ಭಾರತದ ವಿಚಾರದಲ್ಲಿ ಅಯ್ಯಯ್ಯೋ ತಪ್ಪು ಮಾಡಿದ್ದೀವಿ!
ಭಾರತದ ಶತ್ರು ಪಾಕಿಸ್ತಾನ ಈ ಜನ್ಮದಲ್ಲಿ ಬದಲಾಗುವುದಿಲ್ಲ, ಪಾಕಿಸ್ತಾನ ಮತ್ತು ಅಲ್ಲಿರುವ ರಾಜಕಾರಣಗಳ ಬುದ್ಧಿ ನಾಯಿ ಬಾಲದಂತೆ ಎಂಬ ಆರೋಪಗಳ ನಡುವೆ ಇದೀಗ ಪಾಕಿಸ್ತಾನ ಬದಲಾವಣೆ ಹಾದಿಗೆ ಮರಳುತ್ತಿದೆ. ಅದರಲ್ಲೂ ಭಾರತದ ಜೊತೆಗೆ ಇಷ್ಟು ದಿನ ಪಾಕಿಸ್ತಾನದ ರಾಜಕಾರಣಿಗಳು ಮಾಡಿಕೊಂಡ ಎಡವಟ್ಟು ಈಗ ಅಲ್ಲಿನ ಮಾಜಿ ಪ್ರಧಾನಿಗೆ ಅರಿವಾಗಿದೆ.
ಭಾರತ ವೇಗವಾಗಿ ಬೆಳೆಯುತ್ತಿದ್ದು, ಜಾಗತಿಕವಾಗಿ ಆರ್ಥಿಕ ಶಕ್ತಿಯಾಗುತ್ತಿದೆ. ಆದರೆ ಭಾರತ ವಿರೋಧಿ ಮನಸ್ಥಿತಿ ಇರುವ ಪಾಕಿಸ್ತಾನ ಮಾತ್ರ ಪ್ರತಿ ದಿನವೂ ಒಂದೊಂದು ತುತ್ತು ಅನ್ನಕ್ಕೆ & ಗೋಧಿ ಹಿಟ್ಟಿಗೂ ರಕ್ತ ಹರಿಸುವ ಪರಿಸ್ಥಿತಿಗೆ ಸಿಲುಕಿದೆ. ಹೀಗಿದ್ದಾಗ ಭಾರತದ ಜೊತೆಯಲ್ಲಿ ಮತ್ತೊಮ್ಮೆ ಸಂಬಂಧ ಸರಿ ಮಾಡಿಕೊಳ್ಳಿ, ಆಗ ಮಾತ್ರ ಪಾಕಿಸ್ತಾನಕ್ಕೆ ಉಳಿಗಾಲ ಅಂತಿದ್ದಾರೆ ಪಾಕಿಸ್ತಾನದ ಉದ್ಯಮಿಗಳು. ಹೀಗೆ ಉದ್ಯಮಿಗಳ ಸಲಹೆ ನಡುವೆ ಪಾಕಿಸ್ತಾನದ ರಾಜಕೀಯ ನಾಯಕರು ಕೂಡ ಬಣ್ಣ ಬದಲಿಸುತ್ತಿದ್ದು, ಭಾರತದ ಜೊತೆಗೆ ಪರೋಕ್ಷವಾಗಿ ಮೈತ್ರಿಯನ್ನ ಮಾಡಿಕೊಳ್ಳಲು ಸಿದ್ಧ ಎಂಬ ಸಂದೇಶ ಕಳುಹಿಸುತ್ತಿದ್ದಾರೆ.

ವಾಜಪೇಯಿ ಅವರ ವಿಚಾರ ಪ್ರಸ್ತಾಪ!
ಹೌದು, ಭಾರತದ ಜೊತೆಗೆ ಪಾಕಿಸ್ತಾನ ಮಾಡಿಕೊಂಡ ಎಡವಟ್ಟುಗಳ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆಗಿನ ಒಪ್ಪಂದವನ್ನ ಪಾಕಿಸ್ತಾನ ಮುರಿದು ದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ. ನವಾಜ್ ಷರೀಫ್ ಮತ್ತು ವಾಜಪೇಯಿ ಅವರು 1999 ರಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಇಸ್ಲಾಮಾಬಾದ್ ಮುರಿಯಿತು, ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಬೇಸರ ಹೊರಹಾಕಿದ್ದಾರೆ.
ಪಾಕಿಸ್ತಾನ ಮಾಡಿದ್ದೇ ದೊಡ್ಡ ತಪ್ಪು!
ಪಾಕಿಸ್ತಾನದ ಅಣ್ವಸ್ತ್ರ ಪರೀಕ್ಷೆ ಒಪ್ಪಂದಗಳ ಬಗ್ಗೆ ಕೂಡ ಮಾತನಾಡಿರುವ, ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹಳೆಯ ತಪ್ಪು ನೆನಪು ಮಾಡಿಕೊಂಡಿದ್ದಾರೆ. 1998ರ ಮೇ ವೇಳೆ ಪಾಕಿಸ್ತಾನ 5 ಅಣ್ವಸ್ತ್ರ ಪರೀಕ್ಷೆ ಮಾಡಿತ್ತು. ಈ ಘಟನೆ ಬಳಿಕ ಅಂದಿನ ಭಾರತದ ಪ್ರಧಾನಿ, ವಾಜಪೇಯಿ ಸಾಹೇಬರು ಇಲ್ಲಿಗೆ ಬಂದಿದ್ದರು. ಆಗ ನಮ್ಮ ಜತೆಗೆ ಒಪ್ಪಂದ ಮಾಡಿಕೊಂಡರು. ಆ ಒಪ್ಪಂದವನ್ನ ನಾವೇ ಮುರಿದೆವು, ಅದು ಪಾಕಿಸ್ತಾನದ ದೊಡ್ಡ ತಪ್ಪು ಎಂದಿದ್ದಾರೆ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್.
ಮುಷರಫ್ ಮುಠ್ಠಾಳ ಬುದ್ಧಿ!
ಇದರ ಜೊತೆಗೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮಾಡಿಕೊಂಡ ಎಡವಟ್ಟುಗಳ ಬಗ್ಗೆಯೂ ಮಾತನಾಡಿರುವ ನವಾಜ್ ಷರೀಫ್, ಭಾರತ & ಪಾಕಿಸ್ತಾನದ ನಡುವೆ ಸೌಹಾರ್ದತೆ ಸ್ಥಾಪಿಸಲು 1999 ರಲ್ಲಿ ಒಪ್ಪಂದ ನಡೆದಿತ್ತು. ಹೀಗಿದ್ದಾಗ, ಆಗಿನ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಮಾಡಿಕೊಂಡ ಎಡವಟ್ಟು ದೊಡ್ಡ ಸಮಸ್ಯೆ ತಂದೊಡ್ಡಿತ್ತು. ಮುಷರಫ್ ಅವರ ನಿರ್ಧಾರದಿಂದ ಕೆಲವೇ ತಿಂಗಳುಗಳ ನಂತರ ಕಾರ್ಗಿಲ್ ಯುದ್ಧ ನಡೆಯುವ ಸ್ಥಿತಿ ಎದುರಾಗಿತ್ತು, ಎಂದು ಬೇಸರ ಹೊರಹಾಕಿದ್ದಾರೆ ನವಾಜ್ ಷರೀಫ್.












Click it and Unblock the Notifications