ಕಪ್ಪುಹಣ: ಪದ್ಮಭೂಷಣ ಪುರಸ್ಕೃತನ ವಿರುದ್ಧ ಸಿಬಿಐ ಪ್ರಕರಣ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 24: ಪದ್ಮಭೂಷಣ ಪುರಸ್ಕೃತ-ಮುಂಬೈನ ಖ್ಯಾತ ವೈದ್ಯನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ವೈದ್ಯ. ಸುರೇಶ್ ಅದ್ವಾನಿ, ಯೊಗೇಶ್ ಶಿರೋಯೆ, ಧರಂ ರಾಜ್ ತಿಲಕ್, ಕ್ರಿಶ್, ಗಜಾನಂದ್ ಸೋಮ್ ನಾಥ್ ಮತ್ತು ಬಿ.ಎಂ.ಷಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹತ್ತು ಕೋಟಿಯಷ್ಟು ಹಳೇ ನೋಟನ್ನು ಸಾಗಿಸುತ್ತಿದ್ದದ್ದನ್ನು ಪತ್ತೆ ಹಚ್ಚಿದ ನಂತರ ದಾಳಿ ನಡೆಸಲಾಗಿದೆ. ಸಿಬಿಐ ಮೂಲಗಳು ತಿಳಿಸಿದ ಪ್ರಕಾರ, ತನಿಖೆ ನಂತರವಷ್ಟೇ ಈ ಪ್ರಕರಣದಲ್ಲಿ ಆ ವೈದ್ಯರ ಪಾತ್ರ ಏನು ತಿಳಿದುಬರಬೇಕಿದೆ. ಆ ವೈದ್ಯರಿಗೆ 2002ರಲ್ಲಿ ಪದ್ಮಶ್ರೀ ಹಾಗೂ 2012ರಲ್ಲಿ ಪದ್ಮಭೂಷಣ ಹಲವು ಗೌರವ-ಪ್ರಶಸ್ತಿ ಸಂದಿವೆ.[ಕೇರಳದ ಸಹಕಾರಿ ಬ್ಯಾಂಕ್ ಗಳಿಂದ 226 ಕೋಟಿ ರು ವಶ!]

Padma Bhushan awardee doctor booked for transporting demonetised currency

ಯೋಗೇಶ್ ಹೊರತುಪಡಿಸಿದರೆ ಇತರ ನಾಲ್ವರು ಆರೋಪಿಗಳು ವೈದ್ಯನಾಥ್ ಕೋ ಅಪರೇಟಿವ್ ಬ್ಯಾಂಕ್ ನ ಅಧಿಕಾರಿಗಳು. ಹಣ ಸಾಗಿಸುತ್ತಿದ್ದಾಗ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ತಡೆಯಲಾಗಿದೆ. ಮಹಾರಾಷ್ಟ್ರದ ಸ್ಟೇಟ್ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಹದಿನೈದು ಕೋಟಿ ರುಪಾಯಿ ಜಮಾ ಮಾಡಿದ ಮಾಹಿತಿ ಕೂಡ ಕೇಳಿಬಂದಿದೆ.[ಡಿಡಿ ಹಗರಣ, ಅಗರಬತ್ತಿ ಕಂಪನಿ ಓನರಿಗೆ ಅಂಟಿಹಾಕಿಕೊಂಡ ಸಿಬಿಐ]

ಘಾಟ್ಕೋಪರ್ ಶಾಖೆಯಲ್ಲಿ ಜಮೆ ಮಾಡಲು ಇಪ್ಪತ್ತೈದು ಕೋಟಿ ತರಲಾಗುತ್ತಿತ್ತು. ಆ ಶಾಖೆಯಲ್ಲಿ ಹದಿನೈದು ಕೋಟಿ ಮಾತ್ರ ಹಾಕಲು ಸಾಧ್ಯವಿದ್ದಿದ್ದರಿಂದ ಬಾಕಿ ಹಣವನ್ನು ಪಿಂಪ್ರಿ ಚಿಂಚ್ ವಾಡ್ ನ ಕೋ ಅಪರೇಟಿವ್ ಬ್ಯಾಂಕ್ ಶಾಖೆಗೆ ಕಳಿಸಲಾಗಿತ್ತು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A top doctor from Mumbai who is a Padma Bhushan awardee has been booked by the Central Bureau of Investigation in the ongoing crackdown against black money. TThe CBI registered the case after it was found that they were fraudulently transporting demonetised currency to the tune of Rs 10 crore.
Please Wait while comments are loading...