ಪಠಾಣ್ ಕೋಟ್ ಉಗ್ರರ ದಾಳಿ: ಮೋದಿ ವಿರುದ್ದ ವಿಪಕ್ಷಗಳ ಕೇಕೆ!

Posted By:
Subscribe to Oneindia Kannada

ನ್ಯಾಷನಲ್ ಹೆರಾಲ್ಡ್ ಕೇಸ್, ಮೋದಿ ಸರಕಾರದ ಅವರಿವರ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸಂಸತ್ತಿನ ಚಳಿಗಾಲದ ಅಮೂಲ್ಯ ಸದನದ ಅಧಿವೇಶವನವನ್ನು ಹಾಳು ಮಾಡಿದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಭಯೋತ್ಪಾದಕರ ದಾಳಿಯ ವಿಚಾರದಲ್ಲೂ ಮೋದಿ ಸರಕಾರವನ್ನು ಮನಬಂದಂತೆ ತರಾಟೆಗೆ ತೆಗೆದುಕೊಳ್ಳುತ್ತಿವೆ.

ಉಗ್ರರ ದಾಳಿಯ ವಿಚಾರದಲ್ಲೂ ಸರಕಾರದ ಪರವಾಗಿ ನಿಂತು ಒಗ್ಗಟ್ಟು ಪ್ರದರ್ಶಿಸುವ ಬದಲು ವಿಪಕ್ಷಗಳ ಮುಖಂಡರು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಉಗ್ರರ ದಾಳಿಯ ವಿಚಾರದಲ್ಲಿ ಎನ್ಡಿಎ ಮೈತ್ರಿಕೂಟದ ಶಿವಸೇನೆ ಕೂಡಾ ಪ್ರಧಾನಿ ಮೋದಿ ವಿರುದ್ದ ಹೇಳಿಕೆ ನೀಡಿರುವುದು ನೋವಿನ ವಿಚಾರ.(ಕಲಾವಿದನ ಪ್ರತಿಭೆಯಲ್ಲಿ ಮರುಜೀವ ಪಡೆದ ಹುತಾತ್ಮ ಯೋಧರು)

ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಮ್ಮ ರಕ್ಷಣಾ ವ್ಯವಸ್ಥೆಯ ಲೋಪದೋಷ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದ್ದರೂ, ಸರಕಾರದ ಪರವಾಗಿ ನಾವಿದ್ದೇವೆ, ಅನ್ನೋ ಬದಲು ರಕ್ಷಣಾ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ನೀಡಿರುವ ಹೇಳಿಕೆ ಈಗ ವ್ಯಾಪಕ ಚರ್ಚಗೆ ಗುರಿಯಾಗಿದೆ.

ವಾಯುನೆಲೆಯ ಮೇಲೆ ಉಗ್ರರ ದಾಳಿಯ ಹಿಂದೆ ಪಂಜಾಬಿನ ಗುರುದಾಸಪುರ ಜಿಲ್ಲಾ ಎಸ್ಪಿ ಸಲ್ವಿಂದರ್ ಸಿಂಗ್ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅನುಮಾನ ನೆಟ್ಟಿದೆ.

ಉಗ್ರರ ದಾಳಿ ಭದ್ರತಾ ವ್ಯವಸ್ಥೆಯ ತೀವ್ರ ವೈಫಲ್ಯ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸರಕಾರದ ವಿರುದ್ದ ಟೀಕಾಪ್ರಹಾರ ನಡೆಸುತ್ತಿದೆ.(ಪಠಾಣ್‌ ಕೋಟ್‌ಗೆ ಬಂದ ಉಗ್ರರು ಗಡಿ ದಾಟಿದ್ದು ಹೇಗೆ)

ಜೊತೆಗೆ ಇತ್ತೀಚಿನ ಪ್ರಧಾನಿ ಮೋದಿಯ ದಿಢೀರ್ ಪಾಕ್ ಭೇಟಿಗೂ, ಉಗ್ರರ ದಾಳಿಗೂ ಸಂಬಂಧ ಕಲ್ಪಿಸಿದ ರಾಜಕೀಯ ನಾಯಕರೂ ಇದ್ದಾರೆ. ಯಾರು ಏನು ಹೇಳಿಕೆ ನೀಡಿದರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಪ್ರಧಾನಿ ಮೋದಿಗೆ ಉಗ್ರರ ಜೊತೆ ನಂಟಿದೆ

ಪ್ರಧಾನಿ ಮೋದಿಗೆ ಉಗ್ರರ ಜೊತೆ ನಂಟಿದೆ

ಪ್ರಧಾನಿ ಮೋದಿ ಇತ್ತೀಚೆಗೆ ಲಾಹೋರಿಗೆ ಭೇಟಿ ನೀಡಿದ ಬೆನ್ನಲ್ಲೇ ಉಗ್ರರು ದಾಳಿ ನಡೆಸುತ್ತಾರೆ. ಇದರಿಂದ ಒಂದಂತೂ ಅರ್ಥವಾಗುತ್ತೆ, ಮೋದಿಯವರಿಗೆ ಉಗ್ರ ಸಂಘಟನೆಯ ಜೊತೆ ನಂಟಿದೆ ಎಂದು ತೃಣಮೂಲ ಕಾಂಗ್ರೆಸ್ಸಿನ ಶಾಸಕ ಇದ್ರಿಸ್ ಆಲಿ ಬೇಜಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಆಲಿ ಹೇಳಿಕೆ ನೀಡಿದ ಬೆನ್ನಲ್ಲೇ ಟಿಎಂಸಿಯ ಹಿರಿಯ ಮುಖಂಡರು ಆಲಿ ವಿರುದ್ದ ಕಿಡಿಕಾರಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಉಗ್ರ ಚಟುವಟಿಕೆ ಹೆಚ್ಚಳ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಉಗ್ರ ಚಟುವಟಿಕೆ ಹೆಚ್ಚಳ

ಬಿಜೆಪಿ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿದೆ. ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಭಾರತ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಪಠಾಣ್ ಕೋಟ್ ದಾಳಿಯ ವೇಳೆ ಉಗ್ರರನ್ನು ಶೀಘ್ರವಾಗಿ ಹಿಮ್ಮೆಟ್ಟಿಸಲು ಮೋದಿ ಸರಕಾರ ವಿಫಲವಾಗಿದೆ. ಗೃಹ ಮತ್ತು ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಆಗ್ರಹಿಸಿದ್ದಾರೆ.

ಪಠಾಣ್ ಕೋಟ್ ದಾಳಿ ಡ್ರಗ್ಸ್ ಮಾಫಿಯಾ

ಪಠಾಣ್ ಕೋಟ್ ದಾಳಿ ಡ್ರಗ್ಸ್ ಮಾಫಿಯಾ

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪಂಜಾಬಿನಲ್ಲಿ ನಡೆಯುತ್ತಿರುವ ಎರಡನೇ ದಾಳಿಯಿದು. ಇದೊಂದು ಭದ್ರತಾ ವೈಫಲ್ಯ, ಜೊತೆಗೆ ಪಂಜಾಬಿನ ಡ್ರಗ್ಸ್ ಮಾಫಿಯಾದ ಕೈವಾಡ ಇದ್ದರೂ ಇರಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಶಿವಸೇನೆ

ಶಿವಸೇನೆ

ಸರಕಾರ ತಪ್ಪು ಮಾಡುವುದನ್ನೇ ಕಾಂಗ್ರೆಸ್ ಕಾಯುತ್ತಿರುತ್ತದೆ ಜೊತೆಗೆ ಉಗ್ರರ ದಾಳಿಯನ್ನು ನಿರ್ವಹಿಸುವಲ್ಲಿ ಮೋದಿ ಸರಕಾರವೂ ವಿಫಲವಾಗಿದೆ. ಹೀಗಾಗಿ ಮೋದಿ ವಿರುದ್ದ ತಿರುಗಿ ಬೀಳಲು ಕಾಂಗ್ರೆಸ್ಸಿಗೆ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ ಎಂದು ಶಿವಸೇನೆ ತನ್ನ ಅಭಿಪ್ರಾಯ ವ್ಯಕ ಪಡಿಸಿದೆ.ಸರಕಾರ ತಪ್ಪು ಮಾಡುವುದನ್ನೇ ಕಾಂಗ್ರೆಸ್ ಕಾಯುತ್ತಿರುತ್ತದೆ ಜೊತೆಗೆ ಉಗ್ರರ ದಾಳಿಯನ್ನು ನಿರ್ವಹಿಸುವಲ್ಲೂ ಮೋದಿ ಸರಕಾರ ವಿಫಲವಾಗಿದೆ. ಹೀಗಾಗಿ ಮೋದಿ ವಿರುದ್ದ ತಿರುಗಿ ಬೀಳಲು ಕಾಂಗ್ರೆಸ್ಸಿಗೆ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ ಎಂದು ಶಿವಸೇನೆ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಮೋದಿಗೆ ಫಲಿತಾಂಶ ಬೇಕಾಗಿಲ್ಲ

ಮೋದಿಗೆ ಫಲಿತಾಂಶ ಬೇಕಾಗಿಲ್ಲ

ಉಗ್ರರ ದಾಳಿಗೆ ಮೋದಿ ಸರಕಾರವನ್ನು ಟೀಕಿಸುತ್ತಾ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್, ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಮಗೆ ಫಲಿತಾಂಶ ಮುಖ್ಯವಾಗಿತ್ತು. ಕಣ್ಣೊರೆಸುವ ತಂತ್ರಗಳನ್ನು ನಾವು ಮಾಡುತ್ತಿರಲಿಲ್ಲ. ಆದರೆ ಮೋದಿಗೆ ಫಲಿತಾಂಶ ಬೇಕಿಲ್ಲ. ಬರೀ ತೋರಿಕೆ. ಲಾಹೋರ್‌ ಭೇಟಿಯ ಹಿಂದಿನ ಉದ್ದೇಶ ಕೂಡಾ ಇದೇ ಎಂದು ಶರ್ಮಾ ಟೀಕಿಸಿದ್ದಾರೆ.

ಒಮರ್ ಅಬ್ದುಲ್ಲಾ

ಒಮರ್ ಅಬ್ದುಲ್ಲಾ

ಪಠಾಣ್ ಕೋಟ್ ದಾಳಿ ಪ್ರಧಾನಿ ಮೋದಿಗೆ ಎದುರಾಗಿರುವ ಮೊದಲ ಭಾರೀ ಸವಾಲು. ದಾಳಿಯ ನಂತರವೂ ಭಾರತ, ಪಾಕಿಸ್ತಾನದ ಜೊತೆ ಮಾತುಕತೆ ಮುಂದುವರಿಸಬೇಕೆಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pathankot terrorist attack on Air Force Base: Opposition leaders including Congress party reaction on Prime Minister Narendra Modi.
Please Wait while comments are loading...