INDIA: 14 ಸುದ್ದಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರ: ಪಟ್ಟಿ ಬಿಡುಗಡೆ ಮಾಡಿದ 'ಇಂಡಿಯಾ ಬ್ಲಾಕ್'
ಬೆಂಗಳೂರು, ಸೆಪ್ಟಂಬರ್ 14: ಕೇಂದ್ರ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಬ್ಲಾಕ್ ದೂರದರ್ಶನದ ವಿವಿಧ 14 ಮಂದಿ ಸುದ್ದಿ ನಿರೂಪಕರ (News Anchor) ಕಾರ್ಯಕ್ರಮಗಳನ್ನು ಬಹಿಷ್ಕರಿಸಿದೆ. ಈ ಕುರಿತು ನ್ಯೂಸ್ ಆಂಕರ್ ಹೆಸರುಗಳ ಪಟ್ಟಿ ಮಾಡಿದೆ. ಇವರ ಕಾರ್ಯಕ್ರಮಗಳಿಗೆ ಇಂಡಿಯಾ ಪ್ರತಿನಿಧಿಗಳು ಭಾಗವಹಿಸದೇ ಬಹಿಷ್ಕರಿಸಲಿದ್ದಾರೆ ಎಂಬ ಅಂಶ ಗುರುವಾರ ತಿಳಿದು ಬಂದಿದೆ.
ಬ್ಲಾಕ್ ಇಂಡಿಯಾ 14 ದೂರದರ್ಶನ ಸುದ್ದಿ ನಿರೂಪಕರ ಪಟ್ಟಿ ಬಿಡುಗಡೆ ಮಾಡಿರುವುದಕ್ಕೆ ಮಾಧ್ಯಮಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಬಿಜೆಪಿಯು ಇಂಡಿಯಾದ ನಡೆಯನ್ನು ಖಂಡಿಸಿದೆ. ಇದು 'ತುರ್ತು ಪರಿಸ್ಥಿತಿ 2.0' ಎಂದು ಕರೆದಿದೆ.

26 ಪಕ್ಷಗಳ ಇಂಡಿಯದ 'ಬ್ಲಾಕ್ ಸಮನ್ವಯ ಸಮಿತಿ' ತನ್ನ ಮೊದಲ ಸಭೆ ನಡೆಸಿ ಜಂಟಿ ಹೇಳಿಕೆ ಪ್ರಕಟಿಸಿದೆ. ಅದರಲ್ಲಿ ಭಾರತದ ಯಾವುದೇ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸದ ಕಾರ್ಯಕ್ರಮಗಳ ನಿರೂಪಕರ ಹೆಸರನ್ನು ಗುರುತಿಸಲು ಸಮಿತಿಯು ತನ್ನ ಮಾಧ್ಯಮ ಗುಂಪಿಗೆ ಅಧಿಕಾರ ನೀಡಿತ್ತು. ಅದರಂತೆ 14 ಜನರನ್ನು ಗುರುತಿಸಲಾಗಿದೆ.
ಸಮಾಜದಲ್ಲಿ ಧ್ವೇಷ ಹರಡಿಸಲಾಗುತ್ತಿದೆ: ಇಂಡಿಯಾ ಬ್ಲಾಕ್
ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು, ಇಂದು ಸುದ್ದಿ ನಿರೂಪಕರ ಪಟ್ಟಿ ತಯಾರಿಸಿದ್ದೇವೆ. ಅದರಲ್ಲಿ ಕೆಲವರನ್ನು ಗುರುತಿಸಿದ್ದು, ಅವರ ಕಾರ್ಯಕ್ರಮಗಳನ್ನು ನಮ್ಮ ಪ್ರತಿನಿಧಿಗಳು ಬಹಿಷ್ಕರಿಸಲಿದ್ದಾರೆ. ಏಕೆಂದರೆ ದ್ವೇಷ ತುಂಬಿದ ನಿರೂಪಣೆಯನ್ನು ಕಾನೂನುಬದ್ಧಗೊಳಿಸಲು ನಾವು ಬಯಸುವುದಿಲ್ಲ. ಹೀಗಾಗಿ ಅಂತವರ ಕಾರ್ಯಕ್ರಮಗಳಿಗೆ ತೆರಳುವುದಿಲ್ಲ ಎಂದರು.
Instead of listing their vision for Bharat or naming their prime ministerial candidate, the Opportunistic I.N.D.I. Alliance has come up with a list of News Anchors its leaders will boycott.
— C T Ravi 🇮🇳 ಸಿ ಟಿ ರವಿ (@CTRavi_BJP) September 14, 2023
Like always, the CONgress and its allies expect the media to bend to their diktats.… pic.twitter.com/XZ24vQEtgN
ನಮ್ಮ ನಾಯಕರ ವಿರುದ್ಧ ಸುದ್ದಿ ಮಾಡುತ್ತೀರಿ, ಮೀಮ್‌ಗಳ ಮಾಡುವ ಜೊತೆಗೆ ನಮ್ಮ ನಾಯಕ ಭಾಷಣಗಳನ್ನು ತಿರುಚಲಾಗುತ್ತಿದೆ. ಅಲ್ಲದೇ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇಂತವರ ವಿರುದ್ಧ ನಾವು ಹೋರಾಡಲು ಸಜ್ಜಾಗಿದ್ದೇವೆ. ಮಾಧ್ಯಮಗಳ ಮೂಲಕ ಸಮಾಜದಲ್ಲಿ ಹಿಂಸಾಚಾರದ ರೂಪದಲ್ಲಿ ದ್ವೇಷವನ್ನು ಹರಡಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಷ್ಟವಿಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಈ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಯಾವುದೇ ಆಂಕರ್‌ಗಳನ್ನು ನಾವು ವಿರೋಧಿಸುವುದಾಗಲಿ, ದ್ವೇಷಿಸುವುದಾಗಲಿ ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚು ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ ಎಂದರು.

ಪ್ರಜಾಪ್ರಭುತ್ವದ ನೀತಿಗೆ ವಿರುದ್ಧ ನಿರ್ಧಾರ
ಈ ಕಾರಣದಿಂದ ಸುದ್ದಿವಾಹಿನಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಸಹ ಅದನ್ನು ಬೆಂಬಲಿಸಬಾರದು ಎಂಬ ಕಾರಣಕ್ಕೆ ಕೆಲವು ಮಾಧ್ಯಮಗಳು ಪಟ್ಟಿಯನ್ನು ವರದಿಗಳಲ್ಲಿ ಪ್ರಕಟಿಸಿಲ್ಲ ಇಂಡಿಯಾ ಮೈತ್ರಿಯ ಮಾಧ್ಯಮ ಸಮಿತಿಯು ತೆಗೆದುಕೊಂಡ ಈ ನಿರ್ಧಾರವು ಅಪಾಯಕಾರಿ ಬೆಳವಣಿಗೆಯ ಪೂರ್ವ ನಿದರ್ಶನ ಹೊಂದಿದಂತಿದೆ. ಇಂತಹ ನಿಷೇಧ, ಬಹಿಷ್ಕಾರಗಳು "ಪ್ರಜಾಪ್ರಭುತ್ವದ ನೀತಿಗೆ ವಿರುದ್ಧವಾಗಿದೆ" ಮತ್ತು ಇದು ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ ಎಂದು ಎನ್‌ಬಿಡಿಎ ತಿಳಿಸಿದೆ. ಅಲ್ಲದೇ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಇಂಡಿಯಾ ಮೈತ್ರಿಕೂಟದ ಬ್ಲಾಕ್‌ಗೆ ಎನ್‌ಬಿಡಿಎ ಒತ್ತಾಯಿಸಿದೆ.
ಮಾಧ್ಯಮಗಳನ್ನು ಬೆದರಿಸಿದ ಇತಿಹಾಸ ಕಾಂಗ್ರೆಸ್‌ಗೆ ಇದೆ: ಬಿಜೆಪಿ
ಇದೆಲ್ಲ ಬೆಳವಣಿಗೆ ಮಧ್ಯೆ ಮಾಧ್ಯಮಗಳ ಸುದ್ದಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರದ ನಡೆಯನ್ನು ಬಿಜೆಪಿ ಖಂಡಿಸಿದೆ. ಕಾಂಗ್ರೆಸ್ ಪಕ್ಷವು ಮಾಧ್ಯಮಗಳನ್ನು ಬೆದರಿಸುವ ಇತಿಹಾಸ ಹೊಂದಿದೆ ಎಂದು ತುರ್ತುಪರಿಸ್ಥಿತಿ ಯನ್ನು ನೆನಪಿಸಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ವಾಗ್ದಾಳಿ ನಡೆಸಿದರು.
ಇದೇ ಕಾಂಗ್ರೆಸ್‌ನ ಇಂದಿರಾ ಗಾಂಧಿಯವರು ಬದ್ಧ ನ್ಯಾಯಾಂಗ, ಬದ್ಧ ಅಧಿಕಾರಶಾಹಿ ಮತ್ತು ಭಯಾನಕ ತುರ್ತು ಪರಿಸ್ಥಿತಿಯನ್ನು ಹೇರಲು ಕರೆ ನೀಡಿದರು. ರಾಜೀವ್ ಗಾಂಧಿ ಮಾಧ್ಯಮವನ್ನು ರಾಜ್ಯದ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು ಆದರೆ ದಯನೀಯವಾಗಿ ವಿಫಲರಾದರು. ಇನ್ನೂ ಸೋನಿಯಾ ಗಾಂಧಿಯವರ ನೇತೃತ್ವದ ಯುಪಿಎ ಕೇವಲ ಕಾಂಗ್ರೆಸ್ ಅವರ ಅಭಿಪ್ರಾಯಗಳನ್ನು ಇಷ್ಟಪಡದ ಕಾರಣ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನಿಷೇಧಿಸಿತ್ತು ಎಂದು ಅವರು ಕಿಡಿ ಕಾರಿದರು.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications