ವರ್ಷದ ಮೊದಲ ದಿನವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ತಿಂಗಳಿಗೆರಡು ಬಾರಿ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬರುವುದು ಮಾಮೂಲಿಯಾದರೂ ವರ್ಷದ ಮೊದಲ ದಿನವೇ ಜನತೆಗೆ ಆಘಾತಕಾರಿ ಸುದ್ದಿ ಸಿಗುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ.

ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.29 ರು ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 0.97 ರು ನಂತೆ ಏರಿಕೆಯಾಗಿದೆ. [ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

Petrol price hiked by Rs 1.29 per litre, diesel up by Rs 0.97

ಹೊಸ ದರಗಳು ಜನವರಿ 1/2 ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ಡಿಸೆಂಬರ್ 16 ರಂದು ದರ ಪರಿಷ್ಕರಣೆಯಾಗಿತ್ತು. ಪೆಟ್ರೋಲ್ 2.21 ರು ಹಾಗೂ ಡೀಸೆಲ್ 1.79 ಪ್ರತಿ ಲೀಟರ್ ಗೆ ಏರಿಕೆ ಕಂಡಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prices of petrol and diesel have been consecutively hiked. Petrol price has been increased by Rs 1.29 per litre, whereas, the diesel price is up by Rs 0.97 per litre. The hiked charges would be applicable from today midnight.
Please Wait while comments are loading...