ಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆ

ಬೆಂಗಳೂರು, ಸೆಪ್ಟೆಂಬರ್ 03: ಉತ್ತರ ಪ್ರದೇಶದಲ್ಲಿ ಹಲವು ಜನ ಸ್ವಯಂ ಪ್ರೇರಿತರಾಗಿ ಜೈಲು ಸೇರುತ್ತಿದ್ದಾರೆ. ನಮ್ಮನ್ನು ಜೈಲಿಗೆ ಹಾಕಿ ಎಂದು ಪೊಲೀಸ್ ಇಲಾಖೆಗೆ ಮನವಿ ಪತ್ರಗಳನ್ನೂ ಬರೆಯುತ್ತಿದ್ದಾರೆ.

ಹೌದು, ದಿಢೀರ್‌ ಅನೆ ಉತ್ತರ ಪ್ರದೇಶದಲ್ಲಿ ಹೀಗೊಂದು ಪದ್ಧತಿ ಪ್ರಾರಂಭವಾಗಿದೆ. ಯಾರ ಜಾತಕದಲ್ಲಿ ಜೈಲು ಯೋಗವಿರುತ್ತದೆಯೋ ಅವರು ಏನೂ ತಪ್ಪು ಮಾಡಿರದಿದ್ದರೂ ಸಹ ತವಾಗಿಯೇ ಬಂದು ಜೈಲುವಾಸ ಅನುಭವಿಸುತ್ತಿದ್ದಾರೆ.

ಜಾತಕದಲ್ಲಿ ಜೈಲು ವಾಸ ಇದ್ದವರು ಏನಾದರೂ ತಪ್ಪು ಮಾಡಿ ಜೈಲಿಗೆ ಹೋಗುವ ಬದಲಿಗೆ, ಸುಮ್ಮನೆ ಒಂದು ದಿನ ಜೈಲಿಗೆ ಹೋಗಿ ಜಾತಕದ ದೋಷ ಕಳೆದುಕೊಳ್ಳುತ್ತಿದ್ದಾರೆ.

People deliberately going to prison in Uttar Pradesh

ಕೆಲವು ದಿನಗಳ ಹಿಂದೆ ಉದ್ಯಮಿಯೊಬ್ಬರು ಮೊದಲ ಬಾರಿಗೆ ಹೀಗೆ ಮಾಡಿದ್ದರು. ತಮ್ಮ ಜಾತಕದ ಪ್ರತಿ ಲಗತ್ತಿಸಿ ಪೊಲೀಸ್ ಉನ್ನತಾಧಿಕಾರಿಗೆ ಪತ್ರ ಬರೆದು ಒಂದು ದಿನ ಸೆರೆವಾಸ ಅನುಭವಿಸಲು ಅವಕಾಶ ಕೊಡಲು ಕೇಳಿಕೊಂಡಿದ್ದರು ಅಂತೆಯೇ ಅವರಿಗೆ ಅವಕಾಶ ಕೊಡಲಾಗಿತ್ತು. ಅವರು ಒಂದು ದಿನ ಸೆರೆವಾಸ ಅನುಭವಿಸಿ ಜಾತಕದ ದೋಷ ಕಳೆದುಕೊಂಡರು.

ಉದ್ಯಮಿ ಹೀಗೆ ಮಾಡಿದ ಬೆನ್ನಲ್ಲೆ ಇದೇ ರೀತಿಯ ಹಲವು ಮನವಿಗಳು ಪೊಲೀಸ್ ಇಲಾಖೆಗೆ ಬರುತ್ತಿವೆ. ನಮ್ಮ ಜಾತಕದಲ್ಲೂ ಜೂಲುವಾಸವಿದೆ. ಏನಾದರು ತಪ್ಪು ಮಾಡಿ ಜೈಲು ಸೇರುವ ಮುನ್ನಾ ನೀವೆ ಒಂದು ದಿನ ನಮ್ಮನ್ನು ಜೈಲಿಗೆ ಹಾಕಿ ದೋಷ ಕಳೆದುಕೊಳ್ಳಲು ಸಹಾಯ ಮಾಡಿ ಎಂದು ಹಲವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಇಂತಹಾ ಮನವಿಗಳನ್ನು ಪುರಸ್ಕರಿಸಲು ಜಿಲ್ಲಾಡಳಿತ ಸ್ಥಳೀಯ ಪೊಲೀಸರಿಗೆ ತಿಳಿಸಿದೆ. ಲಕ್ನೋ ಒಂದರಲ್ಲೇ ಕೆಲವೇ ತಿಂಗಳಲ್ಲಿ ಈ ರೀತಿಯ 24 ಮನವಿಗಳು ಬಂದಿವೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+