ಪಂಚಕುಲ ಗಲಭೆ: ಡೇರಾದ 45 ಸದಸ್ಯರಿಗೆ ನೋಟೀಸ್

ನವದೆಹಲಿ, ಅಕ್ಟೋಬರ್ 06: ಸ್ವಯಂಘೋಷಿತ ದೇವಮಾನವ, ಅತ್ಯಾಚಾರಿ ಬಾಬಾ ರಾಮ್ ರಹೀಮ್ ಬಂಧನದ ನಂತರ ಡೇರಾ ಸಚ್ಚಾ ಸೌದ ಸಂಘಟನೆಯ ಅನುಯಾಯಿಗಳು ಪಂಚಕುಲದಾದ್ಯಂತ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 45 ಜನರಿಗೆ ಪಂಚಕುಲ ಪೊಲೀಸರು ನೋಟೀಸ್ ನೀಡಿದ್ದಾರೆ.

ಅಕ್ಟೋಬರ್ 4 ರಂದು ಡೇರಾ ಮುಖ್ಯಸ್ಥ ರಾಮ್ ರಹೀಮ್ ದತ್ತುಪುತ್ರಿ ಹನೀಪ್ರೀತ್ ಇನ್ಸಾನ್ ಪೊಲೀಸರಿಗೆ ಶರಣಾಗಿದ್ದರು. ಹರ್ಯಾಣದ ಸಿರ್ಸಾದಲ್ಲಿರುವ ಡೇರಾ ಕೇಂದ್ರದಲ್ಲಿ ಪೊಲೀಸರು ಹಲವು ದಿನಗಳಿದ ತನಿಖೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಐಷಾರಾಮಿ ಕಾರುಗಳು, ಅಮಾನ್ಯಗೊಂಡ ನೋಟುಗಳು, ಕೆಲವು ಹಾರ್ಡ್ ಡಿಸ್ಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Panchakula police send notice to 45 Dera Members

ಹಾರ್ಡ್ ಡಿಸ್ಕ್ ಅನ್ನು ರಿಕವರಿ ಮಾಡಲಾಗಿದ್ದು, ಇದರಲ್ಲಿ ಸಂಸ್ಥೆಯ ಆದಾಯ ಮೂಲಗಳ ಕುರಿತು ಮಾಹಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಗಸ್ಟ್ 25 ರಂದು ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ನನ್ನು ಸಿಬಿಐ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿ, ನಂತರ 2 ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದನ್ನು ಖಂಡಿಸಿ ಹರ್ಯಾಣದ ಪಂಚಕುಲದಲ್ಲಿ ನಡೆದ ಗಲಭೆಯಲ್ಲಿ 41 ಜನ ಮೃತಪಟ್ಟಿದ್ದರೆ, 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+