Breaking: ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಕೊರೊನಾ ಸೋಂಕು
ಬೆಂಗಳೂರು, ಜೂನ್ 27: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 18 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನದಲ್ಲಿ ಇದುವರೆಗೆ ಇಷ್ಟು ಪ್ರಕರಣಗಳು ಯಾವತ್ತೂ ದಾಖಲಾಗಿರಲಿಲ್ಲ.ಇದೇ ಮೊದಲ ಬಾರಿಗೆ ಒಂದೇ ದಿನ 18 ಸಾವಿರ ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಜನವರಿಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿತ್ತು. ಒಂದೇ ದಿನದಲ್ಲಿ 18,552 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 5,08,953 ಮಂದಿಗೆ ಸೋಂಕು ತಗುಲಿದೆ. ಒಂದೇ ದಿನದಲ್ಲಿ 384 ಮಂದಿ ಸಾವನ್ನಪ್ಪಿದ್ದಾರೆ.
ಇದುವರೆಗೆ 15,685 ಮಂದಿ ಮೃತಪಟ್ಟಿದ್ದಾರೆ. ಕಳೆದ 8 ದಿನಗಳಿಂದ ಪ್ರತಿನಿತ್ಯವೂ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.
ಶುಕ್ರವಾರ ಒಂದೇ ದಿನ 17 ಸಾವಿರ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು, ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿತ್ತು. ಐದು ಲಕ್ಷ ಮಂದಿಗೆ ಸೋಂಕು ತಗುಲಲು ಬರೋಬ್ಬರಿ 149 ದಿನ ಹಿಡಿಯಿತು.
Breaking: ಭಾರತದಲ್ಲಿ ಮತ್ತೆ 17,296 ಕೊರೊನಾ ಸೋಂಕಿತರು ಪತ್ತೆ
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 65,844 ಮಂದಿ ಸೋಂಕಿತರಿದ್ದು ಇದುವರೆಗೆ 7,106 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 32,308 ಮಂದಿ ಸೋಂಕಿತರಿದ್ದು, 957 ಮಂದಿ ಮೃತಪಟ್ಟಿದ್ದಾರೆ.