ನವದೆಹಲಿ, ಜುಲೈ 23: ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಕಲಾಪ ಗದ್ದಲ ಗಲಾಟೆಗೆ ಬಲಿಯಾಗಿದೆ. ದೇಶದಲ್ಲಿನ ಪ್ರಮುಖ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಗಿಂತ ಪೆಗಾಸಸ್ ಬೇಹುಗಾರಿ ವಿಷಯ ಉಭಯ ಸದನಗಳಲ್ಲಿ ಸದ್ದು ಗದ್ದಲಕ್ಕೆ ಕಾರಣವಾಗಿದೆ.
ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಆಗಸ್ಟ್ 13ರವರೆಗೂ ನಡೆಯಲಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಂತರ ನಡೆಸಲಾಗುತ್ತಿರುವ ಮೊದಲ ಮುಂಗಾರು ಅಧಿವೇಶನವಾಗಿದೆ.
ಪೆಗಾಸಸ್ ಬೇಹುಗಾರಿಕೆ ವರದಿ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿರ್ವಹಣೆ, ಲಸಿಕೆ ಪೂರೈಕೆ, ಇಂಧನ ಬೆಲೆ ಏರಿಕೆ, ವಿವಾದಿತ ಕೃಷಿ ಕಾಯ್ದೆಗಳ ರದ್ದು ವಿಚಾರವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೀವ್ರ ಚರ್ಚೆಯ ವಿಷಯವಾಗಿವೆ. ಮುಂಗಾರು ಅಧಿವೇಶನದ ಕ್ಷಣಕ್ಷಣದ ಮಾಹಿತಿಯನ್ನು ಇಲ್ಲಿ ಓದಿ.
Jul 28, 2021, 4:55 pm IST
ಸಂಸತ್ತಿನಲ್ಲಿ ಅಸ್ವಸ್ಥಗೊಂಡ ಟಿಎಂಸಿ ಸಂಸದ ಶಾಂತಾ ಛೆಟ್ರಿ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Jul 23, 2021, 5:05 pm IST
ರಾಜ್ಯಸಭೆಯಲ್ಲಿ ಪೆಗಾಸಸ್ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಗದ್ದಲ ಹೆಚ್ಚಾದ ಹಿನ್ನೆಲೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
Jul 23, 2021, 3:50 pm IST
ಪಟ್ಟಿಯಲ್ಲಿ ಕಾಣಿಸಿಕೊಂಡ ಜನರ ಫೋನ್‌ಗಳನ್ನು ಟ್ಯಾಪ್ ಮಾಡುವುದು ಅನಿವಾರ್ಯವಲ್ಲ ಎಂದು 'ಪೆಗಾಸಸ್ ಪ್ರಾಜೆಕ್ಟ್' ವರದಿಯನ್ನು ಪ್ರಕಟಿಸಿದವರೇ ಹೇಳುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅವರ ಆರೋಪಗಳಿಗೆ ಯಾವುದೇ ವಾಸ್ತವಿಕ ಆಧಾರಗಳಿಲ್ಲ: ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ
ಮುಂಗಾರುಅಧಿವೇಶನದ ಅಂತ್ಯದವರೆಗೆ ಕಲಾಪಕ್ಕೆ ಹಾಜರಾಗದಂತೆ ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ನಿಮಗೆ ಟಿಎಂಸಿ ಸಂಸದ ಸಂತನು ಸೇನ್) ತಿಳಿದಿರುವಂತೆ, ಸದನದಿಂದ ಹೊರಹೋಗಲು ನಾವು ವಿನಂತಿಸುತ್ತೇವೆ: ರಾಜ್ಯಸಭೆಯ ಉಪ ಸಭಾಪತಿ ಹರಿವಂಶಿ
Jul 23, 2021, 12:43 pm IST
ಕೊರೊನಾವೈರಸ್ ಲಸಿಕೆ ಉತ್ಪಾದಿಸುವ ವಾಣಿಜ್ಯ ಕಂಪನಿಗಳ ಜೊತೆಗೆ ಒಪ್ಪಂದದಲ್ಲಿ ಯಾವುದೇ ರೀತಿ ವಿಳಂಬ ನೀತಿ ಅನುಸರಿಸಿಲ್ಲ. ಲಸಿಕೆ ಪೂರೈಕೆಗೂ ಮೊದಲು ಮುಂಗಡ ಹಣವನ್ನು ಪಾವತಿ ಮಾಡಲಾಗಿದೆ: ಲೋಕಸಭೆಯಲ್ಲಿ ಆರೋಗ್ಯ ಇಲಾಖೆ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿಕೆ.
Jul 23, 2021, 12:41 pm IST
ದೇಶದಲ್ಲಿ ಕೊರೊನಾವೈರಸ್ ಲಸಿಕೆ ಖರೀದಿ ಮತ್ತು ಪೂರೈಕೆ ಹಾಗೂ ವಿತರಣೆ ಅಭಿಯಾನಕ್ಕಾಗಿ ಈವರೆಗೂ 9,725.15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ: ಲೋಕಸಭೆಯಲ್ಲಿ ಆರೋಗ್ಯ ಇಲಾಖೆ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿಕೆ.
Jul 23, 2021, 12:39 pm IST
ಭಾರತದಲ್ಲಿ 2021ರ ಆಗಸ್ಟ್ ತಿಂಗಳಾಂತ್ಯದ ವೇಳೆಗೆ 135 ಕೋಟಿ ಡೋಸ್ ಲಸಿಕೆಯ ಲಭ್ಯತೆ ಇರಲಿದೆ: ಲೋಕಸಭೆಯಲ್ಲಿ ಆರೋಗ್ಯ ಇಲಾಖೆ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿಕೆ.
Jul 23, 2021, 12:35 pm IST
ಕೊರೊನಾವೈರಸ್ ಲಸಿಕೆ ಸರಬರಾಜಿನ ಬಗ್ಗೆ ಫೈಜರ್ ಕಂಪನಿ ಜೊತೆಗೆ ಭಾರತೀಯ ಸರ್ಕಾರವು ಮಾತುಕತೆ ನಡೆಸಿದೆ: ಲೋಕಸಭೆಯಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಪ್ರತಿಕ್ರಿಯೆ.
Jul 23, 2021, 12:27 pm IST
ಪೆಗಾಸಸ್ ಬೇಹುಗಾರಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾದ ಹಿನ್ನೆಲೆ ಜುಲೈ 26ರ ಸೋಮವಾರಕ್ಕೆ ಕಲಾಪವನ್ನು ಮುಂದೂಡಿಕೆ ಮಾಡಲಾಗಿದೆ.
Lok Sabha adjourned till Monday, 26th July amid uproar and protests in the House over 'Pegasus Project' media report and other issues. pic.twitter.com/DamNYH7Ehz
ಗುರುವಾರ ಟಿಎಂಸಿ ಸಂಸದ ಸಂತನು ಸೇನ್, ಐಟಿ ಸಚಿವ ಅಶ್ವಿನಿ ವೈಷ್ಣವ್ ಕೈಯಿಂದ ಕಾಗದಗಳನ್ನು ಕಸಿದುಕೊಂಡು ಸದನದಲ್ಲಿ ಹರಿದು ಹಾಕಿದ ಘಟನೆಯ ಕುರಿತು ರಾಜ್ಯಸಭೆಯ ಸದನ ಮುಖಂಡ ಪಿಯೂಷ್ ಗೋಯಲ್ ಮಧ್ಯಾಹ್ನ 12.15ಕ್ಕೆ ವಿರೋಧ ಪಕ್ಷದ ಸಭೆ ನಡೆಸಿದರು.
Jul 23, 2021, 12:14 pm IST
ಮೇಲ್ಮನೆ ಕಲಾಪ ಆರಂಭವಾಗುತ್ತಿದ್ದಂತೆ ಉಪ ಸಭಾಪತಿ ಹರಿವಂಶ್ ಕೂಡಾ ಕಲಾಪದಿಂದ ಹೊರ ನಡೆಯುವಂತೆ ಟಿಎಂಸಿ ಸಂಸದ ಸಂತಾನು ಸೇನ್ ರಿಗೆ ಸೂಚನೆ ನೀಡಿದರು. ಗದ್ದಲ ಗಲಾಟೆ ಹೆಚ್ಚಾದ ಹಿನ್ನೆಲೆ ಮತ್ತೆ ಸದನವನ್ನು ಅರ್ಧಗಂಟೆಗಳ ಕಾಲ ಮುಂದೂಡಲಾಯಿತು.
Jul 23, 2021, 12:11 pm IST
"ಸದನದಲ್ಲಿ ನಡೆದ ಘಟನೆಗಳ ಬಗ್ಗೆ ನನಗೆ ತುಂಬಾ ನೋವಾಗುತ್ತದೆ. ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರ ಕೈಯಲ್ಲಿರುವ ಪತ್ರಗಳನ್ನು ಕಸಿದು ಹರಿದು ಹಾಕುವಷ್ಟು ಕೆಳಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಇಂಥ ನಡುವಳಿಕೆಯು ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ದಾಳಿ ಆಗಿರುತ್ತದೆ," ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
Jul 23, 2021, 12:06 pm IST
ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಸಂತಾನು ಸೇನ್ ರನ್ನು ಅಮಾನತುಗೊಳಿಸಲಾಗಿದೆ. ಆಗಸ್ಟ್ 13ರವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ದೂರ ಇರುವಂತೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸೂಚನೆ ನೀಡಿದ್ದಾರೆ.
Jul 23, 2021, 11:39 am IST
ಟಿಎಂಸಿ ಸಂಸದ ದೆರೆಕ್ ಒಬ್ರಿಯನ್ ಗುರುವಾರದ ಘಟನೆ ಬಗ್ಗೆ ರಾಜ್ಯಸಭೆಯಲ್ಲಿ ಉಲ್ಲೇಖಿಸುತ್ತಿದ್ದಂತೆ ಗದ್ದಲ ಗಲಾಟೆ ಶುರುವಾಯಿತು.
ಸಂತಾನು ಸೇನ್, ದಯವಿಟ್ಟು ಸದನದಿಂದ ಹೊರ ನಡೆದು, ಸುಗಮವಾಗಿ ಕಲಾಪ ನಡೆಸುವುದಕ್ಕೆ ಅವಕಾಶ ನೀಡಿ ಎಂದು ರಾಜ್ಯಸಭೆ ಸಭಾಪತಿಗಳು ಹೇಳಿದರು. ಮಧ್ಯಾಹ್ನ 12 ಗಂಟೆಗೆ ಸದನವನ್ನು ಮುಂದೂಡಲಾಯಿತು.
Jul 23, 2021, 11:03 am IST
ಇಸ್ರೇಲ್ ಪೆಗಾಸಸ್ ಅನ್ನು ಒಂದು ಆಯುಧ ಎನ್ನುತ್ತಿದ್ದು, ಆ ಶಸ್ತ್ರಾಸ್ತ್ರವನ್ನು ಭಯೋತ್ಪಾದಕರು ಮತ್ತು ಉಗ್ರರ ವಿರುದ್ಧ ಬಳಸಬೇಕಿದೆ. ಆದರೆ ನಮ್ಮ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಅದೇ ಆಯುಧವನ್ನು ರಾಜ್ಯ ಮತ್ತು ಸಂಸ್ಥೆಗಳ ವಿರುದ್ಧ ಬಳಕೆ ಮಾಡಿಕೊಳ್ಳುತ್ತಿವೆ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
Jul 23, 2021, 10:57 am IST
ಪೆಗಾಸಸ್ ಯೋಜನೆ ವಿರುದ್ಧ ಸಂಸತ್ತಿನಲ್ಲಿ ಗಾಂಧಿ ಪ್ರತಿಮೆ ಬಳಿ ಡಿಎಂಕೆ ಮತ್ತು ಶಿವಸೇನೆ ಸಂಸದರ ಪ್ರತಿಭಟನೆ.
Delhi | Congress, DMK, and Shiv Sena MPs protest against 'Pegasus Project' media report in front of Mahatma Gandhi statue inside Parliament premises pic.twitter.com/vDRHm8EGj8
ರಾಜ್ಯಸಭೆಯಲ್ಲಿ ಪೆಗಾಸಸ್ ಬೇಹುಗಾರಿಕೆ ವರದಿ ಬಗ್ಗೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತು ಆರಂಭಿಸುತ್ತಿದ್ದಂತೆ ವಿರೋಧ ಪಕ್ಷಗಳ ಸಂಸದರು ಗದ್ದಲ ಸೃಷ್ಟಿಸಿದರು.
ಪ್ರತಿಪಕ್ಷಗಳ ಗದ್ದಲ ಗಲಾಟೆ ಹೆಚ್ಚಾದ ಹಿನ್ನೆಲೆ ರಾಜ್ಯಸಭೆ ಕಲಾಪವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
Rajya Sabha adjourned till tomorrow, amid uproar in the House by the Opposition MPs which began as soon as Electronics and Information Technology Minister Ashwini Vaishnaw rose to speak on 'Pegasus Project' media report. pic.twitter.com/L1ckgOCvXS
ಲೋಕಸಭೆಯಲ್ಲಿ ಗದ್ದಲ ಗಲಾಟೆಯಿಂದಾಗಿ ಸಂಜೆ 4 ಗಂಟೆಗೆ ಕಲಾಪ ಮುಂದೂಡಿಕೆ.
Jul 22, 2021, 1:05 pm IST
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಸಹೋದ್ಯೋಗಿ ಸಂಸದರೊಂದಿಗೆ ಸೇರಿಕೊಂಡು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರುವ ಭಾರತೀಯ ಕ್ರೀಡಾಪಟುಗಳಿಗೆ ಜೈ ಹಿಂದ್ ಘೋಷಣೆ ಮೂಲಕ ವಿಜಯದ ಸಂಕೇತವನ್ನು ತೋರಿಸಿದ್ದಾರೆ.
#WATCH | Union Sports Minister Anurag Thakur along with other MPs show a 'victory punch' & chant 'Jai Hind' as they cheer for the Indian athletes & players participating in #TokyoOlympics
The Minister also urges people to shoot videos to encourage the Indian contingent pic.twitter.com/GbXRFjzOmN
ಸಂಸತ್ ಎದುರಿಗೆ ಕೃಷಿ ಕಾಯ್ದೆ ವಿರುದ್ಧ ಶಿರೋಮಣಿ ಅಕಾಲಿ ದಳ ಸಂಸದರ ಪ್ರತಿಭಟನೆ.
Delhi: Shiromani Akali Dal (SAD) MPs protest over the three farm laws and show placards to Agriculture Minister Narendra Singh Tomar at the Parliament premises. pic.twitter.com/5E0ILvp0Tb
ಲೋಕಸಭೆಯಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾದ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ.
Jul 22, 2021, 12:12 pm IST
ರಾಜ್ಯಸಭಾ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ.
Jul 22, 2021, 11:49 am IST
ಕೃಷಿ ಕಾಯ್ದೆಗಳು ರೈತರ ಪರವಾಗಿದ್ದು ಲಾಭದಾಯಕವಾಗಿವೆ. ನಾವು ಈ ಕಾಯ್ದೆಗಳ ಬಗ್ಗೆ ಚರ್ಚಿಸಿದ್ದೇವೆ. ಕಾನೂನಾತ್ಮಕವಾಗಿ ಈ ಕಾಯ್ದೆಗಳಲ್ಲಿ ಲೋಪದೋಷಗಳಿದ್ದರೆ ಅದನ್ನು ಪ್ರಸ್ತಾಪಿಸಲಿ, ಅದರ ಕುರಿತು ಚರ್ಚಿಸೋಣ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್.
Jul 22, 2021, 11:26 am IST
ಲೋಕಸಭೆಯಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾದ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿಕೆ.
Jul 22, 2021, 11:12 am IST
ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಎದುರಿನ ಗಾಂಧಿ ಪ್ರತಿಮೆ ಬಳಿ ಪಕ್ಷದ ಸದಸ್ಯರ ಜೊತೆಗೂಡಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರತಿಭಟನೆ.
Delhi: Congress leader Rahul Gandhi staged a protest along with party MPs in front of Gandhi Statue, over three farm laws pic.twitter.com/8SEdgOkLWn
ರಾಜ್ಯಸಭೆಯಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ಕಲಾಪವನ್ನು ಮುಂದೂಡಿಕೆ ಮಾಡಲಾಗಿದೆ.
Jul 22, 2021, 10:57 am IST
ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯ ಜಂತರ್ ಮಂತರ್ ಬಳಿ ಸಾವಿರಾರು ಸಂಖ್ಯೆಯಲ್ಲಿ ರೈತರಿಂದ ಪ್ರತಿಭಟನೆ.
Farmers gather to board the buses at Singhu (Delhi-Haryana) border, ahead of protest against three farm laws at Jantar Mantar in Delhi pic.twitter.com/S4JFHt6lv4
ಮುಂಗಾರು ಅಧಿವೇಶನದ 19 ಕಲಾಪಗಳಲ್ಲಿ ದೇಶದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಕಲಾಪಗಳು ನಡೆಯಲಿವೆ.
10:13 AM, 19 Jul
ಕಳೆದ ವರ್ಷ ಕೊರೊನಾ ಕಾರಣವಾಗಿ ಸೆಪ್ಟೆಂಬರ್ನಲ್ಲಿ ಮುಂಗಾರು ಅಧಿವೇಶನ ಹಮ್ಮಿಕೊಳ್ಳಲಾಗಿತ್ತು.
10:15 AM, 19 Jul
ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ತೃಣಮೂಲ ಕಾಂಗ್ರೆಸ್ ಸಂಸದರು ಇಂಧನ ಬೆಲೆ ಏರಿಕೆ ವಿರುದ್ಧ ಸಂಸತ್ತಿಗೆ ಸೈಕಲ್ ಮೂಲಕ ಬರಲಿದ್ದಾರೆ.
10:17 AM, 19 Jul
ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪಕ್ಷಗಳು ಸೌಹಾರ್ದಯುತವಾಗಿ ಮಾತನಾಡಬೇಕು ಹಾಗೂ ಅದಕ್ಕೆ ಪ್ರತಿಕ್ರಿಯೆ ನಡೆಯಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಅಂಥ ವಾತಾವರಣ ಸೃಷ್ಟಿಸುವುದು ಎಲ್ಲರ ಜವಾಬ್ದಾರಿ ಎಂದು ಮೋದಿ ಭಾನುವಾರ ಸರ್ವಪಕ್ಷ ಸಭೆಯಲ್ಲಿ ಕರೆ ನೀಡಿದ್ದರು.
10:31 AM, 19 Jul
ಪೆಗಾಸಸ್ ಬಗ್ಗೆ ಮಾಧ್ಯಮಗಳ ವರದಿ ಬೆನ್ನಲ್ಲೇ ನಮ್ಮ ರಾಷ್ಟ್ರೀಯ ಭದ್ರತೆಯು ಅಪಾಯದಲ್ಲಿದೆ. ಈ ವಿಷಯವನ್ನು ನಾನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
Our national security is under threat. I will definitely raise this issue (in the House): Leader of Congress in Lok Sabha Adhir Ranjan Chowdhury on 'Pegasus Project' media report pic.twitter.com/4NrTFBq7Bg
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟದ ಬಗ್ಗೆ ಚರ್ಚಿಸುವುದಕ್ಕೆ ಸಂಸತ್ ಅಧಿವೇಶನದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು.
Vaccine is given in 'baahu' (arms), those who take it become 'Baahubali'. Over 40 cr people have become 'Baahubali' in the fight against COVID. It's being taken forward. The pandemic has gripped the entire world. So we want meaningful discussions in the Parliament over it: PM pic.twitter.com/YjrKUGQAqB
ಕೊರೊನಾವೈರಸ್ ಲಸಿಕೆಯನ್ನು ತೋಳಿಗೆ ನೀಡುವುದರಿಂದ ದೇಶದಲ್ಲಿ 40 ಕೋಟಿ ಜನರಲ್ಲಿ ಸೋಂಕಿನ ವಿರುದ್ಧ ಹೋರಾಟಬಲ್ಲ ತೋಳ್ಬಲ ಹೆಚ್ಚಾಗಿದೆ: ಮೋದಿ.
10:50 AM, 19 Jul
ಇಡೀ ಜಗತ್ತನ್ನು ವ್ಯಾಪಿಸಿರುವ ಕೊರೊನಾವೈರಸ್ ಕುರಿತು ಸಂಸತ್ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ನಡೆಸಬೇಕಾಗಿದೆ: ಮೋದಿ.
10:51 AM, 19 Jul
ಕೇಂದ್ರ ಸರ್ಕಾರಕ್ಕೆ ಅತ್ಯಂತ ಕಠಿಣ ಮತ್ತು ತೀಕ್ಷ್ಣ ಪ್ರಶ್ನೆಗಳನ್ನು ಪ್ರತಿಪಕ್ಷದ ನಾಯಕರಲ್ಲಿ ನಾವು ಮನವಿ ಮಾಡಿಕೊಳ್ಳುತ್ತೇನೆ. ಅದೇ ರೀತಿ ಸರ್ಕಾರಕ್ಕೆ ಉತ್ತರ ನೀಡುವುದಕ್ಕೆ ಶಿಸ್ತುಬದ್ಧ ವಾತಾವರಣ ಕಾಪಾಡಿಕೊಳ್ಳಬೇಕಿದೆ: ಮೋದಿ
ರೈತರ ಹೋರಾಟ ವಿಚಾರವು ಬಹುಮುಖ್ಯವಾಗಿದ್ದು, ಇದರ ಜೊತೆಗೆ ಇಂಧನ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಭಜ್ವಾ ತಿಳಿಸಿದ್ದಾರೆ.
11:05 AM, 19 Jul
ಸಂಸತ್ತಿಗೆ ತಲುಪಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ.
Lok Sabha Speaker Om Birla arrives at the Parliament as the #MonsoonSession commences today.
He tweets, 'People want that their expectations and hopes reach the govt through the Parliament. I hope all political parties will play a positive role in this direction.' pic.twitter.com/2mZxV9tDFr
ಜನರು ತಮ್ಮ ನಿರೀಕ್ಷೆ ಮತ್ತು ಭರವಸೆಗಳನ್ನು ಸಂಸತ್ತಿನ ಮೂಲಕ ಸರ್ಕಾರವನ್ನು ತಲುಪಬೇಕೆಂದು ಬಯಸುತ್ತಾರೆ. ಈ ದಿಕ್ಕಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಕಾರಾತ್ಮಕ ಪಾತ್ರ ವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ: ಓಂ ಬಿರ್ಲಾ ಟ್ವೀಟ್
11:13 AM, 19 Jul
ವೈಎಸ್ಆರ್ ಸಿಪಿ ಮದ್ದಿಲ ಗುರುಮೂರ್ತಿ, ಬಿಜೆಪಿ ಮಂಗಳಾ ಸುರೇಶ್, ಐಯುಎಂಎಲ್ ಅಬ್ದುಸಮ್ಮಾದ್ ಸಮದಾನ್ ಮತ್ತು ಕಾಂಗ್ರೆಸ್ಸಿನ ವಿಜಯ್ ವಸಂತ್ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
YSRCP's Maddila Gurumoorthy, BJP's Mangal Suresh Angadi, IUML's Abdussamad Samadan and Congress' Vijayakumar (Alias) Vijay Vasanth take oath as the Members of Parliament (MPs) in Lok Sabha. pic.twitter.com/i6sUABX70Z
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಅಬ್ದುಲ್ ವಹಾಬ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
11:19 AM, 19 Jul
"ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಸಚಿವರಾದ ಹಿನ್ನೆಲೆ ಸಂಸತ್ತಿನಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ ಎಂದು ನಾನು ಭಾವಿಸಿದ್ದೇನೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ," ಎಂದು ಲೋಕಸಭೆಯಲ್ಲಿ ನೂತನ ಸಚಿವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
I thought that there would be enthusiasm in the Parliament as so many women, Dalits, tribals have become Ministers. This time our colleagues from agricultural & rural background, OBC community, have been given berth in Council of Ministers: PM introduces his new Ministers, in LS pic.twitter.com/Hf7JIbhFFB
ಮಹಿಳೆಯರು, ಒಬಿಸಿಗಳು, ರೈತರ ಪುತ್ರರು ಮಂತ್ರಿಗಳಾಗಿದ್ದರೆ ಬಹುಶಃ ಕೆಲವರು ಸಂತೋಷವಾಗಿರುವುದಿಲ್ಲ. ಅದಕ್ಕಾಗಿಯೇ ಅವರಿಗೆ ತಮ್ಮ ಪರಿಚಯ ಮಾಡಿಕೊಳ್ಳುವುದಕ್ಕೂ ಸಹ ಅನುಮತಿಸುವುದಿಲ್ಲ: ಮೋದಿ
11:33 AM, 19 Jul
ಹಿರಿಯ ನಟ ದಿಲೀಪ್ ಕುಮಾರ್ ಸೇರಿದಂತೆ ಈ ವರ್ಷ ನಿಧನ ಹೊಂದಿರುವ ಗಣ್ಯರಿಗೆ ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
Members of Parliament in Rajya Sabha paid tribute to MPs & personalities who lost their lives this year, including veteran actor Dilip Kumar & veteran athlete Milkha Singh.
ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ ಕೋಲಾಹಲ: ಮಧ್ಯಾಹ್ನ 2 ಗಂಟೆಗೆ ಅಧಿವೇಶನ ಮುಂದೂಡಿಕೆ.
Lok Sabha adjourned till 2 pm amid uproar by Opposition MPs.
Defence Minister Rajnath Singh raised an objection against the uproar while Prime Minister Narendra Modi was introducing his Council of Ministers in the House. pic.twitter.com/FQIEf4QQE4
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಎದುರು ಶಿರೋಮಣಿ ಅಕಾಲಿ ದಳದ ಪ್ರತಿಭಟನೆ.
Delhi | Shiromani Akali Dal staged protest against Centre's farm laws outside Parliament, as Monsoon Session began
Farmers want black laws to be repealed. We issued an adjournment notice. We want opposition parties to stand against Modi govt: SAD President Sukhbir Singh Badal pic.twitter.com/HTotVk7aoQ
ಸಂಸತ್ ಪ್ರವೇಶಿಸಿದ ಕೂಡಲೇ ಪೆಗಾಸಸ್ ಯೋಜನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ.
#WATCH | "Let me go inside the Parliament right now, we will discuss it," says Congress MP Rahul Gandhi on 'Pegasus Project' media report pic.twitter.com/XfJSj4WCFM
ಸಂಸತ್ ಮೊದಲ ದಿನದ ಕಲಾಪದಲ್ಲಿ ಪ್ರತಿಪಕ್ಷ ನಾಯಕರು ತೋರಿದ ವರ್ತನೆಯನ್ನು ನಾನು ಖಂಡಿಸುತ್ತೇನೆ. ನಾನು ಉಭಯ ಸದನಗಳಲ್ಲಿ ಆಕಸ್ಮಿಕ ಪರಿಸ್ಥಿತಿಯನ್ನು ಕಂಡಿದ್ದೇವೆ. ರಾಜ್ಯಸಭೆಯಲ್ಲಿ ಅಧ್ಯಕ್ಷರ ಮಾತಿಗೂ ಪ್ರತಿಪಕ್ಷ ನಾಯಕರು ಅವಕಾಶ ನೀಡಲಿಲ್ಲ: ರಾಜ್ಯಸಭಾ ಸದಸ್ಯ ಪಿಯೂಶ್ ಗೋಯೆಲ್.
We condemn the manner in which Opposition MPs behaved on the first day of the session today. We saw a very unfortunate situation, both in Lok Sabha and Rajya Sabha. In Rajya Sabha, the address of the Chairman was interrupted too: Leader of House in the Rajya Sabha, Piyush Goyal pic.twitter.com/hQmrpOnDEi
ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಗದ್ದಲ ಗಲಾಟೆಯಿಂದ ಕಲಾಪ ಮಂಗಳವಾರ 11 ಗಂಟೆಗೆ ಮುಂದೂಡಿಕೆ.
3:27 PM, 19 Jul
ಕೊವಿಡ್-19 ಲಸಿಕೆ ವಿತರಣೆ ನೀತಿಗೆ ಸಂಬಂಧಿಸಿದಂತೆ ಚರ್ಚಿಸಲು ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತತ್ವದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನೊಳಗೊಂಡ ಸರ್ವಪಕ್ಷ ಸಭೆ ನಡೆಸುವ ಸಾಧ್ಯತೆಯಿದೆ.
3:44 PM, 19 Jul
ಕಳೆದ ರಾತ್ರಿ ಸಂವೇದನಾಶೀಲವಾದ ವರದಿಯನ್ನು ವೆಬ್ ಪೋರ್ಟಲ್ ವೊಂದು ಪ್ರಕಟಿಸಿದೆ. ಈ ವರದಿ ಸುತ್ತಲೂ ಹಲವು ಆರೋಪಗಳು ಕೇಳಿ ಬರುತ್ತಿವೆ. ಸಂಸತ್ ಅಧಿವೇಶನಕ್ಕೂ ಮುನ್ನ ದಿನ ನಡೆದಿರುವ ಈ ಬೆಳವಣಿಗೆಗಳು ಕಾಕತಾಳೀಯವಾಗಿರಬಾರದು: ಪೆಗಾಸಸ್ ಯೋಜನೆ ಬಗ್ಗೆ ಲೋಕಸಭೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ.
Monsoon Session of Parliament 2021 Live Updates in Kannada: The session, slated to conclude on August 13, will have a total of 19 sittings with both houses. Check live updates and highlights.