ಪಠಾಣ್ ಕೋಟ್ ಕಾರ್ಯಾಚರಣೆ ಅಂತ್ಯ, 6 ಉಗ್ರರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 04 : ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ಪಠಾಣ್ ಕೋಟ್ ವಾಯುನೆಲೆಯಲ್ಲಿ ಅಡಗಿದ್ದ ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆ. ಸೋಮವಾರ ಸಂಜೆ 6ನೇ ಉಗ್ರನನ್ನು ಯೋಧರು ಕೊಂದು ಹಾಕಿದ್ದಾರೆ.

ಜನವರಿ 2ರ ಶನಿವಾರ ನಾಲ್ವರು ಉಗ್ರರನ್ನು ಯೋಧರು ಕೊಂದು ಹಾಕಿದ್ದರು. ವಾಯುನೆಲೆಯಲ್ಲಿ ಅಡಗಿ ಕುಳಿತಿದ್ದ ಇನ್ನಿಬ್ಬರು ಉಗ್ರರು 48 ಗಂಟೆಗಳ ಕಾಲ ಯೋಧರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದು, ಸೋಮವಾರ ಸಂಜೆ 6ನೇ ಉಗ್ರ ಯೋಧರ ಗುಂಡಿಗೆ ಬಲಿಯಾಗಿದ್ದಾನೆ. [ವಾಯುನೆಲೆ ದಾಳಿ : ಪ್ರತಿ ಉಗ್ರನ ಬಳಿ ಇದ್ದದ್ದು 6 ಕೆಜಿ RDX]

pathankot

ವಾಯುನೆಲೆ ಸುರಕ್ಷಿತವಾಗಿದೆ ಎಂದು ಖಚಿತವಾಗುವ ತನಕ ಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ಭದ್ರತಾ ಪಡೆಗಳು ತಿಳಿಸಿವೆ. ಮುಂದಿನ 24 ಗಂಟೆಗಳ ತನಕ ಯೋಧರು ವಾಯುನೆಯಲ್ಲಿ ಕೂಂಬಿಂಗ್ ಮುಂದುವರೆಸಲಿದ್ದಾರೆ.[ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಇಬ್ಬರು ಉಗ್ರರು ಭಾರೀ ಸ್ಫೋಟಕಗಳೊಂದಿಗೆ ವಾಯುನೆಲೆಯ ಅಧಿಕಾರಿಗಳ ವಸತಿ ಗೃಹದಲ್ಲಿ ಅಡಗಿ ಕುಳಿತಿದ್ದರು. ಆದ್ದರಿಂದ, ಅವರನ್ನು ಹುಡುಕುವುದು ವಿಳಂಬವಾಯಿತು ಮತ್ತು ಗುಂಡಿನ ಚಕಮಕಿ ಮುಂದುವರೆದಿತ್ತು. ವಾಯುನೆಲೆಯ ಸಂಪೂರ್ಣ ಕೂಂಬಿಂಗ್ ನಡೆಸಿದ ಬಳಿಕ ವಾಯುನೆಲೆ ಸುರಕ್ಷಿತವಾಗಿದೆ ಎಂದು ಸೇನಾಪಡೆ ಘೋಷಣೆ ಮಾಡಲಿದೆ.

ಉಗ್ರರು ವಾಯುನೆಯಲ್ಲಿ ಗ್ರನೇಡ್ ಮತ್ತು ಬಾಂಬ್‌ಗಳನ್ನು ಅಡಗಿಸಿಟ್ಟಿರುವ ಸಾಧ್ಯತೆ ಇದ್ದು, ಬಾಂಬ್ ನಿಷ್ಕ್ರೀಯ ದಳ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಮೊದಲ ಉಗ್ರನನ್ನು ಭದ್ರತಾ ಪಡೆಗಳು ಕೊಂದು ಹಾಕಿದ್ದವು. ನಂತರ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಸೋಮವಾರ ಸಂಜೆ 6 ಉಗ್ರರನ್ನು ಹತ್ಯೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After almost sixty hours, security forces have managed to kill all 6 terrorists who had laid siege at the Pathankot air force station. While four of the terrorists were killed on January 2 when the attack began, the other two kept the security forces engaged almost for 48 hours.
Please Wait while comments are loading...