ಜನರ ಮೂಗಿಗೆ ತುಪ್ಪ ಸವರಿದ ತೈಲ ಕಂಪನಿಗಳು
ನವದೆಹಲಿ, ಡಿಸೆಂಬರ್.15: ಭರ್ಜರಿ ಇಳಿಕೆ ನಿರೀಕ್ಷೆಯಲ್ಲಿದ್ದ ಜನರಿಗೆ ತೈಲ ಕಂಪನಿಗಳು ಮೂಗಿಗೆ ತುಪ್ಪ ಸವರಿವೆ. ಪೆಟ್ರೋಲ್ ಲೀಟರ್ಗೆ 50 ಪೈಸೆ ಹಾಗೂ ಡೀಸೆಲ್ ಲೀಟರ್ಗೆ 46 ಪೈಸೆಯಷ್ಟು ಕಡಿಮೆಯಾಗಿದೆ. ಹೊಸ ದರ ಡಿಸೆಂಬರ್ 15 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಬ್ಯಾರಲ್ ಗೆ 35 ಡಾಲರ್ ತಲುಪಿದೆ. ಪೆಟ್ರೋಲ್ ದರವನ್ನು ಲೀಟರ್ ಗೆ 25 ರು. ಕಡಿಮೆ ಮಾಡಿ ಎಂದು ವಿರೋಧ ಪಕ್ಷಗಳು ಸಂಸತ್ ನಲ್ಲಿ ಆಗ್ರಹ ಮಾಡಿದ್ದವು.[ಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ಆಧರಿಸಿ ದರ ಇಳಿಕೆ ಮಾಡಲಾಗಿದೆ. ರುಪಾಯಿ-ಡಾಲರ್ ವಿನಿಮಯ ದರಗಳನ್ನು ಪರಿಗಣಿಸಿ ತೈಲ ದರ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ತೈಲ ನಿಗಮ (ಐಒಸಿ) ತಿಳಿಸಿದೆ.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]
ಬೆಂಗಳೂರಿಗರು ಎಷ್ಟು ನೀಡಬೇಕು?
ಹೊಸ ದರ ಪರಿಷ್ಕರಣೆ ಅನ್ವಯ ಬೆಂಗಳೂರಿಗರು ಲೀಟರ್ ಪೆಟ್ರೋಲ್ ಗೆ 63.13 ರು. ಮತ್ತು ಡೀಸೆಲ್ ಗೆ 48.79 ರು. ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಸಾಮಾನ್ಯವಾಗಿ ತಿಂಗಳಲ್ಲಿ ಎರಡು ಸಾರಿ ತೈಲ ದರ ಪರಿಷ್ಕರಣೆ ಮಾಡುತ್ತಿವೆ.












Click it and Unblock the Notifications