ಸತತ 8ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ!
ಬೆಂಗಳೂರು, ಸೆಪ್ಟೆಂಬರ್ 02: ಸತತವಾಗಿ 8 ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ದರ ಭಾನುವಾರವೂ ಇಳಿಕೆಯಾಗಿಲ್ಲ. ಮೆಟ್ರೋ ಸಿಟಿಗಳು ಹಾಗೂ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ.
ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 16 ಪೈಸೆ ಹೆಚ್ಚಳ ಕಂಡು 78.84 ರೂ.ಗಳಾಗಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ದರ 34 ಪೈಸೆ ಹೆಚ್ಚಳ ಕಂಡು 70.76ರೂ. ಗಳಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡಿಸೇಲ್ ದರ 72.51 ರೂ ಹಾಗೂ ಪೆಟ್ರೋಲ್ ದರ 81.12 ರೂ.ಗಳಾಗಿವೆ

ಮುಂಬೈನಲ್ಲಿ ಇಂದಿನ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕ್ರಮವಾಗಿ 86.25(16 ಪೈಸೆ ಏರಿಕೆ ), 75.12 (36 ಪೈಸೆ ಏರಿಕೆ) ರೂ. ನಷ್ಟಿದೆ. ಆಗಸ್ಟ್ 16ರ ನಂತರ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಡಾಲರ್ ಎದುರು ಭಾರತದ ರೂಪಾಯಿ ಅಪಮೌಲ್ಯವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಇದಲ್ಲದೆ. ಕಚ್ಚಾತೈಲ ಬೆಲೆ ಏರಿಕೆ ಹಾಗೂ ಸಾರಿಗೆ ಮೇಲೆ ಹೆಚ್ಚಿನ ಅಬಕಾರಿ ಸುಂಕ ಹಾಕಿರುವುದು ಕೂಡಾ ಕಾರಣವಾಗಿದೆ.
Price of petrol in Delhi at Rs 78.84/litre (increase by Rs 0.16/litre) and price of diesel at Rs 70.76/litre (increase by Rs 0.34/litre). Price of petrol in Mumbai at Rs 86.25/litre (increase by Rs 0.16/litre) and price of diesel at Rs 75.12/litre (increase by Rs 0.36/litre). pic.twitter.com/zl6HqrkHpU
— ANI (@ANI) September 2, 2018












Click it and Unblock the Notifications