ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಗುಜರಾತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

Recommended Video

      ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಗುಜರಾತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ | Oneindia Kannada

      ನವದೆಹಲಿ, ಅಕ್ಟೋಬರ್ 24: ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾದ ಗುಜರಾತ್ ವಿಧಾನಸಭಾ ಚುನಾವಣೆ ಪೂರ್ವ ಸಮೀಕ್ಷೆ ಬಂದಿದ್ದು, ಬಿಜೆಪಿಯು ನಿಚ್ಚಳ ಗೆಲುವು ಸಾಧಿಸುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ. ಇಪ್ಪತ್ತೆರಡು ವರ್ಷದ ಆಡಳಿತ ವಿರೋಧಿ ಅಲೆ, ಜಿಎಸ್ ಟಿ ಜಾರಿ, ಅಪನಗದೀಕರಣ -ಇಂಥ ಯಾವ ವಿಚಾರವೂ ಬಿಜೆಪಿಯ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಈ ಸಮೀಕ್ಷೆ ತಿಳಿಸುತ್ತಿದೆ.

      ಆಕ್ಸಿಸ್ ಮೈ ಇಂಡಿಯಾವು ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲುವನ್ನು ಸಮೀಕ್ಷೆ ಮೂಲಕ ತಿಳಿಸಿತ್ತು. ಆ ನಂತರ ದೆಹಲಿ, ಬಿಹಾರ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆಯೂ ನಿಖರವಾದ ಸಮೀಕ್ಷೆ ಮಾಡಿತ್ತು.

      ಸೆಪ್ಟೆಂಬರ್ 15 ಹಾಗೂ ಅಕ್ಟೋಬರ್ 15ರ ಮಧ್ಯೆ ಆಕ್ಸಿಸ್ ನಡೆಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಹೊರಬಿದ್ದ ಫಲಿತಾಂಶದ ವಿವರ ಇಂತಿದೆ.

      ಬಿಜೆಪಿಗೆ 115-125 ಸ್ಥಾನ

      ಬಿಜೆಪಿಗೆ 115-125 ಸ್ಥಾನ

      ಗುಜರಾತ್ ನ ವಿಧಾನಸಭಾ ಸ್ಥಾನಗಳ ಒಟ್ಟು ಸಂಖ್ಯೆ- 182
      ಬಿಜೆಪಿ ಪಡೆಯಬಹುದಾದ ಸ್ಥಾನಗಳು 115-125
      ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು 65
      ಇತರರು 2

      ಬಿಜೆಪಿಗೆ ಶೇಕಡಾ 48 ಮತ

      ಬಿಜೆಪಿಗೆ ಶೇಕಡಾ 48 ಮತ

      ಈ ಸಮೀಕ್ಷೆಯಲ್ಲಿ 18,243 ಮಂದಿ ಭಾಗವಹಿಸಿದ್ದರು. ಶೇ. 48 ಮಂದಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದರೆ, ಶೇಕಡಾ 38ರಷ್ಟು ಜನ ಕಾಂಗ್ರೆಸ್ ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಈ ಹತ್ತು ಪರ್ಸೆಂಟ್ ನ ವ್ಯತ್ಯಾಸವೇ ಸಾಕು, ಎಂಥ ಆಡಳಿತ ವಿರೋಧಿ ಅಲೆಯಲ್ಲೂ ಈಜಿ ದಡ ಸೇರುತ್ತದೆ ಎನ್ನಲಾಗಿದೆ.

      ಮೋದಿಯೇ ಗೆಲುವಿನ ಟ್ರಂಪ್ ಕಾರ್ಡ್

      ಮೋದಿಯೇ ಗೆಲುವಿನ ಟ್ರಂಪ್ ಕಾರ್ಡ್

      ಗುಜರಾತ್ ನ ಈ ಬಾರಿಯ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯೇ ಬಿಜೆಪಿಗೆ ಮತ ಸೆಳೆಯುವ ಶಕ್ತಿಯಾಗಲಿದ್ದಾರೆ. ಶೇ. 66ರಷ್ಟು ಮಂದಿ ಮೋದಿ ಪ್ರಧಾನಿಯಾದ ನಂತರ ಗುಜರಾತ್ ಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರೆ, ಶೇ. 74ರಷ್ಟು ಮಂದಿ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಅಥವಾ ಅತ್ಯುತ್ತಮ ಕೆಲಸ ಮಾಡಿದೆ ಎಂದಿದ್ದಾರೆ.

      ಜಿಎಸ್ಟಿ ಜಾರಿ ಬಗ್ಗೆ ಅಸಮಧಾನ

      ಜಿಎಸ್ಟಿ ಜಾರಿ ಬಗ್ಗೆ ಅಸಮಧಾನ

      ಬಿಜೆಪಿಗೆ ಅತಿ ದೊಡ್ಡ ತಲೆನೋವು ಅನಿಸಿರುವುದು ಜಿಎಸ್ ಟಿ ಜಾರಿ. ವರ್ತಕರು ಹಾಗೂ ವ್ಯಾಪಾರಿಗಳೇ ಹೆಚ್ಚಾಗಿರುವ ಗುಜರಾತ್ ನಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 50ಕ್ಕೂ ಹೆಚ್ಚು ಮಂದಿ ಜಿಎಸ್ ಟಿ ಜಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ವಿಜಯ್ ರೂಪಾನಿ ಪರ ಒಲವು

      ವಿಜಯ್ ರೂಪಾನಿ ಪರ ಒಲವು

      ಇನ್ನು ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಶೇ 34ರಷ್ಟು ಮಂದಿ ಹಾಲಿ ಮುಖ್ಯಮಂತ್ರಿ ವಿಜಯ್ ರುಪಾನಿ ಪರ ಒಲವು ತೋರಿದ್ದರೆ, 19ರಷ್ಟು ಮಂದಿ ಕಾಂಗ್ರೆಸ್ ನ ಶಕ್ತಿಸಿಂಗ್ ಗೋಹಿಲ್ ಆಯ್ಕೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಇನ್ನು ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಭರತ್ ಸಿಂಗ್ ಸೋಲಂಕಿಗೆ ಶೇ 11ರಷ್ಟು ಮತ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+