ಪೆಟ್ರೋಲ್ ದರ 3.38 ರು. ಏರಿಕೆ: ಸವಾರರಿಗೆ ಶಾಕ್
ಬೆಂಗಳೂರು, ಸೆಪ್ಟೆಂಬರ್ 1 : ವಾಹನ ಸವಾರರಿಗೆ ಸರ್ಕಾರ ಗಣೇಶ ಹಬ್ಬಕ್ಕೆ ಮುನ್ನವೇ ಶಾಕ್ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರೀ ಏರಿಕೆ ಮಾಡಿದ್ದು ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.
ಪೆಟ್ರೋಲ್ ಪ್ರತಿ ಲೀಟರ್ ಗೆ 3.38 ರು. ಹಾಗೂ ಡೀಸೆಲ್ ಪ್ರತಿ ಲೀಟರ್ 2.67 ರು. ಏರಿಕೆ ಮಾಡಲಾಗಿದೆ. ಕಳೆದ ಎರಡು ಬಾರಿ ದರ ಇಳಿಕೆ ಮಾಡಿದ್ದ ಸರ್ಕಾರ ಸವಾರರಿಗೆ ಈಗ ಸರಿಯಾದ ಶಾಕ್ ನೀಡಿದೆ.[ಭಾರತದ ಯಾವ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ?]

ಆಗಸ್ಟ್ 15 ರಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಕಡಿತ ಮಾಡಲಾಗಿತ್ತು. ಲೀಟರ್ ಪೆಟ್ರೋಲ್ ಗೆ ಒಂದು ರು. ಕಡಿತ ಮಾಡಿದ್ದರೆ, ಡಿಸೇಲ್ ದರವನ್ನು 2 ರು. ಕಡಿಮೆ ಮಾಡಲಾಗಿತ್ತು.[ಹಿಂದಿನ ಬಾರಿ ದರ ಇಳಿಕೆ ಮಾಡಲಾಗಿತ್ತು]
ಪ್ರತಿ 15 ದಿನಕ್ಕೊಮ್ಮೆ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಸರಿಯಾದ ಶಾಕ್ ನೀಡಿವೆ.












Click it and Unblock the Notifications