ಅಕ್ಟೋಬರ್ 13ರಂದು ಪೆಟ್ರೋಲ್‌ ಬಂಕ್‌ ಬಂದ್‌ ಇಲ್ಲ

Subscribe to Oneindia Kannada
   Petrol Pump Dealers Call Off October 13 Strike | Oneindia Kannada

   ಮುಂಬೈ, ಅಕ್ಟೋಬರ್ 11: ಪೆಟ್ರೋಲ್ ವಿತರಕರು ಅಕ್ಟೋಬರ್ 13ರಂದು ದೇಶವ್ಯಾಪಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ.

   ತೈಲ ಕಂಪನಿಗಳು ಮಾತುಕತೆಗೆ ಮುಂದಾಗಿರುವ ಹಿನ್ನಲೆಯಲ್ಲಿ ಮುಷ್ಕರ ನಡೆಸದಿರಲು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್‌ (ಯುಪಿಎಫ್‌) ತೀರ್ಮಾನಿಸಿದೆ.

   Petrol pump dealers call off October 13 strike

   ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ನೀಡಲಾಗುತ್ತಿರುವ ಕಮಿಷನ್ ಹೆಚ್ಚಳ ಮಾಡಬೇಕು, ಜಿಎಸ್‌ಟಿ ವ್ಯಾಪ್ತಿಗೆ ತೈಲ ಉತ್ಪನ್ನಗಳನ್ನು ತರಬೇಕು ಎಂಬ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸಲು ಪೆಟ್ರೋಲ್ ಬಂಕ್ ಮಾಲಿಕರು ತೀರ್ಮಾನಿಸಿದ್ದರು.

   ಯಾಕೆ ಮುಷ್ಕರ?

   ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತು ವಿತರಕರ ಮಧ್ಯೆ 2016ರ ನವೆಂಬರ್‌ನಲ್ಲಿ ಒಪ್ಪಂದವೊಂದು ನಡೆದಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ವಿತರಕರಿಗೆ ನೀಡುವ ಕಮಿಷನ್ ದರ ಪರಿಷ್ಕರಣೆ ಮಾಡುವುದೂ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಈ ಒಪ್ಪಂದ ನಡೆದಿತ್ತು.

   ಆದರೆ ಎಲ್ಲಾ ಬೇಡಿಕೆಗಳನ್ನು ತೈಲ ಕಂಪೆನಿಗಳು ನಿರ್ಲಕ್ಷಿಸಿದ್ದವು. ಹೀಗಾಗಿ ಮುಷ್ಕರ ನಡೆಸಲು ಪೆಟ್ರೋಲ್ ಬಂಕ್ ಮಾಲಿಕರು ಮುಂದಾಗಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Petrol pump dealers called-off their October 13 strike as the United Petroleum Front (UPF) has withdrawn their nationwide strike.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ