ಕಾಸು.. ಕಾಸು.. ಕಾಸು.. ಕಾಸಿಗಾಗಿ ಪಾಕಿಸ್ತಾನದ ಪರದಾಟ!
ಪಾಕಿಸ್ತಾನ ಸದಾ ಉಗ್ರರಿಗೆ ರಕ್ಷಣೆ ನೀಡುತ್ತಾ, ಪಾಕಿಸ್ತಾನದಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾ ತನ್ನ ಕಾಲಿನ ಮೇಲೆ ತಾನೇ ಚಪ್ಪಡಿ ಕಲ್ಲು ಹಾಕಿಕೊಂಡಿದೆ. ಹೀಗಾಗಿ ಪಾಕ್‌ನ ಆರ್ಥಿಕ ಪರಿಸ್ಥಿತಿ ಬೀದಿಗೆ ಬಿದ್ದು, ಪಾಕಿಸ್ತಾನ ಕೈಯಲ್ಲಿ ಕಾಸು ಇಲ್ಲದೆ ಬಡತನದ ಬೇಗೆ ಅನುಭವಿಸುತ್ತಾ ನಲುಗಿ ಹೋಗಿದೆ. ಇದೇ ಸಮಯದಲ್ಲಿ ಮತ್ತೊಂದು ಬ್ರೇಕಿಂಗ್ ಸುದ್ದಿಯೂ ಸಿಕ್ಕಿದ್ದು, IMF ಪಾಕ್‌ನ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಕಳೆದ 20 ವರ್ಷದಿಂದ ಕೂಡ ಪಾಕಿಸ್ತಾನ ಕೈಯಲ್ಲಿ ಹಣ ಇಲ್ಲದೆ ನಲುಗಿ ಹೋಗಿದೆ. ಆದ್ರೆ ತನ್ನ ಪರಿಸ್ಥಿತಿ ಸರಿ ಮಾಡಿಕೊಳ್ಳುವ ಬದಲು, ಸದಾ ಭಾರತದ ವಿರುದ್ಧ ಕುತಂತ್ರ ಮಾಡುತ್ತಾ ಪಾಕಿಸ್ತಾನ ತನ್ನನ್ನೇ ತಾನು ನಾಶ ಮಾಡಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಅನಿವಾರ್ಯತೆ ಎದುರಾಗಿ ಕಂಡ ಕಂಡ ದೇಶಗಳ ಬಳಿ ಸಾಲ ಮಾಡಿದೆ ಪಾಕಿಸ್ತಾನ. ಅದೇ ರೀತಿ 'ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ' ಅಂದರೆ IMF ಬಳಿ ಕೂಡ ಸಾಲ ಮಾಡಿದೆ ಪಾಕಿಸ್ತಾನ. ಆದ್ರೆ ಈ ಬಗ್ಗೆ ಇದೀಗ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಮೈತುಂಬಾ ಸಾಲ ಮಾಡಿದೆ ಪಾಕಿಸ್ತಾನ!
ಪಾಕಿಸ್ತಾನದ ಬಳಿ 1 ರೂಪಾಯಿ ಆದಾಯ ಇದ್ದರೆ 1000 ರೂಪಾಯಿ ಸಾಲ ಮಾಡುತ್ತಿದೆ. ಯಾಕಂದ್ರೆ ಪಾಕಿಸ್ತಾನದ ಬಳಿ ಹಣವೇ ಇಲ್ಲ, ಹೀಗಾಗಿ ನರಳಾಡುತ್ತಿದೆ. ದೇಶವನ್ನು ಮುನ್ನಡೆಸಲು ಕೂಡ ಈಗ ಪಾಕಿಸ್ತಾನದ ಬಳಿ ದುಡ್ಡೇ ಇಲ್ಲ. ಹೀಗಾಗಿ ಅನಿವಾರ್ಯ ಪರಿಸ್ಥಿತಿ ಕಾರಣಕ್ಕೆ ಕಂಡ ಕಂಡ ಕಡೆಗೆಲ್ಲ ಸಾಲ ಮಾಡುತ್ತಿದೆ ಪಾಕಿಸ್ತಾನ. ಅದರಲ್ಲೂ 'ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ' ಅಂದರೆ IMFನ ಬಳಿ ಕೂಡ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿದೆ ಪಾಕಿಸ್ತಾನ. ಹೀಗಾಗಿ, ಇದೀಗ ಈ ಕುರಿತು ಪಾಕ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದೆ ಐಎಂಎಫ್.
ಸಾಲ ಮಾಡಿ ನಾಶವಾಗಿ ಹೋಗ್ತೀರಿ!
IMF ಅಧಿಕಾರಿಗಳು ಈಗ ಪಾಕಿಸ್ತಾನಕ್ಕೆ ನೇರವಾಗಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅದು ಏನೆಂದರೆ, ಪಾಕಿಸ್ತಾನ ಕೂಡಲೇ ತನ್ನ ಆರ್ಥಿಕ ಪರಿಸ್ಥಿತಿ ಸರಿ ಮಾಡಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಲಿದೆ. ಆಗ ಏನೂ ಮಾಡಲು ಆಗಲ್ಲ, ಪಾಕಿಸ್ತಾನದ ಜನರಿಗೂ ಇದರಿಂದ ನಷ್ಟ ಎದುರಾಗಲಿದೆ ಎಂದಿದ್ದಾರೆ. ಅಲ್ಲದೆ ಪಾಕಿಸ್ತಾನ ಸರ್ಕಾರ ಈಗ ಪಾಕ್ ಆರ್ಥಿಕತೆಯ ಸುಧಾರಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು 'ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ' ಅಧಿಕಾರಿ ವರ್ಗ ಸಲಹೆ ನೀಡಿದೆ.












Click it and Unblock the Notifications