ಭಾರತ್ ಬಂದ್ ಬಿಸಿ ಜನಸಾಮಾನ್ಯರಿಗೆ ಮಾತ್ರ ತಟ್ಟುತ್ತದೆ- ಟ್ವೀಟ್ಸ್
ಬೆಂಗಳೂರು, ಸೆಪ್ಟೆಂಬರ್ 09: ನಿರಂತರವಾಗಿ ತೈಲ ಬೆಲೆ ಏರಿಕೆ ಖಂಡಿಸಿ ಸೆಪ್ಟೆಂಬರ್ 10ರಂದು ಮೋದಿ ಸರ್ಕಾರದ ವಿರುದ್ದ ಭಾರತ್ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದೆ. ಬಂದ್ ಯಶಸ್ವಿಯಾಗದಂತೆ ನೋಡಿಕೊಳ್ಳಲು ಕೇಸರಿ ಪಡೆ ಸಜ್ಜಾಗಿದೆ. ಪಕ್ಷಗಳ ತಿಕ್ಕಾಟದ ನಡುವೆ ಜನ ಸಾಮಾನ್ಯರು ಬವಣೆ ಅನುಭವಿಸುತ್ತಾರೆ ಅಷ್ಟೇ ಎಂದು ಟ್ವೀಟ್ ಲೋಕದಲ್ಲಿ ಇಂದು ಚರ್ಚೆಯಾಗುತ್ತಿದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಗಗನಕ್ಕೇರುತ್ತಿರುವುದು ಸಹಜವಾಗಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ನಾಳಿನ ಬಂದ್‍ನಲ್ಲಿ ಎಲ್ಲ ಸಾರ್ವಜನಿಕರು ಭಾಗವಹಿಸಿ ತಮ್ಮ ಆಕ್ರೋಶ ಹೊರಹಾಕುವ ಸಾಧ್ಯತೆ ಇದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿರಂತರ ಹೆಚ್ಚಳವನ್ನು ವಿರೋಧಿಸಿ ದೇಶದಾದ್ಯಂತ ಬಂದ್ ನಡೆಸಲು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅದಕ್ಕೆ ಕೈಜೋಡಿಸುವಂತೆ ಇತರೆ ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳಿಗೆ ಮನವಿ ಮಾಡಿದೆ.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳು ದುಬಾರಿಯಾಗುತ್ತಿರುವುದರಿಂದ ಜನಸಾಮಾನ್ಯರು ತೀವ್ರ ಕಂಗೆಟ್ಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ದೂರಿದ್ದಾರೆ.
|
ಜನ ಸಾಮಾನ್ಯರಿಗೆ ತೊಂದರೆ
ಯಾವ ಬಂದ್ ಆದರೂ ಬೆಳಗ್ಗೆ ಎದ್ದು ಕಚೇರಿಗೆ ಹೋಗಬೇಕಾದ ನಮ್ಮಂಥ ಜನ ಸಾಮಾನ್ಯರಿಗೆ ತೊಂದರೆ ಹೆಚ್ಚು. ರಾಜಕೀಯ ಪಕ್ಷದವರು ತಮ್ಮ ಲಾಭಕ್ಕಾಗಿ ಬಂದ್ ಗೆ ಕರೆ ನೀಡುತ್ತಾರೆ
|
ಎಂಎನ್ಎಸ್ ಬೆಂಬಲ
ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಬೆಂಬಲ ನೀಡಿದೆ. ಬಿಜೆಪಿಗೆ ಬೆಂಬಲ ನೀಡಿ ಉದ್ಧವ್ ಠಾಕ್ರೆ ವಿಫಲರಾಗಿದ್ದಾರೆ. ಬಂದ್ ಗೆ ಬೆಂಬಲವಿದೆ ಎಂದ ಜನತೆ.
|
ಬಿಜೆಪಿ ವಿರುದ್ಧ ನಿಂತ ರಾಜ್, ಉದ್ಧವ್ ಠಾಕ್ರೆ
ಬಿಜೆಪಿ ವಿರುದ್ಧ ನಿಂತ ರಾಜ್, ಉದ್ಧವ್ ಠಾಕ್ರೆ, ಮಹಾರಾಷ್ಟ್ರದಲ್ಲಿ ಮೈತ್ರಿ ಮುರಿದುಕೊಂಡಿರುವ ಬಿಜೆಪಿಗೆ ಈಗ ಚುನಾವಣೆ ಮುಂದಿಟ್ಟುಕೊಂಡು ಬಂದ್ ಬಿಸಿಯಿಂದ ಸಮಸ್ಯೆ ಎದುರಿಸುವಂತಾಗಿದೆ.
|
ಮೋದಿ ಸರ್ಕಾರದಿಂದ ಲೂಟಿ ಎಂದ ಕಾಂಗ್ರೆಸ್ಸಿಗರು
ಮೋದಿ ಸರ್ಕಾರದಿಂದ ಲೂಟಿ ಎಂದು ಕರ್ನಾಟಕ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ, ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, 2014ಕ್ಕೂ ಮೊದಲು ಇದ್ದ ತೈಲ ಬೆಲೆಯನ್ನು ತುಲನೆ ಮಾಡಿ ಬಿಜೆಪಿಯವರು ಟ್ವೀಟ್ ಮಾಡುತ್ತಿದ್ದಾರೆ.
|
ಬಂದ್ ಗೆ ಬೆಂಬಲಿಸುವುದಿಲ್ಲ
ಬಂದ್ ಗೆ ಬೆಂಬಲಿಸುವುದಿಲ್ಲ ಎಂದು ಬಿಜೆಪಿ ಪರ ಅಭಿಮಾನಿಗಳು, ಮೋದಿ ಪರ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.












Click it and Unblock the Notifications