India vs Pakistan: ಜಮ್ಮು, ರಾಜಸ್ಥಾನ ಗಡಿ ನಾಗರಿಕರ ಗುರಿಯಾಗಿಸಿ ಪಾಕ್ ದಾಳಿ: ಕೌಂಟರ್ ಅಟ್ಯಾಕ್
India Pakistan War Update: ಭಾರತ ಪಾಕಿಸ್ತಾನದ ಮಧ್ಯೆ ಯುದ್ಧ ಮುಂದುವರೆದಿದೆ. ಪಾಕಿಸ್ತಾನ ಭಾರತ ನಾಗರಿಕರನ್ನು ಟಾರ್ಗೆಟ್ ಮಾಡಿ ಮಿಸೈಲ್, ಡ್ರೋನ್ ದಾಳಿಗೆ ಮಾಡುತ್ತಿದೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದಷ್ಟು ಕಡೆ ದಾಳಿ ಮಾಡಿದೆ. ಪಾಕಿಸ್ತಾನದ ಶೆಲ್ ದಾಳಿಯಿಂದ ಜಮ್ಮು ನಗರದ ನಾಗರಿಕ ಪ್ರದೇಶಗಳು ಹಾನಿಗೊಳಗಾಗಿವೆ ಎಂದು ವರದಿ ಆಗಿದೆ. ಈ ಪಾಕಿಸ್ತಾನದ ಕೆಟ್ಟ ಬುದ್ಧಿಗೆ ಕೆಲವೇ ಗಂಟೆಗಳಲ್ಲಿ ಭಾರತ ಉತ್ತರಿಸಲಿದೆ. ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಶಾಸಕರು ಪ್ರತಿಕ್ರಿಯಿಸಿದ್ದಾರೆ.
ಜಮ್ಮುವಿನ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಗುಪ್ತಾ ಮಾತನಾಡಿ, ಇಂದು ಶನಿವಾರ ಬೆಳಗ್ಗೆ 5.40 ರ ಸುಮಾರಿಗೆ ನಮ್ಮ ಮನೆಯಿಂದ ಸುಮಾರ 50 ಮೀಟರ್ ದೂರದಲ್ಲಿ ಹಠಾತ್ ಶಬ್ದ ಕೇಳಿ ಬಂತು. ನೋಡಿದರೆ ಇಲ್ಲಿ ಪಾಕಿಸ್ತಾನ ದಾಳಿ ಮಾಡಿರುವುದು ಗೊತ್ತಾಗಿದೆ. ವಿಷಯ ತಿಳಿದು ಇಲ್ಲಿ ಪರಿಶೀಲಿಸಲಾಗುತ್ತದೆ. ಭಾರತೀಯ ಸೇನೆಯೊಂದಿಗೆ ನೇರ ಹೋರಾಟ ನಡೆಸಲು ಪಾಕಿಸ್ತಾನಕ್ಕೆ ಧೈರ್ಯವಿಲ್ಲ. ಆದ್ದರಿಂದ, ಅದು ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆ.

ಜಮ್ಮು ನಗರದಲ್ಲಿ ಭೀತಿಯನ್ನು ಉಂಟು ಮಾಡುವ ಕಾರಣದಿಂದಲೇ ವಸತಿ ಪ್ರದೇಶಗಳ ಮೇಲಿನ ದಾಳಿ ಮಾಡಲಾಗಿದೆ. ಇಂತಹ ಘಟನೆಗಳು ಎಲ್ಲಿ ನಡೆದರೂ ಅಲ್ಲಿ ಮತ್ತೆ ದಾಳಿ ನಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಯಾ ಭಾಗದ ಜನರು ಗುಂಪು ಸೇರಬಾರದು ಎಂದು ಅವರು ಮನವಿ ಮಾಡಿದರು.
ಇತ್ತ ರಾಜಸ್ಥಾನದ ಬಾರ್ಮರ್‌ನಲ್ಲಿ ಪಾಕಿಸ್ತಾನದ ಮಿಸೈಲ್ ಅವಶೇಷ ಪತ್ತೆಯಾಗಿದೆ. ಇದು ನಾಗರಿಕರನ್ನು ಗುರಿಯಾಗಿಸಿಕೊಂಡು ಹಾನಿ ಉಂಟು ಮಾಡಲು ಹಾರಿದ್ದ ಕ್ಷಿಪಣಿ ಆಗಿದೆ. ಆದರೆ ಇದರಿಂದ ಸ್ಥಳದಲ್ಲಿ ಯಾವುದೇ ಹಾನಿ ಆಗಿಲ್ಲ. ಮೇಲ್ನೋಟ್ಕ್ಕೆ ಇದು ಸೆಲ್ ದಾಳಿ ಅಂತಲೂ ಅನ್ನಿಸುತ್ತಿದೆ. ನೆಲಕ್ಕ ಬಿದ್ದ ಪಾಕ್ ಉಪಕರಣ ಭಾರತೀಯ ಸೇನೆ ಪರಿಶೀಲಿಸಿ ದೃಢಪಡಿಸಲಿದೆ.
ಗುಜರಾತ್, ಪಂಜಾಬ್, ರಾಜಸ್ಥಾನ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿಮಾನ ಮಾರ್ಗಗಳ ಸ್ಥಗಿತಗೊಳಿಸಿದೆ. ಗಡಿ ಭಾಗದ ನಾಗರಿಕರನ್ನು ಗುರಿಯಾಗಿ ಪಾಕಿಸ್ತಾನ ದಾಳಿ ಆರಂಭಿಸಿದೆ. ಇದಕ್ಕೆ ಭಾರತೀಯ ಮಿಲಿಟರಿ ಪಡೆ ಈಗಾಗಲೇ ಕೌಂಟರ್ ಅಟ್ಯಾಕ್ ನೀಡಿದೆ. ಅದೆಷ್ಟೋ ಪಾಕ್ ಮಿಸೈಲ್ , ಡ್ರೋನ್‌ಗಳನ್ನು ಬ್ಲಾಕ್ ಮಾಡಿದೆ.












Click it and Unblock the Notifications