ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಚುನಾವಣೆ ಫಲಿತಾಂಶ: ಇಮ್ರಾನ್‌ ಖಾನ್‌ ಪಕ್ಷಕ್ಕೆ ಆರಂಭಿಕ ಮುನ್ನಡೆ

|
Google Oneindia Kannada News

ಇಸ್ಲಾಮಾಬಾದ್, ಜುಲೈ 25: ಪಾಕಿಸ್ತಾನದ ಸಾರ್ವತ್ರಿಕ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಮತ ಎಣಿಕೆ ಕಾರ್ಯವೂ ಪ್ರಾರಂಭವಾಗಿದ್ದು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಆರಂಭಿಕ ಮುನ್ನಡೆ ಗಳಿಸಿದ್ದಾರೆ.

ಅಲ್ಲಲ್ಲಿ ಬಾಂಬ್ ದಾಳಿಯಿಂದ ಹಿಂಸಾಚಾರಗಳನ್ನು ಕಂಡರೂ ಮತದಾನವಂತೂ ಮುಗಿದಿದ್ದು ಬೆನ್ನಲ್ಲೇ ಮತ ಎಣಿಕೆ ಪ್ರಾರಂಭವಾಗಿದೆ. ಇಂದು ಮಧ್ಯ ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಲಿದ್ದು. ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದನ್ನು ಈ ಫಲಿತಾಂಶ ನಿರ್ಧರಿಸಲಿದೆ.

Pakistan elections: Imran Khans PPT party is on leading

ಈಗಾಗಲೇ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ ಪಕ್ಷ ಆರಂಭಿಕ ಮುನ್ನಡೆ ಗಳಿಸಿದ್ದು 62 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಸರ್ಕಾರ ರಚಿಸಲು ಒಟ್ಟು 137 ಸ್ಥಾನಗಳಲ್ಲಿ ಜಯಗಳಿಸಬೇಕಿದೆ.

ಪಾಕಿಸ್ತಾನ ಚುನಾವಣೆ: ಹತ್ತು ಪ್ರಮುಖ ಅಂಶಗಳುಪಾಕಿಸ್ತಾನ ಚುನಾವಣೆ: ಹತ್ತು ಪ್ರಮುಖ ಅಂಶಗಳು

ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಪಾಲಾಗಿರುವ ನವಾಜ್ ಶರೀಫ್ ಅವರ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್ 46 ಸ್ಥಾನಗಳಲ್ಲಿ ಜಯಗಳಿಸಿ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಬಿಲಾವಲ್ ಬುಟ್ಟೋ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 22 ಸ್ಥಾನಗಳಲ್ಲಿ ಜಯಿಸಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.

ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯ

ಇಮ್ರಾನ್ ಖಾನ್ ಅವರ ಪಿಪಿಟಿ ಪಕ್ಷಕ್ಕೆ ಸರಳ ಬಹುಮತ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಅವರ ಪಕ್ಷಕ್ಕೆ ಸೇನೆಯ ಬೆಂಬಲೂ ಇದೆ. ಇಮ್ರಾನ್ ಖಾನ್ ಪ್ರಧಾನಿಯಾದರೆ ಭಾರತ-ಪಾಕ್‌ ಸಂಬಂಧ ಮತ್ತಷ್ಟು ಹದಗೆಡುವ ಆತಂಕವೂ ಇದೆ.

English summary
Pakistan elections voting has been complete and now the counting started. As per now Imran Khan's PPT party is leading with 62 seats in its pocket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X