ನೀರಿನ ಅಡಿ ಕುಳಿತು ನಿಮ್ಮಿಷ್ಟದ ಆಹಾರ ಸೇವಿಸುತ್ತಿದ್ದರೆ....!

Subscribe to Oneindia Kannada

ಅಹಮದಾಬಾದ್, ಫೆಬ್ರವರಿ, 01: ನಿಮ್ಮ ಪ್ರೀತಿ ಪಾತ್ರರೊಂದಿಗೆ ನೀರಿನ ಒಳಗಡೆ ಕುಳಿತು ನಿಮ್ಮ ಇಷ್ಟದ ಆಹಾರವನ್ನು ಹೀರುತ್ತಿದ್ದರೆ ಆಹಾ...! ಹೌದು ಇಂಥದ್ದೊಂದು ಅವಕಾಶ ನಿಮಗೆ ಅಹಮದಾಬಾದ್ ನಲ್ಲಿ ಸಿಗುತ್ತದೆ. ಭಾರತದ ಪ್ರಪ್ರಥಮ ಅಂಡರ್ ವಾಟರ್ ರೆಸ್ಟೋರೆಂಟ್ ಇಂದಿನಿಂದ ಕಾರ್ಯಾರಂಭ ಮಾಡಿದೆ.

ರೀಯಲ್ ಪೊಸಿಡಾನ್ ಹಸರಿನ ರೆಸ್ಟೋರೆಂಟ್ ಅಹಮದಾಬಾದ್ ನ ಎಸ್ ಪಿ ರಿಂಗ್ ರೋಡ್ ನಲ್ಲಿ ಆರಂಭವಾಗಿದೆ. ಚೈನೀಸ್, ಥಾಯ್, ಮೆಕ್ಸಿಕನ್ ಮತ್ತು ಭಾರತದ ಸಾಂಪ್ರದಾಯಿಕ ಆಹಾರವನ್ನು ಸವಿಯಬಹುದು.['ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!]

ಭೂಮಿಯಿಂದ 20 ಅಡಿ ಆಳದಲ್ಲಿ ಆರಾಮವಾಗಿ ಕುಳಿತು ನೀರಿನೊಂದಿಗೆ ಆಟವಾಡುತ್ತ ಆಹಾರ ಸವಿಯಬಹುದು. ಅಹಮದಾಬಾದ್ ನ ಉದ್ಯಮಿ ಭರತ್ ಭಟ್ ಈ ರೆಸ್ಟೋರೆಂಟ್ ನ ಮಾಲೀಕತ್ವ ಹೊಂದಿದ್ದಾರೆ. ಹಾಗಾದರೆ ರೆಸ್ಟೋರೆಂಟ್ ನ್ನು ನಾವು ಒಂದು ರೌಂಡ್ ಹಾಕಿಕೊಂಡು ಬರೋಣ.....

ಫೆಬ್ರವರಿ 1 ರಿಂದ ಆರಂಭ

ಫೆಬ್ರವರಿ 1 ರಿಂದ ಆರಂಭ

ಭಾರತದ ಪ್ರಪ್ರಥಮ ಅಂಡರ್ ವಾಟರ್ ರೆಸ್ಟೋರೆಂಟ್ ಇಂದಿನಿಂದ ಕಾರ್ಯಾರಂಭ ಮಾಡಿದ್ದು ಹೊರ ನೋಟವನ್ನು ನೋಡಿ...

ರೆಸ್ಟೋರೆಂಟ್ ವಿನ್ಯಾಸ

ರೆಸ್ಟೋರೆಂಟ್ ವಿನ್ಯಾಸ

ರೆಸ್ಟೋರೆಂಟ್ ನ ಹೊರ ವಿನ್ಯಾಸವನ್ನು ನೋಡಿಕೊಂಡು ಬನ್ನಿ. ಇಲ್ಲಿಂದ ಒಳಕ್ಕೆ ತೆರಳಿದರೆ ನೀವು ನೀರಿನ ಅಡಿ ಕುಳಿತು ಆಹಾರ ಸೇವಿಸಬಹುದು.

ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ನೀರಿನೊಳಗಿನ ರೆಸ್ಟೋರೆಂಟ್ ನ ರಿಸಪ್ಷನ್ ನಲ್ಲಿ ನಿಮಗೆ ಸದಾ ನಗುಮೊಗದ ಸ್ವಾಗತ ದೊರೆಯುತ್ತದೆ.

ರೆಸ್ಟೊರೆಂಟ್ ಹೀಗಿದೆ

ರೆಸ್ಟೊರೆಂಟ್ ಹೀಗಿದೆ

ಅಹಮದಾಬಾದ್ ನ ರೆಸ್ಟೋರೆಂಟ್ ನ ನೋಟ ಹೀಗಿದೆ. ಆರಾಮವಾಗಿ ಕುಳಿತು ನಿಮ್ಮ ನೆಚ್ಚಿನ ಆಹಾರವನ್ನು ಸವಿಯಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's first underwater restaurant has opened its door for public from today. Food lovers can enjoy their favourite food while seating under water in Ahmedabad. The restaurant named, Real Poseidon located at Ahmedabad's S.P. Ring Road offers Chineese, Thai, Mexican and Indian food.
Please Wait while comments are loading...