ನೆಮ್ಮದಿಯಾಗಿದ್ದ ಟರ್ಕಿಯಲ್ಲಿ ನೆತ್ತರು, ಆಮ್ ಆದ್ಮಿ, ಸಿದ್ದರಾಮಯ್ಯ..

Posted By:
Subscribe to Oneindia Kannada

ಟರ್ಕಿ ದೇಶದ ನೆಮ್ಮದಿ ಪೂರ್ತಿ ಹಾಳಾಗಿದೆ. ಅಲ್ಲಿನ ಅಂಕಾರದಲ್ಲಿ ರಷ್ಯಾ ರಾಯಭಾರಿಯ ಹತ್ಯೆಯಾಗಿದೆ. ಅದಾಗಿ ಕೆಲ ಗಂಟೆಗಳಲ್ಲಿ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಲು ಬಂದೂಕುಧಾರಿಯೊಬ್ಬ ಯತ್ನಿಸಿದ್ದಾನೆ. ತುಂಬ ನೆಮ್ಮದಿಯಾಗಿದ್ದ ದೇಶವೊಂದು ಹೀಗೆ ಭಯೋತ್ಪಾದಕರ ದಾಳಿಗೆ ಈಡಾಗುತ್ತಿರುವುದು ಅಲ್ಲಿನ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಟಾಟಾ ಸಮೂಹದ ಎಲ್ಲ ಕಂಪನಿಗಳ ಹುದ್ದೆಗೆ ರಾಜೀನಾಮೆ ನೀಡಿ, ಸೈರಸ್ ಮಿಸ್ತ್ರಿ ಆಚೆ ಬಂದಿದ್ದಾರೆ. ಆಮ್ ಆದ್ಮಿ ಪಕ್ಷದ ಪರವಾಗಿ ದೆಹಲಿಯ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದಕ್ಷಿಣ ಗೋವಾದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದಾರೆ. ದೆಹಲಿಯಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಜನಾದೇಶ ಸಿಕ್ಕ ಎಎಪಿಗೆ ದಕ್ಷಿಣ ಭಾರತದ ಬಾಗಿಲು ತೆರೆಯಬಹುದಾ?

ಇನ್ನು ಪಾಂಪೋರ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿ.ರತೀಶ್ ಮೃತಪಟ್ಟಿದ್ದಾರೆ. ಸೇನಾ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ಕೂಡ ನಡೆದಿದೆ. ಅಮೀರ್ ಖಾನ್ ಗೆ ಕೊಲ್ಹಾಪುರದಲ್ಲಿ ಸನ್ಮಾನ, ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ನಲ್ಲಿ ಸೊಗಸಾದ ಅಜೇಯ ತ್ರಿಶತಕ ಬಾರಿಸಿದ ಕರುಣ್ ನಾಯರ್ ಸಂಭ್ರಮ..ಹೀಗೆ ದೇಶ-ವಿದೇಶದ ನಾನಾ ಘಟನೆಗಳ ಚಿತ್ರಗಳು ಇಲ್ಲಿವೆ.

ರಷ್ಯಾ ರಾಯಭಾರಿ ಹತ್ಯೆ

ರಷ್ಯಾ ರಾಯಭಾರಿ ಹತ್ಯೆ

ಟರ್ಕಿಗೆ ತೆರಳಿದ್ದ ರಷ್ಯಾ ರಾಯಭಾರಿ ಆಂಡ್ರಿ ಕಾರ್ಲೋ ನನ್ನು ಫೋಟೋ ಗ್ಯಾಲರಿಯೊಂದರಲ್ಲಿ ಅಂಗರಕ್ಷಕನೊಬ್ಬ ಸೋಮವಾರ ಕೊಂದಿದ್ದಾನೆ. ಆ ನಂತರ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿ, ನಮ್ಮ ನೆಮ್ಮದಿ ಹಾಳು ಮಾಡುವವರಿಗೆ ಇದೇ ಶಿಕ್ಷೆ ಎಂದು ಜೋರು ದನಿಯಲ್ಲಿ ಹೇಳಿದ್ದಾನೆ.

ಅಮೀರ್ ಗೆ ಸನ್ಮಾನ

ಅಮೀರ್ ಗೆ ಸನ್ಮಾನ

ಕೊಲ್ಹಾ ಪುರದಲ್ಲಿ ಲೋಕ್ ಮಾತಾ ಗ್ರೂಪ್ ನ ಚೇರ್ ಮನ್ ವಿಜಯ್ ದರ್ದಾ ಅವರು ಬಾಲಿವುಡ್ ನಟ ಅಮೀರ್ ಖಾನ್ ಗೆ ಸನ್ಮಾನ ಮಾಡಿದರು.

ದಕ್ಷಿಣದೆಡೆಗೆ ಆಮ್ ಆದ್ಮಿ

ದಕ್ಷಿಣದೆಡೆಗೆ ಆಮ್ ಆದ್ಮಿ

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದಕ್ಷಿಣ ಗೋವಾದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಕಂಡಿದ್ದು ಹೀಗೆ.

ಅಂತಿಮ ಗೌರವ

ಅಂತಿಮ ಗೌರವ

ಸೇನೆಯ ಸಿ.ರತೀಶ್ ಪಾಂಪೋರ್ ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದು, ಸೇನೆಯಿಂದ ಅಂತಿಮ ಗೌರವ ಸಲ್ಲಿಸಲಾಯಿತು.

ಎಲ್ಲ ಹುದ್ದೆಗೂ ರಾಜೀನಾಮೆ

ಎಲ್ಲ ಹುದ್ದೆಗೂ ರಾಜೀನಾಮೆ

ಟಾಟಾ ಸಮೂಹದ ಎಲ್ಲ ಕಂಪನಿಗಳ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದ ಸೈರಸ್ ಮಿಸ್ತ್ರಿ ಸಭೆಯ ನಂತರ ಮುಂಬೈನ ಬಾಂಬೆ ಹೌಸ್ ನಿಂದ ಹೊರಬರುವಾಗ ಕಂಡಿದ್ದು ಹೀಗೆ.

ತ್ರಿಶತಕ ಸಂಭ್ರಮ

ತ್ರಿಶತಕ ಸಂಭ್ರಮ

ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ನಲ್ಲಿ ತ್ರಿಶತಕ ಬಾರಿಸಿದ ನಂತರ ಸಂಭ್ರಮದಲ್ಲಿ ಕರುಣ್ ನಾಯರ್.

ಉಭಯ ಕುಶಲೋಪರಿ

ಉಭಯ ಕುಶಲೋಪರಿ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮಾತುಕತೆಯಲ್ಲಿ ತೊಡಗಿದ್ದ ಕ್ಷಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various national and international events represnt through PTI photos.
Please Wait while comments are loading...