Get Updates
Get notified of breaking news, exclusive insights, and must-see stories!

OYO New Rules: ಓಯೋ ರೂಂ ಪಡೆಯಲು ಆಧಾರ್‌ ಕಾರ್ಡ್‌ ಬೇಕಿಲ್ಲ, ಬಂತು ಹೊಸ ರೂಲ್ಸ್‌

ಗ್ರಾಹಕರಿಗೆ ಆತಿಥ್ಯ ಸೇವೆ ನೀಡುತ್ತಿರುವ ಓಯೋ ರೂಂ ಬುಕಿಂಗ್‌ ಮಾಡಲು ಹೊಸ ನಿಯಮಗಳು ಜಾರಿಯಾಗುತ್ತಿವೆ. ಸದ್ಯ ಓಯೋ ರೂಂಗಳನ್ನು ಬುಕಿಂಗ್‌ ಮಾಡಲು ಅಥವಾ ಚೆಕ್‌-ಇನ್‌ ಆಗಲು ಆಧಾರ್‌ ಕಾರ್ಡ್‌ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳನ್ನು ತೋರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಬುಕಿಂಗ್‌ ವೇಳೆ ಗ್ರಾಹಕರು ಆಧಾರ್‌ ಅಥವಾ ವೈಯಕ್ತಿಕ ಮಾಹಿತಿ ಇರುವ ದಾಖಲೆಯ ಪ್ರತಿಗಳನ್ನು ಸಹ ಪಡೆದುಕೊಳ್ಳಲಾಗುತ್ತಿದೆ. ಆದರೆ ಇನ್ಮುಂದೆ ಆಧಾರ್‌ ಕಾರ್ಡ್‌ ತೋರಿಸುವುದು ಓಯೋಗಳಲ್ಲಿ ಕಡ್ಡಾಯವಲ್ಲ. ಬದಲಾಗಿ ಈ ಹೊಸ ನಿಯಮಗಳು ಜಾರಿಯಾಗಲಿವೆ.

ಹೌದು, ಓಯೋಗಳಲ್ಲಿ ಹೆಚ್ಚಾಗಿ ಆಧಾರ್‌ ಕಾರ್ಡ್‌ ಅನ್ನೇ ಗ್ರಾಹಕರು ತಮ್ಮ ದಾಖಲೆ ಎಂದು ತೋರಿಸಿ ರೂಂ ಪಡೆಯುತ್ತಿದ್ದಾರೆ. ಇದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹೀಗಾಗಿ ಓಯೋ ಹೋಟೆಲ್‌ಗಳು ಹಾಗೂ ಇನ್ನಿತರೆ ಕಡೆಗಳಲ್ಲಿ ಗ್ರಾಹಕರ ಆಧಾರ್‌ನ ಫೋಟೋಕಾಪಿಗಳನ್ನು ತೆಗೆದುಕೊಳ್ಳುವುದು ಅಥವಾ ಮೂಲಪ್ರತಿ ರೂಪದಲ್ಲಿ ಸಂಗ್ರಹಿಸುವುದು ನಿಷೇಧಿಸಲಾಗುತ್ತಿದೆ. ಏಕೆಂದರೆ ಈಗಿನ ನಿಯಮಗಳು ಆಧಾರ್ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಆಧಾರ್ ಕಾರ್ಡ್‌ನ ಭದ್ರತೆಯನ್ನು ಬಲಪಡಿಸಲು ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಸೂಚನೆ ಹೊರಡಿಸುವುದಾಗಿ ತಿಳಿದುಬಂದಿದೆ.

OYO Room New Rules Aadhaar Copy No Longer Mandatory UIDAI Introduces Secure Digital Verification

ಆಧಾರ್ ಕಾರ್ಡ್ ಅನ್ನು ಬಲಪಡಿಸಲು ಮತ್ತು ಕಾಗದ ಆಧಾರಿತ ಆಧಾರ್ ಪರಿಶೀಲನೆ ತೆಗೆದುಹಾಕಲು ಯುಐಡಿಎಐ ಒಂದು ಪ್ರಮುಖ ಬದಲಾವಣೆಯನ್ನು ಜಾರಿಗೆ ತರುತ್ತಿದೆ. ಇದರಡಿ ಓಯೋ ಸೇರಿದಂತೆ ಇನ್ನಿತರ ಹೋಟೆಲ್‌ಗಳು ಮತ್ತು ಕಾರ್ಯಕ್ರಮದ ಆಯೋಜಕರು ಇನ್ನು ಮುಂದೆ ಗ್ರಾಹಕರ ಆಧಾರ್ ಕಾರ್ಡ್‌ಗಳ ನಕಲು ಪ್ರತಿಗಳನ್ನು ತೆಗೆದುಕೊಳ್ಳುವಂತಿಲ್ಲ. ಸಾಧ್ಯವಾಗುವುದಿಲ್ಲ, ಅಥವಾ ಅವುಗಳನ್ನು ಭೌತಿಕ ರೂಪದಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ಹೊಸ ನಿಯಮವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಗ್ರಾಹಕರ ಆಧಾರ್‌ ನಕಲು ಪ್ರತಿಗಳನ್ನು ಇಟ್ಟುಕೊಳ್ಳುವುದು ಆಧಾರ್ ಕಾಯ್ದೆಗೆ ವಿರುದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಯುಆರ್‌ ಕೋಡ್ ಅಥವಾ ಹೊಸ ಅಪ್ಲಿಕೇಶನ್‌

ಗ್ರಾಹಕರ ಆಧಾರ್ ಕಾರ್ಡ್‌ಗಳ ಫೋಟೋ ತೆಗೆದುಕೊಂಡು ಅವುಗಳನ್ನು ಭೌತಿಕ ರೂಪದಲ್ಲಿ ಸಂಗ್ರಹಿಸುವುದನ್ನು ನಿಷೇಧಿಸುವ ಹೊಸ ನಿಯಮವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಭುವನೇಶ್ ಕುಮಾರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಹೋಟೆಲ್‌ಗಳು, ಕಾರ್ಯಕ್ರಮ ಆಯೋಜಕರು ಮುಂತಾದ ಆಧಾರ್ ಪರಿಶೀಲನೆ ಬಯಸುವ ಸಂಸ್ಥೆಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ಹೊಸ ನಿಯಮವನ್ನು ಪ್ರಾಧಿಕಾರ ಅನುಮೋದಿಸಿದೆ. ಇದರಿಂದಾಗಿ ಕ್ಯುಆರ್‌ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಹೊಸ ಆಧಾರ್ ಅಪ್ಲಿಕೇಶನ್‌ನೊಂದಿಗೆ ಸಂಪರ್ಕಿಸುವ ಮೂಲಕ ವ್ಯಕ್ತಿಯನ್ನು ಪರಿಶೀಲಿಸಲು ಅವರಿಗೆ ಅನುವು ಮಾಡಿಕೊಡುವ ಹೊಸ ತಂತ್ರಜ್ಞಾನಕ್ಕೆ ಪರಿಚಯಿಸಲಾಗುವುದು ಎಂದಿದ್ದಾರೆ.

ಈ ಸಂಬಂಧ ಯುಐಡಿಎಐ ಮಂಡಳಿಯ ಸಭೆ ನಡೆಯಲಿದ್ದು, ಡಿಸೆಂಬರ್ 10ರ ಸುಮಾರಿಗೆ ಈ ನಿಯಮಾವಳಿ ಪ್ರಕಟವಾಗುವ ನಿರೀಕ್ಷೆಯಿದೆ. ಈಗಾಗಲೇ ಹೊಸ ನಿಯಮಾವಳಿಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ಈ ನಿಯಮಾವಳಿಯು ಯಾವುದನ್ನೂ ಕಡ್ಡಾಯಗೊಳಿಸುವುದಿಲ್ಲ. ಆದರೆ ಆಧಾರ್ ಪರಿಶೀಲನೆಯನ್ನು ಭೌತಿಕ ಪ್ರತಿಗಳ ಬದಲಿಗೆ ಎಲೆಕ್ಟ್ರಾನಿಕ್ ಮೋಡ್‌ನಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ ಎಂದು ಭುವನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+