ಟ್ಯಾಕ್ಸಿ ಚಾಲಕನ ಕೊಂದು ಪಾಕ್‌ಗೆ ಕರೆ ಮಾಡಿದ ಉಗ್ರರು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 06 : ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯ ತನಿಖೆಗೆ ದೂರವಾಣಿ ಕರೆಗಳು ಮಹತ್ವದ ಸಾಕ್ಷಿಗಳಾಗಿವೆ. ಎಸ್ಪಿ ಸಲ್ವಿಂದರ್ ಸಿಂಗ್ ಮತ್ತು ಟ್ಯಾಕ್ಸಿ ಡ್ರೈವರ್ ಇಕಾಗರ್ ಸಿಂಗ್ ಮೊಬೈಲ್ ಮೂಲಕ ಉಗ್ರರು ಪಾಕಿಸ್ತಾನಕ್ಕೆ ಹಲವಾರು ಕರೆಗಳನ್ನು ಮಾಡಿದ್ದಾರೆ.

ಗಡಿನುಸುಳಿ ಬಂದ ಉಗ್ರರು ಇಕಾಗರ್ ಸಿಂಗ್ ಅವರನ್ನು ಕೊಲೆ ಮಾಡಿ, ಶವವನ್ನು ರಾವಿ ನದಿ ಸೇತುವೆ ಬಳಿ ಎಸೆದು ಪರಾರಿಯಾಗಿದ್ದರು. ಎನ್‌ಐಎ ತನಿಖೆ ವೇಳೆ ಸಿಂಗ್ ಅವರಿಗೆ ಡಿಸೆಂಬರ್ 31ರಂದು ಪಾಕಿಸ್ತಾನದಿಂದ ಉಗ್ರರು ಕರೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸಿಂಗ್ ಹತ್ಯೆ ಬಳಿಕ ಉಗ್ರರು ಅವರ ಮೊಬೈಲ್‌ನಿಂದ ಪಾಕ್‌ಗೆ 8 ಕರೆಗಳನ್ನು ಮಾಡಿದ್ದಾರೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

pathankot

ಸಿಂಗ್ ಮೊಬೈಲ್‌ನಿಂದ ಪಾಕಿಸ್ತಾನಕ್ಕೆ ಪ್ರತಿ ಅರ್ಧಗಂಟೆಗೊಮ್ಮೆ ಕರೆ ಮಾಡಲಾಗಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಈ ಕರೆಗಳ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು, ಇದು ತನಿಖೆಗೆ ಮಹತ್ವದ ಸಾಕ್ಷಿಯಾಗಲಿವೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ರಾತ್ರಿ ಎದ್ದು ಹೋದ ಸಿಂಗ್ : ಉಗ್ರರು ನುಸುಳಿ ಬಂದಾಗ ಟ್ಯಾಕ್ಸಿ ಚಾಲಕ ಸಿಂಗ್ ಮೊಬೈಲ್‌ಗೆ ರಾತ್ರಿ ಕರೆ ಬಂದಿದೆ. ಕರೆ ಬಂದ ತಕ್ಷಣ, ತುರ್ತಾಗಿ ವೈದ್ಯಕೀಯ ನೆರವು ಬೇಕಾಗಿದೆ. ಅದಕ್ಕಾಗಿ ಹೋಗುತ್ತಿದ್ದೇನೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿ ರಾತ್ರೋರಾತ್ರಿ ಮನೆಯಿಂದ ಆತ ಹೊರಟಿದ್ದ. ಉಗ್ರರನ್ನು ಕರೆದುಕೊಂಡು ಬರಲು ಹೋಗುತ್ತಿದ್ದೇನೆ ಎಂಬ ಬಗ್ಗೆ ಸಿಂಗ್‌ಗೆ ಅರಿವಿತ್ತೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಿಂಗ್ ಅವರ ಮೊಬೈಲ್ ಕರೆಗಳ ಎರಡು ವರ್ಷದ ಮಾಹಿತಿಯನ್ನು ಸಂಗ್ರಹಣೆ ಮಾಡಿರುವ ಎನ್‌ಐಎ, ಮೊದಲ ಬಾರಿಗೆ ಸಿಂಗ್ ಅವರ ನಂಬರ್‌ನಿಂದ ಪಾಕ್‌ಗೆ ಕರೆ ಮಾಡಲಾಗಿದೆ. ಅದನ್ನು ಉಗ್ರರೇ ಮಾಡಿದ್ದಾರೆ ಎಂದು ಪತ್ತೆ ಹಚ್ಚಿದ್ದಾರೆ. [ಪಿಟಿಐ ಚಿತ್ರ : ಪಟಾಣ್ ಕೋಟ್ ವಾಯುನೆಲೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The call records are crucial to the investigations being conducted into the Pathankot terror attack. While the calls that the terrorists made from the phone of the Superintendent of Police, there are around 8 calls that were made from the phone of the slain taxi driver as well.
Please Wait while comments are loading...