ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಕೋಟಿಗೂ ಹೆಚ್ಚು ಭಾರತೀಯ ಕೊರೊನಾ ಸೋಂಕಿಗೆ ತುತ್ತಾಗಿರಬಹುದು

|
Google Oneindia Kannada News

ನವದೆಹಲಿ,ಫೆಬ್ರವರಿ 03: 30 ಕೋಟಿಗೂ ಹೆಚ್ಚು ಮಂದಿ ಭಾರತೀಯರು ಕೊರೊನಾ ಸೋಂಕಿಗೆ ತುತ್ತಾಗಿರಬಹುದು ಎಂದು ವರದಿಯೊಂದು ಹೇಳಿದೆ.

ದೇಶದ 135 ಕೋಟಿ ಜನಸಂಖ್ಯೆ ಪೈಕಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸರ್ಕಾರದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ವಿದೇಶಗಳಿಗೆ ಚೀನಾದಿಂದ 10 ಮಿಲಿಯನ್ ಕೊರೊನಾ ಲಸಿಕೆ ರಫ್ತುವಿದೇಶಗಳಿಗೆ ಚೀನಾದಿಂದ 10 ಮಿಲಿಯನ್ ಕೊರೊನಾ ಲಸಿಕೆ ರಫ್ತು

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸಮೀಕ್ಷೆ ನಡೆಸಿದ್ದು, ಈ ಕುರಿತು ಮಾಹಿತಿಯನ್ನು ಗುರುವಾರ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡುವುದಾಗಿ ತಿಳಿಸಿದೆ.

Over 30 Crore Indians May Have Covid-19, Says Source Citing Government Study

ದೇಶದಲ್ಲಿ ದೃಢಪಟ್ಟ ಕೊರೊನಾ ಪ್ರಕರಣಗಳ ಸಂಖ್ಯೆ 1.08 ಕೋಟಿ ತಲುಪಿದೆ. ಅತಿ ಹೆಚ್ಚು ಮಂದಿಗೆ ಸೋಂಕು ತಗುಲಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತ ಇದೆ.

ಆದರೆ ಸಮೀಕ್ಷಾ ವರದಿ ಪ್ರಕಾರ ದೇಶದಲ್ಲಿ 30 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಸಲಾಗಿದ್ದ ಮತ್ತೊಂದು ಸಮೀಕ್ಷೆಯಲ್ಲಿ ಪ್ರತಿ 15 ಭಾರತೀಯರಲ್ಲಿ ಒಬ್ಬರು ಕೊರೊನಾ ಪ್ರತಿಕಾಯವನ್ನು ಹೊಂದಿದ್ದಾರೆ. ಜನಸಾಂಧ್ರತೆ ಹೆಚ್ಚಿರುವ ನಗರ ಪ್ರದೇಶ ಮತ್ತು ಕೊಳಗೇರಿಯಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರು ಕೊರೊನಾ ಪ್ರತಿಕಾಯ ಹೊಂದಿದ್ದಾರೆ ಎಂದು ಐಸಿಎಂಆರ್ ಮಾಹಿತಿ ನೀಡಿತ್ತು.

ಐದನೇ ಸಿರೊ ಸಮೀಕ್ಷೆಯ ವರದಿ ಕೈಸೇರಿದೆ.ಈ ವರದಿ ಪ್ರಕಾರ ದೇಶದಲ್ಲಿ ಶೇ.56ರಷ್ಟು ಮಂದಿಯಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿದೆ ಎಂದು ಹೇಳಿದೆ.ಶೇ.56ರಷ್ಟು ಮಂದಿಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿವೆ.

ನಗರದಲ್ಲಿ ಹರ್ಡ್ ಇಮ್ಯುನಿಟಿ ಬಂದಿದೆ ಎಂದು ಜನರು ತಮ್ಮ ಎಚ್ಚರಿಕೆಯನ್ನು ಬಿಡಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಹ್ಯಾಂಡ್ ವಾಶ್, ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಮುಂದುವರೆಸಬೇಕು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

ದೆಹಲಿಯಲ್ಲಿ ಶೇ.56.13ರಷ್ಟು ಜನಸಂಖ್ಯೆಯಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿವೆ. 28,000 ಮಂದಿಯನ್ನು ಸಮೀಕ್ಷೆಯಲ್ಲಿ ತೆಗೆದುಕೊಳ್ಳಲಾಗಿದೆ.

English summary
About one in four of India's 135 crore people may have been infected with coronavirus, said a source with direct knowledge of a government serological survey, suggesting the country's real caseload was many times higher than reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X