ಹಿಟ್ ಲಿಸ್ಟಿನಲ್ಲಿದ್ದ ಲಷ್ಕರ್ ಭಯೋತ್ಪಾದಕ ಜುನೈದ್ ಮಟ್ಟೂ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಜೂನ್ 16: ಕ್ರೂರ ಉಗ್ರ ಜುನೈದ್ ಮಟ್ಟೂ ಸೇರಿದಂತೆ ಇಬ್ಬರು ಲಷ್ಕರ್ ಇ ತಯ್ಯಬಾ ಉಗ್ರರನ್ನು ಕುಲ್ಗಾಮ್ ನಲ್ಲಿ ಹೊಡೆದುರುಳಿಸಲಾಗಿದೆ.

ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸಿಆರ್ ಪಿಎಫ್ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಉಗ್ರರನ್ನು ಕೊಲ್ಲಲಾಗಿದೆ.

ಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಭಾರತದ ಸೈನಿಕ ಹುತಾತ್ಮ

 Operation wipeout: Dreaded Lashkar militant Junaid Mattoo killed

ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಇದೆಲ್ಲವನ್ನೂ ಮೆಟ್ಟಿ ನಿಂತು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಕಾಶ್ಮೀರದ ಟಾಪ್ 12 ಭಯೋತ್ಪಾದಕರ ಪಟ್ಟಿ ಬಹಿರಂಗ

ಜುನೈದ್ ಮಟ್ಟೂ ಕುಲ್ಗಾಮ್ ನಲ್ಲಿ ಗುರುವಾರ ಕೊಲೆಯಾದ ಪೊಲೀಸ್ ಅಧಿಕಾರಿ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ. ಆತನ ತಲೆಗೆ ಸೇನೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಿತ್ತು.

ಮಟ್ಟೂ ಸಾವಿನ ಬೆನ್ನಿಗೆ ಹೇಳಿಕೆ ನೀಡಿರುವ ಸೇನೆ, ಬುರ್ಹಾನ್ ವನಿ ಸಾವಿನ ಬೆನ್ನಿಗೆ ಕೊಲೆಯಾದ ಮೂರನೇ ಪ್ರಮುಖ ಉಗ್ರ ಮಟ್ಟೂ ಎಂದು ಹೇಳಿಕೆ ನೀಡಿದೆ. ಕಳೆದ ಮೇ 27 ರಂದು
ಹಿಜ್ಬುಲ್ಲಾ ಮುಜಾಹಿದ್ದೀನ್ ಪ್ರಮುಖ ಸಬ್ಜರ್ ಭಟ್ ನನ್ನು ಸೇನೆ ಹೊಡೆದುರುಳಿಸಿತ್ತು.

18ನೇ ವಯಸ್ಸಿಗೆ ಲಷ್ಕರ್ ಇ ತಯ್ಯಬಾ ಸೇರಿದ್ದ ಮಟ್ಟೂ ಇತ್ತೀಚೆಗೆ ಸೇನೆ ಬಿಡುಗಡೆ ಮಾಡಿದ್ದ ಮೋಸ್ಟ್ ವಾಂಟೆಂಡ್ 12 ಉಗ್ರರ ಪಟ್ಟಿಯಲ್ಲಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two terrorists including the dreaded Junaid Mattoo have been killed by the security forces. The two terrorists were holed up at Kulgam. The terrorists were killed in an operation undertaken by the Indian Army, SoG and CRPF.
Please Wait while comments are loading...