ಪಂಜಾಬಿನ ಪಠಾಣ್ ಕೋಟ್‌ನಲ್ಲಿದ್ದ ಉಗ್ರರೆಷ್ಟು?

ಬೆಂಗಳೂರು, ಮಾರ್ಚ್ 03 : 'Inko pata nahin char hai ya che' ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಈ ಪೋನ್‌ ಕರೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ವಾಯುನೆಲೆಗೆ ನುಗ್ಗಿದ ಉಗ್ರರೆಷ್ಟು ಎಂಬ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ.

2015ರ ಜನವರಿಯಲ್ಲಿ ಆರು ಉಗ್ರರು ಪಂಜಾಬಿನಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ್ದರು ಎಂದು ಎನ್‌ಐಎ ಹೇಳಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ವಾಯುನೆಲೆ ಕಾರ್ಯಾಚರಣೆ ಮುಗಿದ ಬಳಿಕ 4 ಉಗ್ರರ ಶವಗಳು ಮಾತ್ರ ದೊರಕಿವೆ. [ಪಠಾಣ್ ಕೋಟ್ ದಾಳಿ : ಪಾಕಿಸ್ತಾನದಲ್ಲಿ FIR]

pathankot

ಜನವರಿ 3ರಂದು ಪಾಕಿಸ್ತಾನದಲ್ಲಿ ಕೂತ ವ್ಯಕ್ತಿಗೆ ಉಗ್ರರು, 'Inko pata nahin char hai ya che' ಇವರಿಗೂ ನಾಲ್ವರೋ, ಆರು ಜನರೋ ಗೊತ್ತಿಲ್ಲ ಎಂದು ಹೇಳುತ್ತಿರುವ ಫೋನ್ ಕರೆಯ ಮಾಹಿತಿ ಸಿಕ್ಕಿದೆ. ಇದರಿಂದಾಗಿ ಎಷ್ಟು ಉಗ್ರರು ಬಂದಿದ್ದರು ಎಂಬ ಗೊಂದಲ ಮುಂದುವರೆದಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಮೊದಲನೇ ಹಂತದ ಕಾರ್ಯಾಚರಣೆಯಲ್ಲಿ ಎನ್‌ಎಸ್‌ಜಿ 4 ಉಗ್ರರನ್ನು ಕೊಂದು ಹಾಕಿತ್ತು. ಆದರೆ, ನಂತರೂ 30 ಗಂಟೆಗಳ ಕಾರ್ಯಾಚರಣೆ ನಡೆದಿತ್ತು. ಇದರಿಂದಾಗಿ ಇನ್ನಿಬ್ಬರು ಉಗ್ರರು ಇದ್ದರು ಎಂದು ಶಂಕಿಸಲಾಗಿದೆ. ಆದರೆ, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಅವರ ಮೃತದೇಹಗಳು ಸಿಕ್ಕಿಲ್ಲ. [ಪಠಾಣ್ ಕೋಟ್ ವಾಯುನೆಲೆ ವಿಶೇಷತೆಗಳೇನು?]

2ನೇ ಕಾರ್ಯಾಚರಣೆ ನಡೆದ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಬೂದಿ ಮತ್ತು ಕಬ್ಬಿಣದ ಕೆಲವು ವಸ್ತುಗಳು ಪತ್ತೆಯಾಗಿದ್ದವು. ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಂತಿಮ ವರದಿಗಾಗಿ ಎನ್‌ಐಎ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+