ಪ್ರಧಾನಿ ಮೋದಿ, ಸಿಎಂ ಯೋಗಿ ಅವರಿಗೆ ಪಾಕ್ ಮಹಿಳೆ ಸೀಮಾ ಹೈದರ್ ಮನವಿ

ತನ್ನ ಪ್ರೇಮಿಯೊಂದಿಗೆ ಇರಲು ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ನುಸುಳಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತನ್ನನ್ನು ವಾಪಸ್ ಕಳುಹಿಸದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದು, ತಾನು ಗೂಢಚಾರಿಯಲ್ಲ ಎಂದು ಪುನರುಚ್ಚರಿಸಿದ್ದಾರೆ.

ಆನ್‌ಲೈನ್ ಗೇಮ್ PUBG ಆಡುವಾಗ ಭೇಟಿಯಾದ ತನ್ನ ಭಾರತೀಯ ಪ್ರೇಮಿಯೊಂದಿಗೆ ಇರಲು ಸೀಮಾ ಮೇ ತಿಂಗಳಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದಿಂದ ಭಾರತಕ್ಕೆ ಬಂದಳು.

Seema Haider

ಜುಲೈ 4ರಂದು ವೀಸಾ ಇಲ್ಲದೆ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಆಕೆಯ ಪ್ರೇಮಿ ಸಚಿನ್ ಮೀರಾ ಕೂಡ ಜೈಲು ಸೇರಿದ್ದರು. ಅವರು ಶೀಘ್ರದಲ್ಲೇ ಜಾಮೀನು ಪಡೆದರು ಮತ್ತು ಗ್ರೇಟರ್ ನೋಯ್ಡಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.

ಇಂಡಿಯಾ ಟುಡೇ/ಆಜ್ ತಕ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೀಮಾ ಹೈದರ್ ಅವರು ತಾವು ಗೂಢಚಾರರಲ್ಲ. ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಸೇನೆ ಮತ್ತು ದೇಶದ ಗುಪ್ತಚರ ಸಂಸ್ಥೆ, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನೊಂದಿಗೆ ಆಕೆಯ ಸಂಭವನೀಯ ಸಂಪರ್ಕಗಳ ಬಗ್ಗೆ ಮಾಃಇತಿ ಕಲೆ ಹಾಕುತ್ತಿವೆ.

Seema Haider

"ನಾನು ಭಾರತಕ್ಕೆ ಹೋಗುತ್ತಿದ್ದೇನೆ ಎಂದು ಪಾಕಿಸ್ತಾನದಲ್ಲಿರುವ ಯಾರಿಗಾದರೂ ತಿಳಿದಿದ್ದರೆ, ಅವರು ನನ್ನನ್ನು ಕೊಲ್ಲುತ್ತಿದ್ದರು. ನಾನು ಗೂಢಚಾರಳಲ್ಲ, ಶೀಘ್ರದಲ್ಲೇ ಸತ್ಯ ಹೊರಬರುತ್ತದೆ," ಎಂದು ಸೀಮಾ ಪಾಕಿಸ್ತಾನಕ್ಕೆ ಮರಳುವುದನ್ನು ತಳ್ಳಿಹಾಕಿದರು.

"ನನ್ನನ್ನು ಹಿಂದಕ್ಕೆ ಕಳುಹಿಸಬೇಡಿ ಎಂದು ನಾನು ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸುತ್ತೇನೆ" ಎಂದು ಅವರು ಮನವಿ ಮಾಡಿದ್ದಾರೆ. ಇದಲ್ಲದೆ, ಆರು ಗಂಟೆಗಳ ಕಾಲ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗೆ ಒಳಗಾದ ಸೀಮಾ ಅವರು ಏಜೆನ್ಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಿದರು.

Seema Haider

"ನನಗೆ ಯಾವುದೇ ಆಯ್ಕೆಯಿಲ್ಲದ ಕಾರಣ ನಾನು ಅಕ್ರಮವಾಗಿ ದಾಟಿದೆ. ನನಗೆ ಪಾಕಿಸ್ತಾನದಲ್ಲಿ ವಾಸಿಸಲು ಇಷ್ಟವಿರಲಿಲ್ಲ. ನನ್ನ ಹಿಂದಿನ ಯಾವುದೇ ಮಾಹಿತಿಯನ್ನು ನಾನು ಮರೆಮಾಡಲಿಲ್ಲ" ಎಂದು ಅವರು ಹೇಳಿದರು.

ಸೀಮಾ ಹೈದರ್ ಅವರ ವಕೀಲ ಎಪಿ ಸಿಂಗ್ ಅವರು ಇಂಡಿಯಾ ಟುಡೇಗೆ ತಿಳಿಸಿದ್ದು, ಅವರು ಸಚಿನ್ ಅವರನ್ನು ಮದುವೆಯಾಗಿರುವುದರಿಂದ ಅವರಿಗೆ ಭಾರತೀಯ ಪೌರತ್ವವನ್ನು ಕೋರಿದ್ದಾರೆ ಎಂದು ಹೇಳಿದ್ದಾರೆ. ಮದುವೆಗೂ ಮುನ್ನ ಸೀಮಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+