ಭಯೋತ್ಪಾದಕರಿಗಿಂತ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ರಸ್ತೆ ಗುಂಡಿಗಳು

ಬೆಂಗಳೂರು, ಜು.15: ದೇಶದಲ್ಲಿ ಪ್ರತಿ ವರ್ಷ ಉಗ್ರರು ನಡೆಸುವ ವಿದ್ವಂಸಕ ಕೃತ್ಯಗಳಿಗಿಂತ ಹೆಚ್ಚಾಗಿ ಹದಗೆಟ್ಟ ರಸ್ತೆ ಗುಂಡಿಗಳಿಗೆ ಬಿದ್ದು ಜನರು ಮೃತಪಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಇದು ಆಶ್ಚರ್ಯವಾದರೂ ಸತ್ಯ, ದೇಶದ ಮಹಾನಗರ ಪಾಲಿಕೆಗಳು, ನಗರ ಸಭೆಗಳು ಸೇರಿದಂತೆ ಎಲ್ಲಾ ನಗರಗಳ ಸ್ಥಳೀಯ ಸಂಸ್ಥೆಗಳಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ತಾಂಡವವಾಡುತ್ತಿರುವ ಪಕ್ಷಪಾತತನದಿಂದಾಗಿ ಲಕ್ಷಾಂತರ ಕೋಟಿ ರೂ,ಗಳನ್ನು ಸುರಿದರೂ ದೇಶದ ನಗರ ಪ್ರದೇಶಗಳಲ್ಲಿ ರಸ್ತೆಗಳು ಹದಗೆಟ್ಟು ಆ ರಸ್ತೆಗಳಲ್ಲಿನ ರಸ್ತೆಗುಂಡಿಗಳಲ್ಲಿ ಬಿದ್ದು ಜನರು ಮೃತಪಡುತ್ತಿರುವುದು ಆತಂಕ ಮೂಡಿಸಿದೆ.

2017ರಲ್ಲಿ ದೇಶದಲ್ಲಿ ಒಟ್ಟು 3597 ಮಂದಿ ಹದಗೆಟ್ಟ ರಸ್ತೆಗುಂಡಿಗಳಲ್ಲಿ ಬಿದ್ದು, ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಪ್ರತಿನಿತ್ಯ 10 ಜನರು ಇಂತಹ ರಸ್ತೆಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯೊಂದರಿಂದ ಬಹಿರಂಗಗೊಂಡಿದೆ.2016ಕ್ಕೆ ಹೋಲಿಸಿದರೆ ಶೇ.50ರರಷ್ಟು ಹೆಚ್ಚಳವಾಗಿದೆ.

Patholes claem one life in every 10 minutes!!

ಮಹಾರಾಷ್ಟ್ರವೊಂದರಲ್ಲೆ 726 ಜನರು 2017ರಲ್ಲಿ ಹದಗೆಟ್ಟ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದರೆ 2016ರಲ್ಲಿ 350ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯ ನಕ್ಸಲ್‌ ದಾಳಿಗಳು ಮತ್ತಿತರೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ 2017ರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 803 ಇದಕ್ಕೆ ಹೋಲಿಸಿದರೆ ರಸ್ತೆ ಗುಂಡಿಗಳಿಗೆ ಬಿದ್ದು ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗಿದೆ.

ಮಹಾನಗರ ಪಾಲಿಕೆ ಮತ್ತಿತರೆ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಅದರಿಂದಾಗಿ ರಸ್ತೆಗಳ ಗುಣಮಟ್ಟ ಕುಸಿಯುತ್ತಿರುವುದು ಇದರ ಜತೆಗೆ ರಸ್ತೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್‌ ರಹಿತ ಚಾಲನೆ ಮತ್ತಿತರೆ ಕಾರಣಗಳಿಂದ ರಸ್ತೆಯಲ್ಲಿ ಬಿದ್ದು ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

2016ರಲ್ಲಿ 4550 ಜನ ಸಾವನ್ನಪ್ಪಿದ್ದರೆ 2017ರಲ್ಲಿ 3878 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರದಿ ಬೆನ್ನಲ್ಲೇ ಕೇಂದ್ರ ಭೂಸಾರಿಗೆ ಇಲಾಖೆ ಹೇಳಿಕೆಯೊಂದನ್ನು ನೀಡಿದ್ದು ಅವೈಜಕ್ಞಾನಿಕ ರಸ್ತೆಗಳ ನಿರ್ಮಾಣ ಹಾಗೂ ರಸ್ತೆಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಸ್ತೆಗಳ ವಿನ್ಯಾಸದಲ್ಲಿ ತಪ್ಪು ಎಸಗಿರುವ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದ ಮೇಲೆ ಪ್ರಕರಣ ಆರೋಪ ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+