ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ

ತಿರುವನಂತಪುರಂ, ಜುಲೈ 03 : ಒಬ್ಬ ಅಮಾಯಕ ಹೆಂಗಸಿನ ಅಸಹಾಯಕತೆಯನ್ನು ಸಮಾಜದಲ್ಲಿ 'ಉನ್ನತ' ಸ್ಥಾನದಲ್ಲಿರುವವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಮದುವೆಯಾದ ಮಹಿಳೆಯ ಕರುಣಾಜನಕ ಕಥೆಯೇ ಸಾಕ್ಷಿ.

ಹೆಂಗಸಿನ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡವರು ಮತ್ತಾರೂ ಅಲ್ಲ, ಕೇರಳದ ಮಲಾಕಾರ ಆರ್ಥೋಡಾಕ್ಸ್ ಚರ್ಚ್ ನ ಪಾದ್ರಿಗಳು. ಆಕೆಯನ್ನು ವರ್ಷಗಟ್ಟಲೆ ಲೈಂಗಿಕವಾಗಿ ದುರ್ಬಳಸಿಕೊಂಡು 'ಘನಂದಾರಿ' ಕೆಲಸ ಮಾಡಿದ ಐವರು ಪಾದ್ರಿಗಳ ವಿರುದ್ಧ ಕೇಸನ್ನು ಜಡಿಯಲಾಗಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಪೊಲೀಸರಿಗೆ ನೀಡಿರುವ ಹೇಳಿಕೆಯ ಒಂದಿಷ್ಟು ಭಾಗವನ್ನು ಮಾತೃಭೂಮಿ ನ್ಯೂಸ್ ಪ್ರಕಟಿಸಿದ್ದು, ಅದರಲ್ಲಿ ಈ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪಾದ್ರಿಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ದಶಕಗಟ್ಟಲೆ ಆಕೆಯ ಮೇಲೆ ಪಾದ್ರಿಗಳು ಅತ್ಯಾಚಾರ ಎಸಗಿದ್ದಾರೆ.

ಈ ಪ್ರಕರಣ ಕೇರಳದಾದ್ಯಂದ ಭಾರೀ ವಿವಾದದ ಬಿರುಗಾಳಿ ಎಬ್ಬಿಸಿದ್ದು, ಧಾರ್ಮಿಕ ನಂಬಿಕೆಯ ತಳಹದಿಯೇ ಅಲ್ಲಾಡುವಂತೆ ಮಾಡಿದೆ. ಎರಡು ತಿಂಗಳ ಹಿಂದೆಯೇ ಮಹಿಳೆಯ ಗಂಡ ಚರ್ಚ್ ಗೆ ಈ ಬಗ್ಗೆ ದೂರು ನೀಡಿದ್ದರು. ಆದರೆ ಈ ದೂರಿಗೆ ನ್ಯಾಯಾಲಯದಲ್ಲಿ ಮಾನ್ಯತೆ ಸಿಕ್ಕುವುದು ಅನುಮಾನ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮಹಿಳೆಯ ಗಂಡ ನೀಡಿರುವ ದೂರಿಗೆ ಯಾವುದೇ ಮಾನ್ಯತೆ ಇಲ್ಲದಿದ್ದರೂ, ಸಂತ್ರಸ್ತ ಮಹಿಳೆ ಕ್ರೈಂ ಬ್ರಾಂಚ್ ಪೊಲೀಸರಿಗೆ ನೀಡಿರುವ ಹೇಳಿಕೆ ಮತ್ತು ಆಕೆ ಚರ್ಚ್ ನಲ್ಲಿ ನೀಡಿದ್ದ ತಪ್ಪೊಪ್ಪಿಗೆಯನ್ನು ಬಳಸಿಕೊಂಡು ಆಕೆಗೆ ಬೆದರಿಕೆ ಒಡ್ಡಿದ್ದರ ಆಧಾರದ ಮೇಲೆ ಪಾದ್ರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಆ ಐವರು ಪಾದ್ರಿಗಳು ಈ ಮಹಿಳೆಯ ಮೇಲೆ ಮೇಲಿಂದ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಲೈಂಗಿಕವಾಗಿ ದುರ್ಬಳಸಿಕೊಂಡಿರುವ ರೀತಿ ಹೃದಯವಿದ್ರಾವಕವಾಗಿದೆ. ಅದರ ಕಥನ ಇಲ್ಲಿದೆ.

ಸ್ನೇಹ ದುರ್ಬಳಸಿಕೊಂಡ ದುರುಳ ಪಾದ್ರಿ

ಸ್ನೇಹ ದುರ್ಬಳಸಿಕೊಂಡ ದುರುಳ ಪಾದ್ರಿ

ಸಂತ್ರಸ್ತ ಮಹಿಳೆಗೆ ತನ್ನ ಮದುವೆಗೂ ಮುನ್ನ ಫಾದರ್ ಅಬ್ರಹಾಂ ವರ್ಗೀಸ್ ಎಂಬುವವರ ಜೊತೆ 1999ರಿಂದಲೇ ಸಂಬಂಧವಿತ್ತು. ಆಗ ಮಹಿಳೆ ಅಪ್ರಾಪ್ತೆಯಾಗಿದ್ದರೆ, ಅಬ್ರಹಾಂ ಪಾದ್ರಿಯಾಗಲು ಅಧ್ಯಯನ ನಡೆಸುತ್ತಿದ್ದ. ಇಬ್ಬರಿಗೂ ತುಂಬು ಯೌವನ, ಸ್ನೇಹ ಕುದುರಿದೆ, ಜೊತೆಗೆ ದೈಹಿಕ ಸಂಬಂಧವೂ ಆರಂಭವಾಗಿದೆ. ನಂತರ, ಪಾದ್ರಿ ಸಂತ್ರಸ್ತ ಮಹಿಳೆಗೆ ಕೈಕೊಟ್ಟು ಬೇರೆ ಯುವತಿಯನ್ನು ವಿವಾಹವಾದ. ಆದರೆ, ಮದುವೆಯ ನಂತರವೂ ತಮ್ಮ ಸಂಬಂಧವನ್ನು ಮುಂದುವರಿಸಬೇಕೆಂದು ದುಂಬಾಲು ಬಿದ್ದ. ಈ ನಡುವೆ ಆ ಮಹಿಳೆಗೂ ವಿವಾಹವಾಯಿತು. ಇಷ್ಟಾದರೂ ಪಾದ್ರಿ ಸುಮ್ಮನಿರಬೇಕಲ್ಲ. ತಮ್ಮಿಬ್ಬರ ನಡುವಿನ ಸ್ನೇಹ ಎಲ್ಲಿ ಹೊರಗೆ ಬಂದೀತೆಂದು ಆ ಮಹಿಳೆಯೂ ಲೈಂಗಿಕ ದೌರ್ಜನ್ಯಕ್ಕೊಳಗುತ್ತಲೇ ಬಂದರು.

ಎರಡನೇ ಪಾದ್ರಿಯಿಂದಲೂ ಲೈಂಗಿಕ ದೌರ್ಜನ್ಯ

ಎರಡನೇ ಪಾದ್ರಿಯಿಂದಲೂ ಲೈಂಗಿಕ ದೌರ್ಜನ್ಯ

ಅವರಿಬ್ಬರ ಸ್ನೇಹಕ್ಕೆ ಹತ್ತು ವರ್ಷಗಳಾದ ನಂತರ 2009ರಲ್ಲಿ ತನ್ನ ಮಗುವಿನ ದೀಕ್ಷಾಸ್ನಾನದ ಸಂದರ್ಭದಲ್ಲಿ ಅಬ್ರಹಾಂ ವರ್ಗೀಸ್ ಜೊತೆಗಿನ ತಮ್ಮ ದೈಹಿಕ ಸಂಬಂಧದ ಬಗ್ಗೆ ಮತ್ತೊಬ್ಬ ಪಾದ್ರಿಯೆದಿರು ಮಹಿಳೆ ತಪ್ಪೊಪ್ಪಿಕೊಂಡರು. ಅದು ಅವರು ಮಾಡಿದ ಎರಡನೇ ದೊಡ್ಡ ತಪ್ಪು. ಆ ಮಹಿಳೆಗೆ ಸಾಂತ್ವನ ಹೇಳುವ ಬದಲು ಆ ಪಾದ್ರಿ ಮಾಡಿದ್ದೇನು ಗೊತ್ತಾ? ಈ ಸಂಗತಿಯನ್ನು ಬಹಿರಂಗ ಪಡಿಸಬಾರದೆಂದಿದ್ದರೆ ತನ್ನೊಂದಿಗೂ ಲೈಂಗಿಕ ಸಂಬಂಧ ಬಳಸಬೇಕೆಂದು ಒತ್ತಾಯ ಮಾಡಲು ಆರಂಭಿಸಿದ. ಅನ್ಯ ಮಾರ್ಗವಿಲ್ಲದೆ, ಆ ಸಂತ್ರಸ್ತ ಮಹಿಳೆ ಎರಡನೇ ಪಾದ್ರಿಯೊಂದಿಗೂ ದೌರ್ಜನ್ಯಕ್ಕೊಳಗಾಗಿದ್ದಾರೆ.

ಕೌನ್ಸೆಲಿಂಗ್ ಬದಲು ಪಾದ್ರಿ ಮಾಡಿದ್ದೇನು?

ಕೌನ್ಸೆಲಿಂಗ್ ಬದಲು ಪಾದ್ರಿ ಮಾಡಿದ್ದೇನು?

ಈ ಎಲ್ಲ ಸಂಗತಿಯನ್ನು ತನ್ನ ಮತ್ತೊಬ್ಬ ಸ್ನೇಹಿತನಾಗಿದ್ದ ಫಾದರ್ ಜಾಬ್ ಮ್ಯಾಥ್ಯೂ ಜೊತೆಗೆ ಅಮಾಯಕ ಹೆಂಗಸು ಹೇಳಿಕೊಂಡಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ದೂರು ನೀಡಿದಂತೆ ಕಂಡುಬಂದಿಲ್ಲ. ಆದರೆ, ಅವರನ್ನು ಕೌನ್ಸೆಲಿಂಗ್ ಗೆಂದು ಮತ್ತೊಬ್ಬ ಪಾದ್ರಿಯ ಬಳಿಗೆ ಕಳಿಸಲಾಗಿದೆ. ಆಕೆಯ ಕಥೆಯನ್ನೆಲ್ಲ ಕೇಳಿದ ಆತ, ಪರಿಹಾರ ದೊರಕಿಸಿಕೊಡುವ ಬದಲು, ಕೌನ್ಸೆಲಿಂಗ್ ಮಾಡುತ್ತಲೇ ಆ ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡಿದ್ದಾನೆ. ಅವನ ವಿರುದ್ಧವೂ ದೂರು ದಾಖಲಾಗಿದೆ.

ಫೈವ್ ಸ್ಟಾರ್ ಹೋಟೆಲಲ್ಲಿ ಪಾದ್ರಿಯಿಂದ ದೌರ್ಜನ್ಯ

ಫೈವ್ ಸ್ಟಾರ್ ಹೋಟೆಲಲ್ಲಿ ಪಾದ್ರಿಯಿಂದ ದೌರ್ಜನ್ಯ

ಇಷ್ಟು ಸಾಲದೆಂಬಂತೆ, 2016ರಿಂದೀಚೆಗೆ ಫೈವ್ ಸ್ಟಾರ್ ಹೋಟೆಲುಗಳಲ್ಲಿ ರೂಂ ಬುಕ್ ಮಾಡಲು ಮಹಿಳೆಗೆ ಹೇಳಿ, ಅಲ್ಲಿಯೂ ಆಕೆಯನ್ನು ಮುಕ್ಕಿದ್ದಾನೆ ದುರುಳ ಪಾದ್ರಿ. ಆತನ ಲೈಂಗಿಕ ಹಪಾಹಪಿಗೆ ಬೇಸತ್ತು ಹೋದ ಮಹಿಳೆ, ಫೈವ್ ಸ್ಟಾರ್ ಹೋಟೆಲುಗಳ ರೂಂ ಬುಕ್ ಮಾಡಲು ಹಣವಿಲ್ಲದೆ ಮನೆಯವರಿಗೆ ಹೇಳದಂತೆ, ಅವರಿವರಿಂದ ಹಣ ಇಸಿದುಕೊಳ್ಳಲು ಆರಂಭಿಸಿದ್ದಾಳೆ. ಕಡೆಗೆ ಹಣ ಕದಿಯಬೇಕಾಗಿ ಬಂದಿದೆ. ಇದೀಗ, ಅಬ್ರಹಾಂ ವರ್ಗೀಸ್, ಜಾಬ್ ಮ್ಯಾಥ್ಯೂ, ಜಾನ್ಸನ್ ಮ್ಯಾಥ್ಯೂ ಮತ್ತು ಜೈಸ್ ಜಾರ್ಜ್ ವಿರುದ್ಧ ಅತ್ಯಾಚಾರವೆಸಗಿದ, ಲೈಂಗಿಕ ದೌರ್ಜನ್ಯ ಎಸಗಿದ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+