ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು 'ಗ್ರಹಿಕೆ ಯುದ್ಧ, ನಾವು ಹೋರಾಡುತ್ತೇವೆ' ಎಂದ ರಕ್ಷಣಾ ಸಚಿವೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪ್ರತಿಯಾಗಿ ರಾಷ್ಟ್ರಾದ್ಯಂತ ಅಭಿಯಾನ ನಡೆಸುತ್ತೇವೆ. ನಾನೇ ಅದರ ನೇತೃತ್ವ ವಹಿಸಿಕೊಂಡು, ಸಾಲು ಸಾಲು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ನ "ಗ್ರಹಿಕೆಯ ವಿರುದ್ಧ ಯುದ್ಧವನ್ನು ಬಡಿದಾಡುತ್ತೇವೆ" ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದ್ದಾರೆ.

"ನಾವು ಗ್ರಹಿಕೆಯ ಯುದ್ಧವನ್ನು ಸೆಣೆಸಬೇಕಿದೆ. ನಮ್ಮಲ್ಲಿ ಹಲವರು ದೇಶದ ವಿವಿಧೆಡೆ ಮಾತನಾಡುತ್ತೇವೆ. ವಾಸ್ತವಾಂಶ ಹೊರಗೆ ಬರಬೇಕು" ಎಂದು ಅವರು ಹೇಳಿದರು.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳುರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ರಾಹುಲ್ ಗಾಂಧಿ ಅವರು ಮಾಡುತ್ತಿರುವ ಆರೋಪಗಳಿಗೆ 'ಅಂತರರಾಷ್ಟ್ರೀಯ ಆಯಾಮಗಳಿವೆ' ಎನ್ನುತ್ತಿದ್ದಾರೆ. ಅದನ್ನು ಬಯಲು ಮಾಡಲಾಗುವುದು ಎಂದರು.

Perception battle, will fight it: Nirmala Sitharaman on Rafale row

ಫ್ರಾನ್ಸ್ ನ ಮಾಜಿ ಅಧ್ಯಕ್ಷ ಕಳೆದ ವಾರ ನೀಡಿದ ಹೇಳಿಕೆ ಭಾರೀ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಡಸಾಲ್ಟ್ ನ ಭಾರತೀಯ ಪಾಲುದಾರಿಕೆಯಾಗಿ ಸೂಚಿಸಿದ್ದೇ ಭಾರತ ಎಂದು ಅವರು ಹೇಳಿದ್ದರು.

ಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧ

ಈ ಮಾತನ್ನೇ ಮುಂದು ಮಾಡಿಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಫ್ರೆಂಚ್ ಮಾಜಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯನ್ನು 'ಕಳ್ಳ' ಎಂದು ಕರೆದಿದ್ದಾರೆ. ಇದು ಪ್ರಧಾನಿ ಕಚೇರಿಯ ಮರ್ಯಾದೆ ಪ್ರಶ್ನೆ ಎಂದು ಮಾಧ್ಯಮದವರಿಗೆ ಹೇಳಿದ್ದರು.

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಮೂವತ್ತಾರು ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಬೆಲೆಯ ಗೋಪ್ಯತೆಯನ್ನು ಕಾಯ್ದುಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ಆರೋಪಗಳನ್ನು ಮಾಡಿದೆ.

English summary
Defence Minister Nirmala Sitharaman, referring to the Congress broadside on the Rafale jet deal, said today that she would lead a nationwide campaign to "fight the perception battle" with a series of press conferences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X