ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 3ನೇ ಡೋಸ್ ಪಡೆದವರಿಗೆ ಮೂಗಿನ ಮೂಲಕ ಹಾಕುವ ಲಸಿಕೆ ಬೇಡ

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಈಗಾಗಲೇ ಬೂಸ್ಟರ್ (3ನೇ) ಡೋಸ್ ಲಸಿಕೆ ಪಡೆದವರು ಮೂಗಿನ ಮೂಲಕ ಪಡೆಯಬಹುದಾದ ಲಸಿಕೆಯನ್ನು ಪಡೆಯಬಾರದು. ಭಾರತದಲ್ಲಿ ಮೂಗಿನ ಮೂಲಕ ಪಡೆಯಬಹುದಾದ ಲಸಿಕೆಯನ್ನು ಮೊದಲ ಬೂಸ್ಟರ್‌ ಡೋಸ್ ಎಂದು ಶಿಫಾರಸು ಮಾಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಅಂದರೆ ಕೊರೊನಾ ಎರಡು ಲಸಿಕೆ ಪಡೆದವರು ಮೂರನೇ ಲಸಿಕೆ ಪಡೆದಿದ್ದರೆ ಅಂತವರು ಇತ್ತೀಗಷ್ಟೇ ಬಿಡುಗಡೆಗೊಂಡ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಮತ್ತೆ ನಾಲ್ಕನೇ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಆಗಿ ಪಡೆಯಲು ಅವಕಾಶ ಇಲ್ಲ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ ಶೇ. 20ರಷ್ಟು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ. ಅವರಿಗೆ ಈ ಡೋಸ್‌ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ಅದು ಅನಗತ್ಯ ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ. ಎನ್​.ಕೆ. ಅರೋರ ಸಲಹೆ ನೀಡಿದ್ದಾರೆ.

 ಕೋವಿಡ್‌ ಆತಂಕ: ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಚಿಂತನೆ ಇಲ್ಲ: ಹುಬ್ಬಳ್ಳಿಯಲ್ಲಿ ಸುಧಾಕರ್‌ ಸ್ಪಷ್ಟನೆ ಕೋವಿಡ್‌ ಆತಂಕ: ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಚಿಂತನೆ ಇಲ್ಲ: ಹುಬ್ಬಳ್ಳಿಯಲ್ಲಿ ಸುಧಾಕರ್‌ ಸ್ಪಷ್ಟನೆ

ಲಸಿಕಾಕರಣದ ಭಾಗವಾಗಿ ಕೋವಿನ್ ಪೋರ್ಟಲ್​ನಲ್ಲಿ ನಾಲ್ಕನೇ ಡೋಸ್ ಆಗಿ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಆಯ್ದುಕೊಳ್ಳಲು ಅವಕಾಶವಿಲ್ಲ. ಮತ್ತೊಂದು ಡೋಸ್ ಲಸಿಕೆ ಪಡೆಯುವುದರಿಂದ ದೇಹವು ಅದಕ್ಕೆ ಪೂರಕವಾಗಿ ಸ್ಪಂದಿಸುವುದಿಲ್ಲ. ಒಂದು ಲಸಿಕೆ ಪಡೆದ ನಂತರ ಆರು ತಿಂಗಳ ಬಳಿಕ ಮತ್ತೊಂದು ಲಸಿಕೆ ಹಾಕಿಸಿಕೊಳ್ಳಲು ಸೂಚಿಸಲಾಗುತ್ತದೆ. ಆದರೂ ಅದು ನಿರೀಕ್ಷೆಗಿಂತಲೂ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದಿದ್ದಾರೆ.

People who have received the 3rd dose should not receive nasal vaccine again: expert advice

ಮೊದಲ ಬೂಸ್ಟರ್ ಡೋಸ್‌ ಪ್ರಯೋಜನೆ ಏನು?

ಮೊದಲ ಬೂಸ್ಟರ್ ಡೋಸ್‌ ಎನ್ನಲಾಗುತ್ತಿರುವ ಈ ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಲಸಿಕೆ ಅತ್ಯಂತ ಪರಿಣಾಮ ಕಾರಿ ಎನ್ನಲಾಗುತ್ತದೆ ಎಂದು ರೋರ ತಿಳಿಸಿದ್ದಾರೆ. ಮೂದಿನಲ್ಲಿ ಲಸಿಕೆ ಹಾಕಿದಾಗ ಅದು ನೇರವಾಗಿ ಉಸಿರಾಟ ವ್ಯವಸ್ಥೆಯ ಪ್ರವೇಶ ಬಿಂದುವನ್ನೇ ತಲುಪುತ್ತದೆ. ಮೂಗು ಮತ್ತು ಬಾಯಿಯಲ್ಲಿ ನಿರೋಧಕ ಶಕ್ತಿ ಉಂಟಾಗುವುದರಿಂದ ವೈರಸ್ ಸುಲಭವಾಗಿ ದೇಹ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಈ ಲಸಿಕೆಯು ಕೋವಿಡ್ ವಿರುದ್ಧ ಹಾಗೂ ಇನ್ನಿತರ ಉಸಿರಾಟ ವ್ಯವಸ್ಥೆ ಮೇಲೆ ದಾಳಿ ಮಾಡುವ ವೈರಸ್ ವಿರುದ್ಧವು ಹೋರಾಡುತ್ತದೆ ಎಂದರು.

ಸದ್ಯ ರ18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಮೂಗಿನ ಮೂಲಕ ಹಾಕುವ ಲಸಿಕೆ ತೆಗೆದುಕೊಳ್ಳಬಹುದು. ಮೂಗಿನ ಎರಡೂ ಹೊಳ್ಳೆಗಳಿಗೆ ತಲಾ ನಾಲ್ಕರಂತೆ ಎಂಟು ಬಿಂದು ಹಾಕಲಾಗುತ್ತದೆ. ಇದರಿಂದ ದೇಹದಲ್ಲಿ 0.5 ಎಂ.ಎಲ್. ಲಸಿಕೆ ಪ್ರವೇಶವಾಗುತ್ತದೆ. ಸ್ವಲ್ಪ ಹೊತ್ತಿನ ಮಟ್ಟಿಗೆ ಮೂಗು ಬ್ಲಾಕ್ ಆಗಬಹುದು ಅಷ್ಟೆ. ಉಳಿದಂತೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

ಈ ಲಸಿಕೆ ಹಾಕಿಸಿಕೊಂಡ ಬಳಿಕ ಸುಮಾರು ಅರ್ಧಗಂಟೆವರೆಗೆ ಲಸಿಕಾ ಕೇಂದ್ರದಲ್ಲಿ ಉಳಿಯಬೇಕಾಗುತ್ತದೆ. ಏನಾದರೂ ತೀವ್ರತರದ ಅಡ್ಡಪರಿಣಾಮ ಕಂಡುಬಂದಲ್ಲಿ ಕಾಳಜಿ ವಹಿಸಬಹುದಾಗಿದೆ. ಈ ಮೂಗಿನ ಮೂಲಕ ನೀಡುವ ಲಸಿಕೆಗೆ ಭಾರತ್ ಬಯೋಟೆಕ್ ಕಂಪನಿ ಮಂಗಳವಾರವಷ್ಟೇ ದರ ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ 800ರೂ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂ. ದರ ಇದೆ.

English summary
People who have received the 3rd dose should not receive nasal vaccine again: expert advice, Expert advice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X