ಬದುಕಬೇಕು ಅಂದ್ರೆ ಭಾರತದ ಕಾಲು ಹಿಡಿಯಬೇಕು ಪಾಕಿಸ್ತಾನ!
ಭಾರತ ಈಗ ಜಗತ್ತಿಗೆ ಬಾಸ್ ಆಗುವ ಗುರಿ ಇಟ್ಟುಕೊಂಡು ಮುನ್ನುಗ್ಗುತ್ತಿದೆ ಸ್ವಾತಂತ್ರ್ಯವನ್ನ ಪಡೆದು ಕಳೆದ 70 ವರ್ಷದಲ್ಲಿ ಭಾರಿ ದೊಡ್ಡ ಬದಲಾವಣೆ ಕಂಡಿದೆ ಭಾರತ. ಅದೇ ನಮ್ಮ ಪಕ್ಕದಲ್ಲೇ ಇರುವ ಪಾಕಿಸ್ತಾನ ಮಾತ್ರ ಬುದ್ಧಿ ಕಲಿಯುತ್ತಿಲ್ಲ, ಪಾಕಿಸ್ತಾನ ಆರ್ಥಿಕವಾಗಿಯು ಹೀನಾಯ ಪರಿಸ್ಥಿತಿಗೆ ತಲುಪಿದೆ. ಹೀಗಾಗಿ ಪಾಕಿಸ್ತಾನ ಈಗ ಬದುಕಬೇಕು ಅಂದ್ರೆ ಭಾರತದ ಕಾಲು ಹಿಡಿಯಬೇಕಿದೆ, ಹಾಗಂತಾ ಈ ಮಾತು ನಾವು ಹೇಳುತ್ತಿಲ್ಲ ಬದಲಾಗಿ ಪಾಕಿಸ್ತಾನದ ಉದ್ಯಮಿಗಳೇ ಹೇಳುತ್ತಿದ್ದಾರೆ!
ಹೌದು ಪಾಕಿಸ್ತಾನದ ಆರ್ಥಿಕ ಸ್ಥಿತಿ ಸರಿ ಮಾಡಲು ಅಲ್ಲಿನ ಸರ್ಕಾರ ಪರದಾಡುತ್ತಿದೆ. ಹೀಗೆ ಪಾಕಿಸ್ತಾನದಲ್ಲಿ ಕೈಮೀರಿ ಹೋಗಿರುವ ಆರ್ಥಿಕ ವ್ಯವಸ್ಥೆ, ಪಾಕ್‌ನ ಜನರ ಜೀವ ಹಿಂಡುತ್ತಿದೆ. ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಪಾಕಿಸ್ತಾನದ ಜನ ಪರದಾಡುತ್ತಿದ್ದಾರೆ. ಹೀಗಿದ್ದಾಗ ಪಾಕಿಸ್ತಾನ ತನ್ನ ವ್ಯಾಪಾರ & ವಹಿವಾಟು ಸರಿ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ಪಾಕಿಸ್ತಾನವೇ ಬೀದಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಪಾಕಿಸ್ತಾನದಲ್ಲಿನ ಆರ್ಥಿಕ ಪರಿಸ್ಥಿತಿ ಸರಿ ಮಾಡಲು, ಭಾರತದ ಜೊತೆ ವ್ಯಾಪಾರ ಮಾತುಕತೆ ನಡೆಸಿ ಎನ್ನುತ್ತಾ ಪಾಕ್ ಪ್ರಧಾನಿಗೆ ಅಲ್ಲಿನ ಉದ್ಯಮಿಗಳು ಈಗ ಸಲಹೆ ನೀಡಿದ್ದಾರೆ.

ಭಾರತದ ಜೊತೆಗೆ ಚರ್ಚೆ ಬೇಕೆ ಬೇಕು!
ಪಾಕಿಸ್ತಾನದ ಪ್ರಮುಖ ಉದ್ಯಮಿಗಳು ಪಾಕ್ ಪ್ರಧಾನಿ ಶಹಬಾಜ್ ಷರೀಫ್‌ಗೆ ನೀಡಿರುವ ಸಲಹೆ ಪ್ರಕಾರ, ರಫ್ತಿನ ಮೂಲಕ ಆರ್ಥಿಕತೆ ಮೇಲಕ್ಕೆತ್ತುವ ಶಹಬಾಜ್ ಷರೀಫ್ ಸಲಹೆ ಅಸಾಧ್ಯವಾಗಿದೆ ಎಂದಿದ್ದಾರೆ. ಅಲ್ಲದೆ ಇಂಧನ ದರ ಭಾರಿ ಏರಿಕೆ ಹಾಗೂ ಗೊಂದಲದಿಂದ ಕೂಡಿದ ಸರ್ಕಾರಿ ನೀತಿ ಪರಿಣಾಮ ಈಗಿರುವ ಪರಿಸ್ಥಿತಿಯಲ್ಲಿ ರಫ್ತು ಹೆಚ್ಚು ಮಾಡುವುದು ಅಸಾಧ್ಯವಾಗಿದೆ. ಈ ಸನ್ನಿವೇಶದಲ್ಲಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲು ಭಾರತದ ಜೊತೆ ಚರ್ಚೆ ನಡೆಸಬೇಕಿದೆ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕರಾಚಿಗೆ ಭೇಟಿ ನೀಡಿದ ಷರೀಫ್
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್‌ಗೆ ಇತ್ತೀಚಿನ ಚುನಾವಣೆಯಲ್ಲಿ, ಮತ್ತೊಮ್ಮೆ ಗೆಲುವು ಸಿಕ್ಕಿತ್ತು. ಹೀಗೆ ಪ್ರಧಾನಿ ಪಟ್ಟ ಪಡೆದಿರುವ ಶಹಬಾಜ್ ಷರೀಫ್‌ಗೆ ಸಾಕಷ್ಟು ಸವಾಲು ಇದೆ. ಹೀಗಾಗಿ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಕರಾಚಿಗೆ ಭೇಟಿ ನೀಡಿದ ಪ್ರಧಾನಿ ಷರೀಫ್, ಉದ್ಯಮಿಗಳ ಜೊತೆ ಮಾತುಕತೆ ನಡೆಸಿದರು. ಇದೇ ವೇಳೆ ಭಾರತದ ಜೊತೆಯಲ್ಲಿ ಸಂಬಂಧ, ಸುಧಾರಣೆ ಮಾಡಿಕೊಳ್ಳಿ ಎಂಬ ಸಲಹೆ ನೀಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಹೀಗೆ ಪಾಕಿಸ್ತಾನದ ಮುಂದಿನ ನಡೆ ಭಾರಿ ಕುತೂಹಲ ಕೆರಳಿಸಿದೆ.
ಒಟ್ನಲ್ಲಿ ಭಾರತ ಮುಖ್ಯ ಅನ್ನೋದು ಪಾಕಿಸ್ತಾನದ ಉದ್ಯಮಿಗಳಿಗೆ ಇದೀಗ ಅರ್ಥವಾಗುತ್ತಿದೆ. ಯಾಕಂದ್ರೆ ಇಷ್ಟು ದಿನಗಳ ಕಾಲ ಬೇರೆ ಬೇರೆ ದೇಶಗಳ ಬಳಿ ಕಾಲು ಹಿಡಿದು, ಭಾರತವನ್ನ ದೂಷಿಸುತ್ತಿದ್ದ ಪಾಕಿಸ್ತಾನದ ಪಾಡು ಹೀನಾಯವಾಗಿದೆ. ಹೀಗಾಗಿ ಈಗ ಭಾರತದ ಜೊತೆಗೆ, ಉತ್ತಮ ಸಂಬಂಧ ಬೆಸೆದರೆ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೇವೆ ಅನ್ನೋದು ಪಾಕಿಸ್ತಾನದ ಉದ್ಯಮಿಗಳ ಐಡಿಯಾ. ಆದರೆ ಇದು ವರ್ಕೌಟ್ ಆಗುತ್ತಾ? ಅಂತಾ ಕಾದು ನೋಡಬೇಕಿದೆ.












Click it and Unblock the Notifications