ಪಾಪಿ ಪಾಕಿಸ್ತಾನ ಸರ್ವನಾಶ ಆಗುವುದು ಗ್ಯಾರಂಟಿ... Operation Sindoor
ಪಾಕಿಸ್ತಾನ ಆಡುತ್ತಿರುವ ರೀತಿ ನೋಡಿದರೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಉಗ್ರರನ್ನು ಸದಾ ಪೋಷಣೆ ಮಾಡುತ್ತಾ, ಉಗ್ರರ ಪರವಾಗೇ ಬ್ಯಾಟ್ ಬೀಸುತ್ತಿರುವ ಪಾಪಿ ಪಾಕಿಸ್ತಾನ ಈಗಾಗಲೇ ಜಾಗತಿಕ ಮಟ್ಟದಲ್ಲಿ ವಿಲನ್ ಆಗಿದೆ. ಹೀಗಿದ್ದರೂ ಮತ್ತೆ ಮತ್ತೆ ಪಾಕಿಸ್ತಾನ ತನ್ನ ಬುದ್ಧಿ ತೋರಿಸುತ್ತಿದ್ದು, ಅದರ ಪರಿಣಾಮವನ್ನ ಮತ್ತೆ ಎದುರಿಸುವಂತೆ ಆಗಿದೆ.
ಪಾಕಿಸ್ತಾನದ ರಾಜಕಾರಣಿಗಳು ಮಾಡುತ್ತಿರುವ ಕೆಟ್ಟ ಕೆಲಸಕ್ಕೆ ಇಡೀ ಪಾಕಿಸ್ತಾನದ ಜನರೆಲ್ಲಾ ನರಳುವ ಸ್ಥಿತಿ ಇದೆ. ಅದ್ರಲ್ಲೂ ತಮ್ಮದೇ ಜಾಗ ಆಗಿದ್ದರೂ ಬಲೂಚಿಸ್ತಾನ & ಖೈಬರ್ ಪ್ರಾಂತ್ಯದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದೆ ಪಾಕಿಸ್ತಾನ ಮಿಲಿಟರಿ. ಇದರ ಪರಿಣಾಮ, ಪಾಕಿಸ್ತಾನದ ವಿರುದ್ಧ ಸ್ವಂತ ನೆಲದಲ್ಲೇ ಕಿಚ್ಚು ಹೊತ್ತಿಕೊಂಡಿದೆ. ಸ್ವತಃ ಪಾಕಿಸ್ತಾನದ ಸೇನೆ ವಿರುದ್ಧ ಪ್ರಬಲವಾಗಿ ನಿಂತಿರುವ ಸ್ಥಳೀಯ ಬುಡಕಟ್ಟು ಪಡೆಗಳು ಯುದ್ಧ ಆರಂಭಿಸಿವೆ. ಈ ಸಮಯದಲ್ಲೇ ಭಾರತ ಕೂಡ ದಾಳಿ ಶುರು ಮಾಡಿರುವುದು ಕಿಚ್ಚು ಹೊತ್ತಿಸಿದೆ.

ಪಾಕಿಸ್ತಾನ ನಾಶವಾಗಿ ಹೋಗುವುದು ಗ್ಯಾರಂಟಿ!
ಹೌದು, ಭಾರತದ ವಿರುದ್ಧ ಇದೀಗ ಯುದ್ಧ ಶುರು ಮಾಡುವುದಾಗಿ ಪೋಸ್ ಕೊಡುತ್ತಿರುವ ಪಾಪಿ ಪಾಕಿಸ್ತಾನ ತನ್ನ ಬುಡಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದೆ. ಯಾಕಂದ್ರೆ ಒಂದು ಕಡೆಯಲ್ಲಿ ಭಾರತೀಯ ಸೇನೆ ದಾಳಿ ಶುರು ಮಾಡಿದೆ, ಹಾಗೇ ಇನ್ನೊಂದು ಕಡೆ ಬಲೂಚಿಸ್ತಾನ ಹಾಗೂ ಖೈಬರ್ ಪ್ರಾಂತ್ಯದ ಕಡೆಯಿಂದಲೂ ದಾಳಿ ಶುರು ಆಗುತ್ತಿದೆ. ಹೀಗಿದ್ದಾಗ, ಅಫ್ಘಾನಿಸ್ತಾನದ ಸೇನೆ ಕೂಡ ಅಟ್ಯಾಕ್ ಮಾಡಲು ಮುಂದಾಗಿದೆ. ಈ ಎಲ್ಲಾ ಕಾರಣಕ್ಕೆ ಪಾಕಿಸ್ತಾನ ಪೂರ್ತಿ ಮುಳುಗಿ ಹೋಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ರಿವೇಂಜ್ ತೆಗೆದುಕೊಂಡ ಭಾರತೀಯ ಸೇನೆ
ಪಾಕಿಸ್ತಾನದ ವಿರುದ್ಧ ಸಂಪೂರ್ಣ ತಯಾರಿ ಮಾಡಿಕೊಂಡು ಭಾರತ ಸೇನೆ ದಾಳಿ ನಡೆಸಿತ್ತು. ಭಾರತ ಸೇನೆಯಿಂದ ಪಾಕ್ ಆಕ್ರಮಿತ ಕಾಶ್ಮೀರ ಮೇಲೆ ದಾಳಿನ ಮಾಡಲಾಗಿತ್ತು. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ 24 ಪ್ರದೇಶಗಳ ಮೇಲೆ ಹೀಗೆ ಭಾರಿ ದೊಡ್ಡ ಪ್ರಮಾಣದಲ್ಲೇ ಕ್ಷಿಪಣಿ ದಾಳಿ ನಡೆಸಿ ತಕ್ಕಪಾಠ ಕಲಿಸಲಾಗಿದೆ.
ಅಂದಹಾಗೆ ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ರಿವೇಂಜ್ ತೆಗೆದುಕೊಂಡಿದೆ. ಈ ಕಾರಣಕ್ಕೆ ಪಾಪಿ ಪಾಕಿಸ್ತಾನ ಸೇನೆ ಕೂಡ ದಾಳಿಯನ್ನ ಆರಂಭ ಮಾಡಿದ್ದು, ಸರಿಯಾಗೇ ಏಟು ತಿನ್ನುತ್ತಿದೆ ಪಾಪಿ ಪಾಕಿಸ್ತಾನ. ಮೊದಲೇ ತಿನ್ನಲು ಅನ್ನ ಇಲ್ಲದೆ ನರಳುತ್ತಿರುವ & ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಇದೀಗ ಯುದ್ಧ ಕೂಡ ಹೊರೆ ಆಗಲಿದೆ.












Click it and Unblock the Notifications