ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆ ಬಹಿರಂಗ

ನವದೆಹಲಿ, ಜೂನ್ 26: ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು ಸರ್ಕಾರಿ ಸಂಸ್ಥೆಗಳು ಎರಡು ಬಾರಿ ವರದಿ ನೀಡಿವೆ. ಲೋಕಸಭೆ ಚುನಾವಣೆ ಸಂದರ್ಭದಲ್ಲೂ ನಿರುದ್ಯೋಗ ಸಮಸ್ಯೆ ಪ್ರಮುಖ ಅಂಶವಾಗಿತ್ತು. ಈಗ ಬಜೆಟ್ ನಲ್ಲೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ.

ಈ ನಡುವೆ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಸರ್ಕಾರ ಬಹಿರಂಗಪಡಿಸಿದೆ. ಸುಮಾರು 6.84 ಲಕ್ಷ ಹುದ್ದೆಗಳು ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿವೆ ಎಂದು ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದಾರೆ.

ಒಟ್ಟಾರೆ 38.02 ಲಕ್ಷ ಹುದ್ದೆಗಳ ಪೈಕಿ 31.18 ಲಕ್ಷ ಹುದ್ದೆಗಳಿಗೆ ಮಾರ್ಚ್ 01, 2018ರೊಳಗೆ ನೇಮಕಾತಿ ಮಾಡಲಾಗಿದೆ. ಹೀಗಾಗಿ, 6.84 ಲಕ್ಷಕ್ಕೂ ಅಧಿಕ ಹುದ್ದೆಗಳು ಭರ್ತಿಯಾಗಿಲ್ಲ ಎಂದು ಸಚಿವರು ಹೇಳಿದರು.

Over 6.84 lakh vacant posts in central government departments: Government

ಹುದ್ದೆಗಳು ಖಾಲಿ ಉಳಿಯಲು ನಾನಾ ಕಾರಣಗಳಿದ್ದು, ನಿವೃತ್ತಿ, ಮರಣ, ಬಡ್ತಿ ಹೀಗೆ ವಿವಿಧ ಕಾರಣಗಳಿಂದ ಬಾಕಿ ಉಳಿದ ಹುದ್ದೆಗಳಿಗೆ ಸಚಿವಾಲಯ, ಇಲಾಖೆ ಹಾಗೂ ಮಂಡಳಿಗಳ ನೇಮಕಾತಿ ನಿಯಮಗಳಂತೆ ಭರ್ತಿ ಮಾಡಲಾಗುವುದು ಎಂದರು.

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ ಸಿ) ಪರೀಕ್ಷೆ ಆಯೋಜಿಸಲು ಕ್ರಮ ಕೈಗೊಂಡಿದ್ದು, 1,03,266 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 2019 ಹಾಗೂ 2020ರಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ರೈಲ್ವೆ ಬೋರ್ಡ್ ಕೂಡಾ ಅಧಿಸೂಚನೆ ಹೊರಡಿಸಿದ್ದು, ಸುಮಾರು 1,56,138 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+