Pew survey: ಭಾರತವನ್ನು ಧನಾತ್ಮಕವಾಗಿ ವೀಕ್ಷಿಸುವವರ ಸಂಖ್ಯೆ ಇಳಿಕೆ: ವರದಿ
ಬೆಂಗಳೂರು, ಆಗಸ್ಟ್ 30: ಜಿ20 ರಾಷ್ಟ್ರಗಳ ಜನರು ಭಾರತದ ಕುರಿತು ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಆದರೆ ಕಳೆದ 15 ವರ್ಷಗಳಲ್ಲಿ ಭಾರತವನ್ನು ಧನಾತ್ಮಕವಾಗಿ ನೋಡುವ ಯೂರೋಪಿಯನ್ ನಿವಾಸಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ ಎಂದು ಮಂಗಳವಾರ ಪ್ರಕಟವಾದ ಪ್ಯೂ ಸಮೀಕ್ಷೆ ಈ ಮಾಹಿತಿ ನೀಡಿದೆ.
ಪ್ರಸಕ್ತ ವರ್ಷ ಫೆಬ್ರವರಿ ಮತ್ತು ಮೇ ನಡುವೆ ನಡೆಸಿದ ಪ್ಯೂ ರಿಸರ್ಚ್ ಕೇಂದ್ರವು ನಡೆಸಿ ಸಮೀಕ್ಷೆಯಲ್ಲಿ 24 ದೇಶಗಳಾದ್ಯಂತ 30,000 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಇದರಲ್ಲಿ ಭಾರತವನ್ನು ಶೇಕಡಾ 46ರಷ್ಟು ಮಂದಿ ಅನುಕೂಲಕರವಾಗಿ ವೀಕ್ಷಿಸಿದ್ದರೆ, ಒಟ್ಟು ಶೇಕಡಾ 34ರಷ್ಟು ಮಂದಿ ಭಾರತವನ್ನು ಪ್ರತಿಕೂಲವಾಗಿ ಕಾಣುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಮೀಕ್ಷೆಯಯಲ್ಲಿ ಒಟ್ಟು 12 ದೇಶಗಳ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಪ್ರಶ್ನೆ ಮಾಡಲಾಯಿತು. ಅದರಲ್ಲಿ ಶೇಕಡಾ 40ರಷ್ಟು ಜನರು ಪ್ರಧಾನಿಯವರು ವಿಶ್ವ ವ್ಯವಹಾರಗಳಲ್ಲಿ ಸರಿಯಾದ ಕೆಲಸವನ್ನು ಮಾಡುವ ವಿಶ್ವಾಸ ಅವರಲ್ಲಿ ಇಲ್ಲ ಎಂದು ಅಭಿಪ್ರಾಯ ಹೊರ ಹಾಕಿದರು. ಆದರೆ ಶೇಕಡಾ 37ರಷ್ಟು ಮಂದಿ ಭಾರತದ ಪ್ರಧಾನಿಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಮೀಕ್ಷೆಯಲ್ಲಿ ಈ ರಾಷ್ಟ್ರಗಳು ಇರಲಿಲ್ಲ
ಪ್ರಧಾನಿ ನರೇಂದ್ರ ಮೋದಿಯವರು ಜಿ20 ರಾಷ್ಟ್ರಗಳ ನಾಯಕರನ್ನು ನವದೆಹಲಿಯಲ್ಲಿ ಶೃಂಗಸಭೆಗೆ ಆಹ್ವಾನಿಸುವ ಎರಡು ವಾರಗಳ ಮೊದಲು ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ರಷ್ಯಾ, ಚೀನಾ, ಸೌದಿ ಅರೇಬಿಯಾ, ಟರ್ಕಿ ಮತ್ತು ಭಾರತದ ಸೇರಿದಂತೆ ಜಿ 20ಯ ಎಲ್ಲ ಸದಸ್ಯ ರಾಷ್ಟ್ರಗಳು ಸಮೀಕ್ಷೆಗೆ ಪಾಲ್ಗೊಂಡಿದ್ದ ಈ 24 ರಾಷ್ಟ್ರಗಳ ಪಟ್ಟಿಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಇನ್ನೂ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಜಿ20 ಶೃಂಗಸಭೆಗೆ ಹಾಜರಾಗುವುದು ಖಚಿತವಾಗಿದೆ. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೈರಾಗುವ ಸಾಧ್ಯತೆಗಳು ಇವೆ. ಇನ್ನು ಅಮೆರಿಕಾದ ಜನರಲ್ಲಿ ಶೇಕಡಾ ಅರ್ಧದಷ್ಟು ಮಂದಿ ಭಾರತವನ್ನು ಶೇಕಡಾ 51ರಷ್ಟು ಅನುಕೂಲಕರವಾಗಿ ನೋಡುತ್ತಿದ್ದಾರೆ. ಶೇಕಡಾ 44ರಷ್ಟು ಮಂದಿ ಭಾರತದ ವಿರುದ್ಧ ದೃಷ್ಠಿಕೋನ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಧಾನಿ ಬಗ್ಗೆ ಶೇ.37ರಷ್ಟು ಮಂದಿಗೆ ವಿಶ್ವಾಸ
ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕಾದ ಜನರಲ್ಲಿ ಕೇವಲ 21ರಷ್ಟು ಮಂದಿ ಸಕಾರಾತ್ಮಕವಾಗಿ ನೋಡಿದರೆ, ಶೇಕಡಾ 37ರಷ್ಟು ಮಂದಿ ಪ್ರಧಾನಿ ಮೇಲೆ ವಿಶ್ವಾಸ ಹೊಂದಿಲ್ಲ ಎಂಬುದು ಗೊತ್ತಾಗಿದೆ.
ಒಟ್ಟಾರೆ ಸಮೀಕ್ಷೆಯಿಂದ ಭಾರತ ದೇಶದ ಚಿತ್ರಣವು ನಕಾರಾತ್ಮಕಕ್ಕಿಂತ ಹೆಚ್ಚು ಧನಾತ್ಮಕವಾಗಿದೆ. ಹಿಂದಿನ ಲಭ್ಯ ಮಾಹಿತಿ ಪ್ರಕಾರ, ಐದು ಯುರೋಪಿಯನ್ ರಾಷ್ಟ್ರಗಳ (ಫ್ರಾನ್ಸ್, ಸ್ಪೇನ್, ಜರ್ಮನಿ, ಪೋಲೆಂಡ್ ಮತ್ತು ಯುಕೆ) ರೇಟಿಂಗ್ ನಲ್ಲಿ 2008 ರಿಂದ ಭಾರತದ ಅನುಕೂಲಕರ ರೇಟಿಂಗ್ ಶೇಕಡಾ 10 ರಷ್ಟು ಇಳಿಕೆ ಆಗಿದೆ.
15 ವರ್ಷಗಳ ಹಿಂದೆ ಶೇಕಡಾ 70 ರಷ್ಟು ಅನುಕೂಲಕರ ದೃಷ್ಟಿಕೋನ ಕಂಡು ಬಂದಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 2023 ರಲ್ಲಿ ಕೇವಲ 39ರಷ್ಟು ಮಂದಿ ಮಾತ್ರ ಭಾರತ ಕುರಿತು ಅನುಕೂಲಕರ ವಿಶ್ವಾಸ ಹೊಂದಿದ್ದಾರೆ. ಈ ಮೂಲಕ ಫ್ರಾನ್ಸ್‌ನಲ್ಲಿ ಭಾರತವನ್ನು ಧನಾತ್ಮಕವಾಗಿ ನೋಡುವವರ ಸಂಖ್ಯೆ ಕಡಿಮೆ ಆಗಿದೆ ಎಂಬುದು ಸಮೀಕ್ಷೆಯಿಂದ ಬಹಿರಂಗವಾಗಿದೆ.












Click it and Unblock the Notifications