ಪ್ರತಿಪಕ್ಷಗಳ ನಿಯೋಗ ಶನಿವಾರ ಜಮ್ಮು ಕಾಶ್ಮೀರಕ್ಕೆ ಭೇಟಿ

ನವದೆಹಲಿ, ಆಗಸ್ಟ್ 23: ಪ್ರತಿಪಕ್ಷಗಳ ನಿಯೋಗ ಶನಿವಾರ(ಆಗಸ್ಟ್ 24)ರಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದೆ.

ರಾಹುಲ್ ಗಾಂಧಿ ಕೂಡ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದತಿ ಬಳಿಕ ವಿರೋಧಪಕ್ಷ ನಾಯಕರ ಮೊದಲ ಭೇಟಿ ಇದಾಗಲಿದೆ.

Recommended Video

      ಕಾಶ್ಮೀರಕ್ಕೆ ಬರಬೇಡಿ ಎಂದು ರಾಹುಲ್ ಗಾಂಧಿಗೆ ಮನವಿ | Oneindia Kannada

      ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಎರಡು ಬಾರಿ ಕಾಶ್ಮೀರಕ್ಕೆ ಬಂದು ಅಲ್ಲಿನ ಸ್ಥಳೀಯ ಕಾರ್ಯಕರ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ವಿಮಾನ ನಿಲ್ದಾಣದಿಂದಲೇ ಅವರನ್ನು ದೆಹಲಿಗೆ ಮರಳಿ ಕಳುಹಿಸಿದ್ದ ಘಟನೆ ನಡೆದಿತ್ತು.

      Opposition Leaders To Visit Jammu And Kashmir On August 24

      ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಡಿ ರಾಜಾ, ಸೀತಾರಾಮ್ ಯೆಚೂರಿ, ಮನೋಜ್ ಜಾ ಇನ್ನಿತರೆ ಪ್ರತಿಪಕ್ಷ ನಾಯಕರು ಭೇಟಿ ನೀಡಲಿದ್ದಾರೆ. ಸಿಬಿಐ(ಎಂ), ಸಿಪಿಐ, ಆರ್‌ಜೆಡಿ, ಎನ್‌ಸಿಪಿ, ಟಿಎಂಸಿ, ಹಾಗೂ ಡಿಎಂಕೆ ನಾಯಕರು ದೆಹಲಿ ಏರ್‌ಪೋರ್ಟ್‌ನಿಂದ ಜಮ್ಮುವಿನ ಕಡೆ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಆದರೆ ಇಲ್ಲಿಯವರೆಗೆ ಆರ್ಟಿಕಲ್ 370 ರದ್ದಾದ ಬಳಿಕ ಯಾವುದೇ ರಾಜಕೀಯ ಮುಖಂಡರನ್ನು ಜಮ್ಮು ಕಾಶ್ಮೀರದೊಳಗೆ ಬರಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಈಗಲೂ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಗೃಹ ಬಂಧನದಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+