ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತದಿಂದ ಸರ್ಜಿಕಲ್ ಸ್ಟ್ರೈಕ್ ಆಗ್ಬಹುದು ಎಂದು ತಪ್ಪೊಪ್ಪಿದೆ ಪಾಕ್'

|
Google Oneindia Kannada News

ನವದೆಹಲಿ, ಡಿಸೆಂಬರ್ 27: ಸ್ವಯಂ ಪಾಕಿಸ್ತಾನವು ಅಪರಾಧವನ್ನು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ಗುರುವಾರ ಹೇಳಿದೆ. ನರೇಂದ್ರ ಮೋದಿ ಸರಕಾರ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಬಹುದು ಎಂಬ ಪಾಕ್ ಸಚಿವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ಉಗ್ರರ ನೆಲೆಗಳು ಇನ್ನೂ ಸಕ್ರಿಯವಾಗಿವೆ ಎಂಬುದನ್ನು ಅದು ಸೂಚಿಸುತ್ತದೆ ಎಂದಿದ್ದಾರೆ.

ಇಮ್ರಾನ್ ಖಾನ್ ಗೆ ಆಪ್ತರಾದ ಪಾಕ್ ನ ರೈಲ್ವೆ ಸಚಿವ ಶೇಖ್ ರಶೀದ್ ಲಾಹೋರ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಆದೇಶ ನೀಡಬಹುದು ಎಂದು ಹೇಳಿದ್ದರು. ಆ ಹೇಳಿಕೆಗೆ ಬಿಜೆಪಿ ವಕ್ತಾರರಾದ ನಳಿನ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Narendra Modi

2019ನೇ ಇಸವಿ ಪಾಕಿಸ್ತಾನ ಬಹಳ ಪ್ರಮುಖವಾದದ್ದು. ನರೇಂದ್ರ ಮೋದಿ ಅವರ ಬಿಜೆಪಿ ಐದು ರಾಜ್ಯಗಳಲ್ಲಿ ಚುನಾವಣೆ ಸೋತಿದೆ. ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಬಲಪಂಥೀಯರ ಓಲೈಕೆಗೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಮೋದಿ ಆದೇಶಿಸಬಹುದು. ಇದು ಆಗಬಹುದು ಎಂದು ರಶೀದ್ ಹೇಳಿದ್ದಾರೆ.

ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ತಕ್ಕ ಪ್ರತ್ಯುತ್ತರ: ಪಾಕ್ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ತಕ್ಕ ಪ್ರತ್ಯುತ್ತರ: ಪಾಕ್

ಈ ಹೇಳಿಕೆಯನ್ನು ಹೇಗೆ ನೋಡಬೇಕು ಅಂದರೆ, ಪಾಕಿಸ್ತಾನವು ಉಗ್ರರ ನೆಲೆಗಳು ಇದೆ ಅಂತ ಮಾತ್ರ ಅಲ್ಲ, ಈಗಲೂ ಸಕ್ರಿಯವಾಗಿವೆ ಎಂದು ಒಪ್ಪಿಕೊಂಡಂತಾಗಿದೆ. ತನ್ನ ಗಡಿ ಹಾಗೂ ಭದ್ರತೆ ಭಾರತದ ಹಕ್ಕು ಎಂದು ನಳಿನ್ ಕೊಹ್ಲಿ ಹೇಳಿದ್ದಾರೆ.

English summary
The BJP on Thursday dubbed as an "admission of self guilt" a Pakistani minister's claim that the Narendra Modi government can carry out another surgical strike against his country, and said it shows that terrorist camps there are still active.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X