ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್‌ಡೆಸ್ಕ್ ಖರೀದಿ ಒಪ್ಪಂದ ಕೈಬಿಟ್ಟ ಪ್ರೋಸುಸ್; ಯಾರಿಗೆ ನಷ್ಟ?

|
Google Oneindia Kannada News

ನವದೆಹಲಿ, ಅ. 3: ಭಾರತದ ಅತಿದೊಡ್ಡ ಪೇಮೆಂಟ್ ಅಗ್ರಿಗೇಟರ್ ಬಿಲ್‌ಡೆಸ್ಕ್ ಅನ್ನು ಖರೀದಿಸುವ ಪೇಯು ಪೇಮೆಂಟ್ಸ್ ಸಂಸ್ಥೆಯ ಪ್ರಯತ್ನ ಮಧ್ಯದಲ್ಲೇ ನಿಂತುಹೋಗಿದೆ. ಬಿಲ್‌ಡೆಸ್ಕ್ ಸಂಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ತೆರೆ ಎಳೆಯಲಾಗಿರುವ ವಿಚಾರವನ್ನು ಪೇಯು ಪೇಮೆಂಟ್ಸ್ ಕಂಪನಿಯ ಮಾತೃ ಸಂಸ್ಥೆ ಪ್ರೋಸುಸ್ ಎನ್‌ವಿ ಇಂದು ಸೋಮವಾರ ಹೇಳಿದೆ.

ಪ್ರೋಸುಸ್ ಎನ್‌ವಿ ನೆದರ್‌ಲೆಂಡ್ಸ್ ದೇಶದ ಕಂಪನಿ. ಪೇಯು ಪೇಮೆಂಟ್ಸ್‌ನಿಂದ ಬಿಲ್‌ಡೆಸ್ಕ್ ಖರೀದಿ ಆಗುತ್ತದೆ ಎಂದು ಪ್ರೋಸುಸ್ ಎನ್‌ವಿ 2021 ಆಗಸ್ಟ್ 31ರಂದು ಹೇಳಿತ್ತು. 2022 ಸೆಪ್ಟೆಂಬರ್ 5ರಂದು ಭಾರತೀಯ ಸ್ಪರ್ಧಾ ಆಯೋಗದಿಂದ (ಸಿಸಿಐ) ಪೇಯು ಪೇಮೆಂಟ್ಸ್ ಅನುಮೋದನೆ ಕೂಡ ಪಡೆದುಕೊಂಡಿತ್ತು.

ಸೆಪ್ಟೆಂಬರ್‌ನಲ್ಲಿ 678 ಕೋಟಿಗೆ ಹೆಚ್ಚಿದ ಯುಪಿಐ ವಹಿವಾಟುಗಳುಸೆಪ್ಟೆಂಬರ್‌ನಲ್ಲಿ 678 ಕೋಟಿಗೆ ಹೆಚ್ಚಿದ ಯುಪಿಐ ವಹಿವಾಟುಗಳು

ಆದರೆ, 4.7 ಬಿಲಿಯನ್ ಡಾಲರ್ (38 ಸಾವಿರ ಕೋಟಿ ರೂ) ಮೊತ್ತದ ಈ ಒಪ್ಪಂದ ಯಾಕೆ ರದ್ದಾಯಿತು ಎಂಬುದು ಸ್ಪಷ್ಟವಾಗಿಲ್ಲ. ಪ್ರೂಸುಸ್ ಸಂಸ್ಥೆ ಕೂಡ ಈ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿಲ್ಲ. ಕೆಲ ಷರತ್ತುಗಳು ಈಡೇರದ ಕಾರಣ ಒಪ್ಪಂದ ರದ್ದಾಗಿದೆ ಎಂದಷ್ಟೇ ತಿಳಿಸಿದೆ. ಆ ಷರತ್ತುಗಳು ಯಾವುದು ಎಂಬುದು ಗೊತ್ತಾಗಿಲ್ಲ.

PayUs Acquisition of Billdesk Is Halted After Prosus Terminates The Agreement

"2022 ಸೆಪ್ಟೆಂಬರ್ 5ರಂದು ಸಿಸಿಐನಿಂದ ಪೇಯು ಅನುಮೋದನೆ ಪಡೆಯಿತು. ಅಂತಿಮ ಗಡುವಾದ 2022 ಸೆಪ್ಟೆಂಬರ್ 30ರೊಳಗೆ ಕೆಲ ಷರತ್ತುಗಳು ಪೂರೈಸದ ಕಾರಣ ನಿಯಮದ ಪ್ರಕಾರ ಒಪ್ಪಂದ ರದ್ದಾಗಿದೆ. ಹೀಗಾಗಿ, ಖರೀದಿ ಮಾಡಲಾಗುತ್ತಿಲ್ಲ," ಎಂದು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಪ್ರೋಸುಸ್ ಎನ್‌ವಿ ಹೇಳಿಕೆ ನೀಡಿದೆ.

ವಿಪ್ರೋ, ಇನ್ಫೋಸಿಸ್‌ನಲ್ಲಿ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು!ವಿಪ್ರೋ, ಇನ್ಫೋಸಿಸ್‌ನಲ್ಲಿ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು!

ಭಾರತದ ಅತಿದೊಡ್ಡ ಪೇಮೆಂಟ್ ಗೇಟ್‌ವೇ

ಭಾರತದಲ್ಲಿರುವ ಆನ್‌ಲೈನ್ ಪೇಮೆಂಟ್ ಕ್ಷೇತ್ರದ ಮಾರುಕಟ್ಟೆಯಲ್ಲಿ ಬಿಲ್‌ಡೆಸ್ಕ್ ಶೇ. 25-30ರಷ್ಟು ಪಾಲು ಹೊಂದಿದೆ. ರೇಜರ್ ಪೇ ಶೇ. 15-20ರಷ್ಟು ಮಾರ್ಕೆಟ್ ಶೇರ್ ಹೊಂದಿದೆ. ಇನ್ನು, ನೆದರ್‌ಲೆಂಡ್ಸ್ ಮೂಲದ ಪೇಯು ಶೇ. 10-15ರಷ್ಟು ಸ್ವಾಮ್ಯತೆ ಹೊಂದಿದೆ.

ಬಿಲ್‌ಡೆಸ್ಕ್ ಮತ್ತು ಪೇಯು ಎರಡೂ ಕೂಡ ಒಟ್ಟಾರೆ ಒಂದು ವರ್ಷದಲ್ಲಿ 147 ಬಿಲಿಯನ್ ಮೊತ್ತದಷ್ಟು ಹಣದ ವಹಿವಾಟು (ಟಿಪಿವಿ) ಮಾಡಿವೆ. ಎರಡೂ ಸಂಸ್ಥೆಗಳು 2021-22ರ ವರ್ಷದಲ್ಲಿ 752 ಬಿಲಿಯನ್ ಡಾಲರ್‌ನಷ್ಟು ಒಟ್ಟಾರೆ ಆದಾಯ ಗಳಿಸಿವೆ.

PayUs Acquisition of Billdesk Is Halted After Prosus Terminates The Agreement

ಇವಲ್ಲದೇ ಸಿಸಿ ಅವೆನ್ಯೂಸ್, ಪೇಟಿಎಂ, ಪೈನ್ ಲ್ಯಾಬ್ಸ್ ಮೊದಲಾದ ಪೇಮೆಂಟ್ ಅಗ್ರಿಗೇಟರ್‌ಗಳಿವೆ. ಜೊತೆಗೆ, ಫೋನ್‌ಪೆ, ಎಂಸ್ವೈಪ್ ಇತ್ಯಾದಿ ಆಫ್‌ಲೈನ್ ಪೇಮೆಂಟ್ ಸಂಸ್ಥೆಗಳೂ ಕೂಡ ಆನ್‌ಲೈನ್ ಪೇಮೆಂಟ್ ಗೇಟ್‌ವೇಗೆ ತೆರೆದುಕೊಳ್ಳುತ್ತಿವೆ.

ಸರಕಾರಿ ಸಂಸ್ಥೆಗಳ ಪೇಮೆಂಟ್ ವ್ಯವಸ್ಥೆ, ಬ್ಯಾಂಕಿಂಗ್, ಇನ್ಷೂರೆನ್ಸ್, ಫೈನಾನ್ಷಿಯಲ್ ಸರ್ವಿಸ್ ವಿಭಾಗಗಳಲ್ಲಿ ಬಿಲ್‌ಡೆಸ್ಕ್ ಸೇವೆ ಹೆಚ್ಚು ಚಾಲ್ತಿಯಲ್ಲಿದೆ. ಇಂಟರ್ನೆಟ್ ಕಂಪನಿಗಳ ಪೇಮೆಂಟ್ ವ್ಯವಸ್ಥೆಯನ್ನು ಪೇಯು ನೋಡಿಕೊಳ್ಳುತ್ತದೆ.

ಒಂದು ವೇಳೆ ಪೇಯು ಮತ್ತು ಬಿಲ್‌ಡೆಸ್ಕ್ ಒಪ್ಪಂದ ಈಡೇರಿದ್ದಲ್ಲಿ ಭಾರತದ ಪೇಮೆಂಟ್ ವ್ಯವಸ್ಥೆಯಲ್ಲಿ ಪ್ರೋಸುಸ್ ಎನ್‌ವಿ ಪ್ರಾಬಲ್ಯ ಗಟ್ಟಿಯಾಗುತ್ತಿತ್ತು. ಅಲ್ಲದೇ ಭಾರತದಲ್ಲಿ ಪ್ರೋಸುಸ್ ಹೂಡಿದ ಬಂಡವಾಳದ ಪ್ರಮಾಣ 10 ಬಿಲಿಯನ್ ಡಾಲರ್‌ಗೆ (81 ಸಾವಿರ ಕೋಟಿ ರೂ) ಏರುತ್ತಿತ್ತು.

ಬಿಲ್‌ಡೆಸ್ಕ್‌ನ ಮೂಲ ಹೂಡಿಕೆದಾರರಿಗೆ ಗೊಂದಲ

ಸುಮಾರು 170 ಪೇಮೆಂಟ್ ವಿಧಾನಗಳಿಗೆ ಅನುವು ಮಾಡಿಕೊಡುವ ಬಿಲ್‌ಡೆಸ್ಕ್ ಸ್ಥಾಪನೆಯಾಗಿದ್ದು 2000ರಲ್ಲಿ. ಎಂಎನ್ ಶ್ರೀನಿವಾಸು, ಅಜಯ್ ಕೌಶಲ್ ಮತ್ತು ಕಾರ್ತಿಕ್ ಗಣಪತಿ ಈ ಸಂಸ್ಥೆಯ ಸಂಸ್ಥಾಪಕರು. ಪ್ರೂಸುಸ್‌ನ ಪೇಯು ಸಂಸ್ಥೆಗೆ ಮಾರಾಟವಾಗುವ ನಿರೀಕ್ಷೆಯಲ್ಲಿದ್ದ ಬಿಲ್‌ಡೆಸ್ಕ್‌ಗೆ ಒಂದು ರೀತಿಯಲ್ಲಿ ನಿರಾಸೆಯಾಗಿದೆ. ನಿರಾಸೆಯಾಗಲು ಕಾರಣವೂ ಇದೆ.

ಬಿಲ್‌ಡೆಸ್ಕ್ ಆರಂಭಗೊಂಡು ಎರಡು ದಶಕಗಳೇ ಆಗಿವೆ. ಅದರ ಹೂಡಿಕೆದಾರರಿಗೆ ಸಂಸ್ಥೆಯ ಮಾರುಕಟ್ಟೆ ಮೊತ್ತ ಎಷ್ಟೆಂಬುದು ನಿರ್ದಿಷ್ಟವಾಗಿಲ್ಲ. ಬಿಲ್‌ಡೆಸ್ಕ್‌ನ ಸಹ-ಸಂಸ್ಥಾಪಕ ಶ್ರೀನಿವಾಸು ಕಳೆದ ವರ್ಷ ಈ ಸಮಸ್ಯೆ ಬಗ್ಗೆ ಮಾತನಾಡಿದ್ದರು. ಆಗ ಬಿಲ್‌ಡೆಸ್ಕ್ ಅನ್ನು ಪೇಯು ಖರೀದಿಸುವ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸು, "ಕೆಲ ಹೂಡಿಕೆದಾರರು 15-16 ವರ್ಷಗಳಿಂದಲೂ ನಮ್ಮ ಜೊತೆ ಇದ್ದಾರೆ. ಹೂಡಿಕೆದಾರರಿಗೆ ಹಣ ಪರಿವರ್ತಿಸುವ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಐಪಿಒಗೆ ತೆರೆದುಕೊಳ್ಳಲು ಎಣಿಸಿದ್ದೆವು. ಆಗ ಪ್ರೋಸುಸ್‌ನವರು ನಮ್ಮನ್ನು ಸಂಪರ್ಕಿಸಿದರು" ಎಂದು ಹೇಳಿದ್ದರು.

ಪ್ರೋಸುಸ್‌ನ ಬಂಡವಾಳ ಜೊತೆಗೆ ಬಿಸಿನೆಸ್ ತಂತ್ರವೂ ಉತ್ತಮವಾಗಿದೆ. ಬಿಲ್‌ಡೆಸ್ಕ್‌ ಬೆಳವಣಿಗೆಗೆ ಸರಿಯಾದ ಪುಷ್ಟಿ ಸಿಗುತ್ತಿತ್ತು. ಹಾಗೆಯೇ ಬಹಳ ಕಾಲದಿಂದ ಇರುವ ಬಿಲ್‌ಡೆಸ್ಕ್‌ನ ಷೇರುದಾರರಿಗೆ ಸರಿಯಾದ ನ್ಯಾಯ ಸಿಗುತ್ತದೆ ಎಂದು ಬಿಲ್‌ಡೆಸ್ಕ್ ಸಂಸ್ಥಾಪಕರು ತಿಳಿಸಿದ್ದರು.

ಈಗ ಪೇಯು ಮತ್ತು ಬಿಲ್‌ಡೆಸ್ಕ್ ಒಪ್ಪಂದ ಮುರಿದುಬಿದ್ದಿರುವುದು ಬಿಲ್‌ಡೆಸ್ಕ್‌ನ ಹೂಡಿಕೆದಾರರಿಗೆ ತುಸು ಗೊಂದಲಕ್ಕೆ ಕೆಡವಿದೆ.

(ಒನ್ಇಂಡಿಯಾ ಸುದ್ದಿ)

English summary
Prosus NV has terminated the agreement of PayU's acquisition to buy India's biggest online payment aggregator Billdesk
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X