ಪಾಕ್‌ ಕುತಂತ್ರ: ಈ ನಿರ್ಧಾರದಿಂದ ಭಾರತಕ್ಕೆ ಆರ್ಥಿಕ ನಷ್ಟ ?!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಉಗ್ರರು ದಾಳಿ ಮಾಡಿದ ಬೆನ್ನಲ್ಲೇ ಕೇಂದ್ರ ಬಿಜೆಪಿ ಸರ್ಕಾರವು ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಪಾಕಿಸ್ತಾನವು ಭಾರತದ ಮೇಲೆ ಪರಿಣಾಮ ಬೀರುವಂತಹ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು. ಇದರಿಂದ ಭಾರತಕ್ಕೆ ಆರ್ಥಿಕ ನಷ್ಟ ಎದುರಾಗುವ ಆತಂಕವೂ ಇದೆ. ಆದರೆ, ಭಾರತ ಸರ್ಕಾರ ಹಾಗೂ ಭಾರತೀಯರು ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಪಾಕಿಸ್ತಾನ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಅಲ್ಲದೇ ಭಾರತ ಕೊಟ್ಟಿರುವ ಪೆಟ್ಟಿಗೆ ವಿಲವಿಲ ಎನ್ನುತ್ತಿರುವ ಪಾಕಿಸ್ತಾನವು ಕೆಲವೊಂದು ನಿರ್ಧಾರಗಳನ್ನು ಪ್ರಕಟಿಸಿದೆ. ಏನಿದು ಪಾಕಿಸ್ತಾನ ತೆಗೆದುಕೊಂಡ ನಿರ್ಧಾರಗಳು ಇದರಿಂದ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ವಿವರ ಇಲ್ಲಿದೆ.

ಭಾರತ ಸರ್ಕಾರವು 5 ಪ್ರಮುಖ ಹಾಗೂ ಕಠಿಣ ನಿರ್ಬಂಧವನ್ನು ವಿಧಿಸಿದ ಮೇಲೆ ಇದನ್ನು ವಿರೋಧಿಸಿ, ಪಾಕಿಸ್ತಾನವೂ ಸಹ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳಿಂದ ಭಾರತದ ಮೇಲೆ ಕೆಲವೊಂದು ಪರಿಣಾಮಗಳು ಬೀರಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಭಾರತ ಹಾಗೂ ಪಾಕಿಸ್ತಾನದ ವ್ಯಾಪಾರ ಸಂಬಂಧವೂ ಸಂಪೂರ್ಣ ನೆಲಕಚ್ಚಲಿದೆ. ಇಷ್ಟಕ್ಕೂ ಪಾಕಿಸ್ತಾನ ತೆಗೆದುಕೊಂಡಿರುವ ನಿರ್ಧಾರಗಳೇನು ಅಂತ ನೋಡೋಣ.

Pakistan s Decision to Block Airspace Fears of Economic hardship for India

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸಭೆ ಕರೆದಿದ್ದು. ಇದರಲ್ಲಿ ಭಾರತದ ಮೇಲೆ ಪರಿಣಾಮ ಬೀರುವ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಅಮೃತಸರದ ವಾಘಾ ಗಡಿಯನ್ನು ಮುಚ್ಚಲು ನಿರ್ಧರಿಸಿದ್ದಾರೆ.

ಭಾರತಕ್ಕೆ ಏನೆಲ್ಲಾ ನಷ್ಟವಾಗಲಿದೆ ?

ಇನ್ನು ಪಾಕಿಸ್ತಾನದ ಈ ನಿರ್ಧಾರದಿಂದಾಗಿ ಭಾರತದ ವಿಮಾನಯಾನ ಸಂಸ್ಥೆಗಳಿಗೆ ಹಾಗೂ ವಿದೇಶಿ ಪ್ರವಾಸ ಮಾಡುವವರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಈ ನಿರ್ಧಾರದಿಂದಾಗಿ ವಿಮಾನ ಸಂಸ್ಥೆಗಳು ಪರ್ಯಾಯ ವಾಯು ಪ್ರದೇಶವನ್ನು ವಿಮಾನಗಳ ಹಾರಟಕ್ಕೆ ಬಳಸಬೇಕು ಇದರಿಂದ ದೂರ ಹೆಚ್ಚಳವಾಗಲಿದೆ ಅಲ್ಲದೇ ಪೆಟ್ರೋಲ್‌ ಬಳಕೆಯೂ ಹೆಚ್ಚಾಗಲಿದೆ. ಈ ನಷ್ಟಗಳಿಂದ ವಿಮಾನ ಸಂಸ್ಥೆಗಳಿಗೆ ಅಲ್ಪ ಪ್ರಮಾಣದ ನಷ್ಟವಾಗಲಿದೆ. ದೀರ್ಘಾವಧಿ ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ನಷ್ಟವಾಗಲಿದೆ. ವಿಮಾನಯಾನ / ವಿಮಾನದ ಟಿಕೆಟ್‌ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಯುದ್ಧಕ್ಕೆ ಸಮ ಎಂದು ಪರಿಗಣಿಸುತ್ತೇವೆ: ಇನ್ನು ಭಾರತ ಸರ್ಕಾರದ ನಿರ್ಧಾರದವನ್ನು ಪಾಕಿಸ್ತಾನವು ಖಂಡಿಸಿದೆ. ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಮೀಸಲಾಗಿರುವ ನೀರನ್ನು ತಡೆಯುವುದು ಅಥವಾ ಬೇರೆಡೆಗೆ ತಿರುಗಿಸವಂತಹ ಕ್ರಮಗಳನ್ನು ತೆಗೆದುಕೊಂಡರೆ, ಅದನ್ನು ಯುದ್ಧಕ್ಕೆ ಸಮ ಎಂದು ಪರಿಗಣಿಸುವುದಾಗಿ ಪಾಕಿಸ್ತಾನ ಹೇಳಿದೆ. ಭಾರತ ಸರ್ಕಾರದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಪಾಕಿಸ್ತಾನವು ತಿರಸ್ಕರಿಸಿದೆ. ಈ ನಿರ್ಧಾರವು 240 ಮಿಲಿಯನ್ ಪಾಕ್ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಪಾಕಿಸ್ತಾನ ಹೇಳಿದೆ.

ಪಾಕ್‌ಗೆ ಗಢಗಢ: ಭಾರತದ 5 ಪ್ರಮುಖ ನಿರ್ಧಾರಗಳಿಂದ ಪಾಕಿಸ್ತಾನಕ್ಕೆ ಗಢಗಢ ಎನ್ನಲು ಪ್ರಾರಂಭವಾಗಿದೆ. ಈಗಾಗಲೇ ಪಾಕಿಸ್ತಾನವೂ ಆರ್ಥಿಕವಾಗಿ ಸೊರಗಿ ಸುಣ್ಣವಾಗಿದೆ. ಇದೀಗ ಭಾರತದ ನಿರ್ಧಾರವು ಪಾಕಿಸ್ತಾನಕ್ಕೆ ಇನ್ನಷ್ಟು ಆರ್ಥಿಕ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+