ರೆಮ್ಡೆಸಿವಿರ್ ಚುಚ್ಚುಮದ್ದು ಬೆಲೆ ಇಳಿಕೆ ಮಾಡಿದ ಫಾರ್ಮಾ ಕಂಪನಿಗಳು

ನವದೆಹಲಿ, ಏಪ್ರಿಲ್ 17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಜೀವರಕ್ಷಕ ರೆಮ್ಡೆಸಿವಿರ್ ಔಷಧಿ ಲಭ್ಯತೆ, ಬೆಲೆ ಏರಿಕೆ ಬಗ್ಗೆ ಅಪಸ್ವರ ಎದ್ದಿತ್ತು. ಪ್ರಧಾನಿ ಮೋದಿ ಈ ಬಗ್ಗೆ ಚರ್ಚಿಸಿದ ಬಳಿಕ ಕೇಂದ್ರ ಆರೋಗ್ಯ ಇಲಾಖೆಯು ಬೆಲೆ ಇಳಿಕೆ ಮಾಡುವಂತೆ ಖಾಸಗಿ ಫಾರ್ಮಾ ಕಂಪನಿಗಳಿಗೆ ಸೂಚಿಸಲು ಮುಂದಾಗಿತ್ತು.

ಅದರಂತೆ ಇಂದು ಪ್ರಮುಖ ಏಳು ಫಾರ್ಮಾಸ್ಯೂಟಿಕಲ್ಸ್ ಕಂಪನಿಗಳು ಜೀವರಕ್ಷಕ ರೆಮ್ಡೆಸಿವಿರ್ ಚುಚ್ಚುಮದ್ದು ಗರಿಷ್ಠ ರೀಟೈಲ್ ಬೆಲೆ(ಎಂಆರ್‌ಪಿ) ಇಳಿಕೆ ಮಾಡುತ್ತಿರುವುದಾಗಿ ಪ್ರಕಟಿಸಿವೆ. 100mg/Vial ಪರಿಷ್ಕೃತ ದರ ಪಟ್ಟಿ ಹೀಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಟ್ವೀಟ್ ಮಾಡಿದ್ದಾರೆ.

Pharma companies slash the rates of essential medicine Remdesivir

ರೆಮ್ಡೆಸಿವಿರ್ ಚುಚ್ಚುಮದ್ದು 100mg/Vial 2,800 ರು ನಿಂದ 5,400 ರು ತನಕ ಬೆಲೆ ನಿಗದಿಯಾಗಿತ್ತು. ಆದರೆ, ಈಗ 899 ರು ನಿಂದ 3,490 ರು ನಂತೆ ಸಿಗಲಿದ್ದು, ಖಾಸಗಿ ಔಷಧಿ ಉತ್ಪಾದನಾ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ದರ ಇಳಿಕೆ ಮಾಡಿವೆ ಎಂದು ತಿಳಿದು ಬಂದಿದೆ.

ರೆಮ್ಡೆಸಿವಿರ್ ಚುಚ್ಚುಮದ್ದು 100mg/Vial
ಸಂಸ್ಥೆ ಹೆಸರು ಬ್ರ್ಯಾಂಡ್ ಹೆಸರು ಹಿಂದಿನ ದರ ಪರಿಷ್ಕೃತ ದರ
ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ REMDAC 2,800ರು 899ರು
ಸಿಂಜೆನ್ ಇಂಟರ್ ನ್ಯಾಷನಲ್(ಬಯೋಕಾನ್) RemWin 3,950 2,450
ಡಾ. ರೆಡ್ಡಿಸ್ ಲ್ಯಾಬರೋಟರಿಸ್ ಲಿ. REDYX 5,400 2,700
ಸಿಪ್ಲಾ ಲಿಮಿಟೆಡ್ CIPREMI 4,000 3,000
ಮೈಲಾನ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ DESREM 4,800 3,400
ಜ್ಯುಬಿಲೆಂಟ್ ಜನರಿಕ್ಸ್ ಲಿಮಿಟೆಡ್ JUBI_R 4,700 3,400
ಹೆಟೆರೋ ಹೆಲ್ತ್ ಕೇರ್ ಲಿಮಿಟೆಡ್ COVIFOR 5,400 3,490
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+