ಭಾರತ ಮಾತೆಗೆ ಜೈ... ಭಾರತ ಮಾತೆಗೆ ಜೈ ಅಂತಿದ್ದಾರೆ ಪಾಕಿಸ್ತಾನ ಪ್ರಜೆಗಳು... Operation Sindoor
ಪಾಕಿಸ್ತಾನ ಅಂದ್ರೆ ಜನ ಕೋಪ ಮಾಡಿಕೊಳ್ಳುತ್ತಾರೆ, ಯಾಕಂದ್ರೆ ಪಾಪಿ ಪಾಕಿಸ್ತಾನ ಇದೀಗ ಜಗತ್ತಿನ ವಿಲನ್ ದೇಶವಾಗಿದೆ. ಪಾಪಿ ಪಾಕಿಸ್ತಾನದ ರಾಜಕಾರಣಿಗಳು ಉಗ್ರರನ್ನು ಪೋಷಣೆ ಮಾಡುತ್ತಾ, ಇಡೀ ಪ್ರಪಂಚಕ್ಕೆ ವಿಲನ್ ಆಗಿದ್ದಾರೆ. ಪಾಕಿಸ್ತಾನ ರಾಜಕಾರಣಿಗಳನ್ನ ಕಂಡರೆ ಸ್ವತಃ ಪಾಕಿಸ್ತಾನದ ಪ್ರಜೆಗಳಿಗೂ ಅಲರ್ಜಿ ಎನ್ನಬಹುದು. ಹೀಗಿದ್ದಾಗಲೇ, ಭಾರತ ಮಾತೆಗೆ ಜೈ... ಭಾರತ ಮಾತೆಗೆ ಜೈ ಅಂತಿದ್ದಾರೆ ಪಾಕಿಸ್ತಾನ ಪ್ರಜೆಗಳು...
ಪಾಕಿಸ್ತಾನದ ಒಳಗೆ ನೂರಾರು ಹುಳುಕು ಇದೆ, ಸ್ವತಃ ತಮ್ಮದೇ ಪ್ರಜೆಗಳನ್ನು ಕೂಡ ಪಾಪಿ ಪಾಕಿಸ್ತಾನದ ರಾಜಕಾರಣಿಗಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಬಡತನ, ಹಸಿವು, ದಾರಿದ್ರ್ಯ ಅಲ್ಲಿನ ಜನರನ್ನು ಕಾಡುತ್ತಲೇ ಇದೆ. ಹೀಗಿದ್ದಾಗ ಸ್ವತಃ ತಮ್ಮದೇ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ಹೊಂದಿದ್ದಾರೆ ಪಾಕಿಸ್ತಾನದ ಜನ. ಇಷ್ಟೆಲ್ಲದರ ನಡುವೆ ಯುದ್ಧ ಬೇರೆ ಶುರುವಾಗಿ ಹೋಗಿದ್ದು, ಭಾರತೀಯ ಸೇನೆ ಸರಿಯಾಗಿ ಏಟು ಕೊಡುತ್ತಿದೆ ಪಾಕಿಸ್ತಾನಕ್ಕೆ. ಇಂತಹ ಭಾರಿ ಸೂಕ್ಷ್ಮ ಸಮಯದಲ್ಲೇ ಭಾರತ ಮಾತೆಗೆ ಜೈ... ಭಾರತ ಮಾತೆಗೆ ಜೈ ಅಂತಿದ್ದಾರೆ ಪಾಕಿಸ್ತಾನ ಪ್ರಜೆಗಳು! ಯಾಕೆ ಗೊತ್ತಾ?

ಭಾರತ ಮಾತೆಗೆ ಜೈ...
ಪಾಕಿಸ್ತಾನದ ರಾಜಕಾರಣಿಗಳಿಗೆ ಮಾತ್ರ ಭಾರತವನ್ನು ಕಂಡರೆ ದ್ವೇಷ ಇದೆ. ಆದರೆ ಪಾಕ್‌ನ ಸಾಮಾನ್ಯ ಜನರಿಗೆ ಮಾತ್ರ ಭಾರತವನ್ನು ಕಂಡರೆ ಇಂದಿಗೂ ಪ್ರೀತಿ ಇದೆ. ಅಲ್ಲದೆ ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಪಾಕಿಸ್ತಾನದ ಜನರು, ಭಾರತೀಯರನ್ನು ತುಂಬಾ ಪ್ರೀತಿಯಿಂದ ನೋಡುತ್ತಾರೆ. ಈಗಲೂ ಅಷ್ಟೇ ಯುದ್ಧ ಶುರುವಾದ ನಂತರ ಪಾಕಿಸ್ತಾನದ ಜನ ಭಾರತಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಉಗ್ರರನ್ನು ಬೆಂಬಲಿಸುವ ಪಾಪಿ ಪಾಕಿಸ್ತಾನ ಸರ್ಕಾರ & ಪಾಪಿ ಪಾಕ್ ಸೇನೆಯ ತಪ್ಪು ದೊಡ್ಡದಾಗಿದೆ ಅಂತಾ ಪಾಕಿಸ್ತಾನದ ಜನ ಸೋಷಿಯಲ್ ಮೀಡಿಯಾಗಳಲ್ಲಿ ಈಗ ಹೇಳುತ್ತಿದ್ದಾರೆ. ಈ ಮೂಲಕ ಭಾರತ ಮಾತೆಗೆ ಜೈ... ಅಂತಿದ್ದಾರೆ ಪಾಕ್ ಜನರು.
ರಿವೇಂಜ್ ತೆಗೆದುಕೊಂಡ ಭಾರತೀಯ ಸೇನೆ
ಪಾಕಿಸ್ತಾನದ ವಿರುದ್ಧ ಸಂಪೂರ್ಣ ತಯಾರಿ ಮಾಡಿಕೊಂಡು ಭಾರತ ಸೇನೆ ದಾಳಿ ನಡೆಸಿತ್ತು. ಭಾರತ ಸೇನೆಯಿಂದ ಪಾಕ್ ಆಕ್ರಮಿತ ಕಾಶ್ಮೀರ ಮೇಲೆ ದಾಳಿನ ಮಾಡಲಾಗಿತ್ತು. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ 24 ಪ್ರದೇಶಗಳ ಮೇಲೆ ಹೀಗೆ ಭಾರಿ ದೊಡ್ಡ ಪ್ರಮಾಣದಲ್ಲೇ ಕ್ಷಿಪಣಿ ದಾಳಿ ನಡೆಸಿ ತಕ್ಕಪಾಠ ಕಲಿಸಲಾಗಿದೆ.
ಅಂದಹಾಗೆ ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾಗಿದ್ದ ಹಿನ್ನೆಲೆ ಭಾರತೀಯ ಸೇನೆ ಉಗ್ರರ ವಿರುದ್ಧ ರಿವೇಂಜ್ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ಪಾಪಿ ಪಾಕಿಸ್ತಾನ ಸೇನೆ ಕೂಡ ದಾಳಿಯನ್ನ ಆರಂಭ ಮಾಡಿದ್ದು, ಸರಿಯಾಗೇ ಏಟು ತಿನ್ನುತ್ತಿದೆ ಪಾಪಿ ಪಾಕಿಸ್ತಾನ. ಅಷ್ಟಕ್ಕೂ ಮೊದಲೇ ತಿನ್ನಲು ಅನ್ನ ಇಲ್ಲದೆ ನರಳುತ್ತಿರುವ & ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಇದೀಗ ಯುದ್ಧ ಕೂಡ ಹೊರೆ ಆಗಲಿದೆ.












Click it and Unblock the Notifications