ಪಾಕಿಸ್ತಾನಕ್ಕೆ ಭಾರತದಿಂದ ಮರ್ಮಾಘಾತ, ಪಾಕ್‌ನಲ್ಲಿ ಪ್ರವಾಹ ಭೀತಿ: ಪಿ.ಎಂ ಮೋದಿ ಮಾಸ್ಟರ್ ಸ್ಟ್ರೋಕ್ ಶುರು!
Pahalgam Terror Attack: ಭಾರತವು ಪಾಕಿಸ್ತಾನಕ್ಕೆ ಮರ್ಮಾಘಾತ ಕೊಡುವುದಕ್ಕೆ ಶುರು ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿಯ ಬೆನ್ನಲ್ಲೇ ಉಗ್ರರು ಸರಿಯಾಗಿ ಬುದ್ಧಿ ಕಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಇದೀಗ ಪಾಕಿಸ್ತಾನಕ್ಕೆ ಒಂದೊಂದೇ ಸಂಕಷ್ಟ ಶುರುವಾಗಲು ಪ್ರಾರಂಭವಾಗಿದೆ. ದೇಶದಲ್ಲಿ ಅಮಾಯಕರ ಜೀವವನ್ನು ಕಸಿದ ಉಗ್ರರು ಎಲ್ಲೇ ಅಡಗಿದ್ದರೂ ಅವರನ್ನು ಹುಡುಕಿ.. ಹುಡುಕಿ ಹೊಡೆದುರುಳಿಸಲಿದ್ದೇವೆ ಎಂದು ಮೋದಿ ಹೇಳಿದ್ದರು. ಭಾರತದಲ್ಲಿ ನಡೆದಿರುವ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎನ್ನುವ ಬಗ್ಗೆ ಭಾರತವು ಅನುಮಾನ ವ್ಯಕ್ತಪಡಿಸಿತ್ತು. ಇದೀಗ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡುವುದಕ್ಕೆ ಶುರು ಮಾಡಿಕೊಳ್ಳಲಾಗಿದೆ.
ಭಾರತವೂ ಏಕಾಏಕಿ ಝೇಲಂ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿದೆ ಎನ್ನಲಾಗಿದ್ದು, ಪಾಕಿಸ್ತಾನಕ್ಕೆ ಏಕಾಏಕಿ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಭಾರೀ ಸಂಕಷ್ಟ ಎದುರಾಗಿದೆ. ಸಿಂಧೂ ನದಿ ನೀರನ್ನು ನಿಲ್ಲಿಸುವುದಾಗಿ ಹಾಗೂ ಈ ಒಪ್ಪಂದವನ್ನು ರದ್ದು ಮಾಡುವುದಾಗಿ ಭಾರತವು ಎಚ್ಚರಿಕೆ ನೀಡಿದೆ. ಇದರ ನಡುವೆ ಅಪಾರ ಪ್ರಮಾಣದ ನೀರನ್ನು ಪಾಕಿಸ್ತಾನಕ್ಕೆ ಬಿಡುವ ಮೂಲಕ ಭಾರತವು ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಉರಿ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಗಿದೆ. ಹಟ್ಟಿಯನ್ ಬಾಲಾ ಜಿಲ್ಲೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಅಲ್ಲದೇ ಇದರಿಂದ ಪಿಒಕೆಯ ಮುಜಫರಾಬಾದ್ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತವು ಪೂರ್ವ ಸೂಚನೆ ಕೊಡದೆ ನೀರು ಬಿಟ್ಟಿದೆ ಎಂದು ಪಾಕಿಸ್ತಾನ ದೂರಿದೆ. ಅನಂತನಾಗ್‌ನಿಂದ ಝೇಲಂ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ. ಭಾರತವು ನೀರು ಬಿಟ್ಟಿರುವುದರಿಂದ ಇಲ್ಲಿನ ಚಕೋತಿ ಗಡಿ ಮಾರ್ಗವಾಗಿ ಪಿಒಕೆಗೆ ನೀರು ನುಗ್ಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪಾಕ್‌ಗೆ ಎದುರಾಯ್ತು ದೊಡ್ಡ ಸಂಕಷ್ಟ: ಭಾರತವೂ ನೀರು ಬಿಡುವುದಿಲ್ಲ ಎಂದು ಹೇಳುತ್ತಲ್ಲೇ ಅಪಾರ ಪ್ರಮಾಣದ ನೀರನ್ನು ಬಿಟ್ಟಿದೆ. ಇದು ಭಾರತದ ಮಾಸ್ಟರ್ ಸ್ಟ್ರೋಕ್ ಅಂತಲೇ ಹೇಳಲಾಗುತ್ತಿದೆ. ಝೇಲಂ ನದಿಯ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದ್ದು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇದು ಮುಂದೆ ಪಾಕಿಸ್ತಾನಕ್ಕೂ ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಲಾಗಿದೆ.
ಅನಿರೀಕ್ಷಿತ ಬೆಳವಣಿಗೆ: ಭಾರತವು ರಾಜತಾಂತ್ರಿಕವಾಗಿ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಎರಡೂ ದೇಶಗಳ ನಡುವೆ ಪರಿಸ್ಥಿತಿ ಉದ್ವಿಗ್ನವಾಗುತ್ತಿರುವ ಸಂದರ್ಭದಲ್ಲಿಯೇ ಭಾರತವು ಜಾಣ್ಮೆಯಿಂದ ಹೆಜ್ಜೆಗಳನ್ನು ಇರಿಸುತ್ತಿದೆ. ಇದರ ಭಾಗವಾಗಿಯೇ ಅಪಾರ ಪ್ರಮಾಣದ ನೀರು ಬಿಡಲಾಗಿದೆ ಎಂದು ಹೇಳಲಾಗಿದೆ. ಭಾರತವು 5 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದರೆ, ಕೆಲವೊಂದು ಮಾಸ್ಟರ್ ಸ್ಟ್ರೋಕ್‌ಗಳನ್ನು ನೀಡುವ ಮೂಲಕ ಭಾರತದ ಮುಂದಿನ ನಡೆ ಏನಾಗಿರಲಿದೆ ಎನ್ನುವ ಬಗ್ಗೆ ಪಾಕಿಸ್ತಾನಕ್ಕೆ ಗೊಂದಲದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ.
ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ: ಇನ್ನು ಭಾರತದ ಈ ಕ್ರಮದಿಂದ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಪಾಕಿಸ್ತಾನವು ಇದಕ್ಕೆ ಯಾವ ರೀತಿ ರಿಯಾಕ್ಟ್ ಮಾಡಲಿದೆ ಎನ್ನುವುದು ಇನ್ನಷ್ಟೇ ನೋಡಬೇಕಿದೆ. ಇನ್ನು ಭಾರತ ಸರ್ಕಾರದಿಂದ ಈ ಸಂಬಂಧ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.












Click it and Unblock the Notifications