ಪಠಾಣ್ ವಿವಾದ: ಶಾರುಖ್ ಖಾನ್ ಸಿಕ್ಕರೆ ಜೀವಂತ ಸುಡುತ್ತೇನೆ ಎಂದು ಬೆದರಿಕೆ ಹಾಕಿದ ಅಯೋಧ್ಯೆಯ ಸಾಧು!

ನವದೆಹಲಿ, ಡಿ. 21: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಶರಂ ರಂಗ್ ಹಾಡಿನ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಪ್ರತಿದಿನ ಹಾಡಿನ ವಿರುದ್ಧ ಹೊಸ ದೂರುಗಳು, ಬೆದರಿಕೆಗಳು ವರದಿಯಾಗುತ್ತಲೇ ಇವೆ.

ಇದೇ ವೇಲೆಯಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಅಯೋಧ್ಯೆಯ ಸಾಧು ಪರಮಹಂಸ ಆಚಾರ್ಯ ವಿವಾದಿತ ಹೇಳೀಕೆ ನಿಡಿದ್ದು, ಜೀವ ಬೆದರಿಕೆ ಹಾಕಿದ್ದಾರೆ.

ನಟ ಶಾರುಖ್ ಖಾನ್‌ರನ್ನು ಭೇಟಿಯಾದರೇ ಅವರನ್ನು ಜೀವಂತವಾಗಿ ಸುಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಶಾರುಖ್ ಖಾನ್ ಅವರನ್ನು ಕೊಲ್ಲುವ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ "ಇಂದು ನಾವು ಅವರ ಪೋಸ್ಟರ್‌ಗಳನ್ನು ಸುಟ್ಟು ಹಾಕಿದ್ದೇವೆ. ಪಠಾಣ್ ಚಿತ್ರವು ಭಗವ ಬಣ್ಣವನ್ನು ಅವಮಾನಿಸಿದೆ. ನಾನು ಎಲ್ಲಿಯಾದರೂ ಆ ಜಿಹಾದಿ ಶಾರುಖ್ ಖಾನ್‌ನನ್ನು ಭೇಟಿಯಾದರೇ ಅವರನ್ನು ಜೀವಂತವಾಗಿ ಸುಡುತ್ತೇನೆ" ಎಂದಿದ್ದಾರೆ.

Pathaan row: Will burn Shah Rukh Khan alive says Ayodhya seer

ಇದಕ್ಕೂ ಮೊದಲು, ಹನುಮಾನ್ ಗರ್ಹಿಯ ಅರ್ಚಕ ಮಹಂತ್ ರಾಜು ದಾಸ್, ಪಠಾಣ್ ಬಿಡುಗಡೆಯಾಗುವ ಚಿತ್ರಮಂದಿರಗಳನ್ನು ಸುಟ್ಟುಹಾಕುವಂತೆ ಜನರಿಗೆ ಮನವಿ ಮಾಡಿದರು.

"ಬಾಲಿವುಡ್ ಮತ್ತು ಹಾಲಿವುಡ್ ಯಾವಾಗಲೂ ಸನಾತನ ಧರ್ಮವನ್ನು ಗೇಲಿ ಮಾಡಲು ಪ್ರಯತ್ನಿಸುತ್ತವೆ. ಕೇಸರಿ ಬಣ್ಣವನ್ನು ದೀಪಿಕಾ ಪಡುಕೋಣೆ ಬಿಕಿನಿಯಾಗಿ ಬಳಸಿರುವ ರೀತಿ ನಮಗೆ ನೋವುಂಟು ಮಾಡಿದೆ. ಬಿಕಿನಿಯಾಗಿ ಕೇಸರಿ ಧರಿಸುವ ಅಗತ್ಯ ಏನಿತ್ತು..? ಸಿನಿಮಾವನ್ನು ಬಹಿಷ್ಕರಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ. ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್‌ಗಳನ್ನು ಸುಟ್ಟುಹಾಕಿ ಇಲ್ಲದಿದ್ದರೆ ಅವರಿಗೆ ಅರ್ಥವಾಗುವುದಿಲ್ಲ. ದುಷ್ಟತನವನ್ನು ಎದುರಿಸಲು ನೀವು ದುಷ್ಟರಾಗಿರಬೇಕು" ಎಂದು ಅರ್ಚಕ ಮಹಂತ್ ರಾಜು ದಾಸ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

ನಟಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿಯು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಬೇಷರಂ ರಂಗ್ ಹಾಡಿನ ವಿರುದ್ಧ ಹಲವಾರು ದೂರುಗಳು ದಾಖಲಾಗಿವೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಡಿನ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರ ಹಲವು ವಿರೋಧ ಪಕ್ಷಗಳ ನಾಯಕರು ಈ ಚರ್ಚೆಯನ್ನು ತಳಪಾಯವಿಲ್ಲದ್ದು ಎಂದಿದ್ದಾರೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಬಜರಂಗದಳದ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕೇಸರಿ ಧರಿಸಿ "ಸುಲಿಗೆ ಮಾಡುತ್ತಾರೆ" ಎಂದು ಆರೋಪಿಸಿದ್ದಾರೆ.

ವಿವಾದದ ಮಧ್ಯೆಯೇ, ಸಾಮಾಜಿಕ ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ಶಾರುಖ್ ಖಾನ್ ಪಠಾಣ್ ತುಂಬಾ ದೇಶಭಕ್ತಿಯ ಚಿತ್ರ ಎಂದು ಹೇಳಿದ್ದಾರೆ. ವಿವಾದವನ್ನು ಉಲ್ಲೇಖಿಸದೆಯೇ, ಸಾಮಾಜಿಕ ಮಾಧ್ಯಮ ಬಳಕೆ ನಕಾರಾತ್ಮಕತೆ ಹೇಗೆ ಹೆಚ್ಚಿಸುತ್ತದೆ ಎಂಬುದರ ಕುರಿತು ಶಾರುಖ್ ಖಾನ್ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+