರೀಯ ಯೋಗ ದಿನಕ್ಕಾಗಿ ಸೈನಿಕರು ಭೋಪಾಲ್ನಲ್ಲಿ ಯೋಗಾಭ್ಯಾಸ ಮಾಡಿದರು.

ಲಡಾಕ್ನಲ್ಲಿ ಸೈನಿಕರ ಯೋಗ
ಅಂತರರಾಷ್ಟ್ರೀಯ ಯೋಗ ದಿನ ಆಚರಣೆಗಾಗಿ ಲಡಾಕ್ನಲ್ಲಿ ಸೈನಿಕರು ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ.

ಯೋಗಿಗಳಿಂದ ಜಲಯೋಗ
ಯೋಗ ದಿನ ಆಚರಣೆಗಾಗಿ ವಾರಣಾಸಿಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಶನಿವಾರ ಯೋಗಿಗಳು ಜಲಯೋಗ ಪ್ರದರ್ಶಿಸಿದರು.

ಅಹಮದಾಬಾದ್ನಲ್ಲಿ ನಡೆದಿದೆ ಸಿದ್ಧತೆ
ಪ್ರಥಮ ವಿಶ್ವ ಯೋಗ ದಿನಾಚರಣೆಗೆ ಅಹಮದಾಬಾದ್ನಲ್ಲಿಯೂ ಸಿದ್ಧತೆ ನಡೆಯುತ್ತಿದೆ. ಶನಿವಾರ ತಯಾರಿ ಕಂಡಿದ್ದು ಹೀಗೆ.

ಪ್ರಧಾನ ಕಾರ್ಯಕ್ರಮಕ್ಕೆ ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ, ಯೋಗ ಗುರು ಬಾಬಾ ರಾಮದೇವ್ ಮುಂತಾದವರು ಯೋಗದಿನದ ಅಂಗವಾಗಿ ಭಾನುವಾರ ರಾಜಪಥದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ. ಇದಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ.

ಮುಖ್ಯ ವೇದಿಕೆ ಹೀಗಿದೆ
ಪ್ರಧಾನಿ ನರೇಂದ್ರ ಮೋದಿ ರಾಜಪಥದಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ. ಸಮಾರಂಭ ನಡೆಯುವ ಮುಖ್ಯ ವೇದಿಕೆ ಹೀಗಿದೆ.

ದೆಹಲಿಯಲ್ಲಿ ಅಗತ್ಯ ಭದ್ರತೆ
ವಿಶ್ವಯೋಗ ದಿನದ ಅಂಗವಾಗಿ ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಇರುವ ದೆಹಲಿಯ ರೈಸಿನಾ ಹಿಲ್ಸ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ.












Click it and Unblock the Notifications