ತೆರಿಗೆ ವಂಚಕರ ಹೆಸರು ಬಹಿರಂಗಕ್ಕಾಗಿ ಪ್ರತ್ಯೇಕ ವೆಬ್ ಸೈಟ್

Posted By:
Subscribe to Oneindia Kannada

ಮುಂಬೈ, ಮೇ 16: ತೆರಿಗೆ ವಂಚಕರ ಹೆಸರುಗಳನ್ನು ಜಗಜ್ಜಾಹೀರು ಮಾಡಲೆಂದೇ ಪ್ರತ್ಯೇಕ ವೆಬ್ ಸೈಟೊಂದನ್ನು ಕೇಂದ್ರ ಹಣಕಾಸು ಇಲಾಖೆ ಆರಂಭಿಸಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ವೆಬ್ ಸೈಟ್ ಗೆ ಮಂಗಳವಾರ (ಮೇ 15) ಚಾಲನೆ ನೀಡಿದ್ದಾರೆ.

ದೇಶದ ನಾನಾ ಕಡೆ ಆಗುವ ಆದಾಯ ತೆರಿಗೆ ಇಲಾಖೆಯ ದಾಳಿಗಳ ಸಂಪೂರ್ಣ ವಿವರವು ಆ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ತೆರಿಗೆ ವಂಚಕರ, ಕಪ್ಪು ಹಣ ಸಂಗ್ರಹಗಾರರ ಹಾಗೂ ಖೋಟಾ ನೋಟು ದಂಧೆಕೋರರ ಹೆಸರುಗಳುಳ್ಳ ಪಟ್ಟಿಯನ್ನೂ ಆ ವೆಬ್ ಸೈಟ್ ನಲ್ಲಿ ಹಾಕಲಾಗುತ್ತದೆ. ಅದರಲ್ಲೂ ಅವರು ಮಾಡಿರುವ ವಂಚನೆಯ ವ್ಯಾಪ್ತಿಯನ್ವಯ ಆ ಪಟ್ಟಿಯಲ್ಲಿ ಅವರಿಗೆ ಶ್ರೇಯಾಂಕ ನೀಡಲಾಗುತ್ತದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.[ಚಿದಂಬರಂ, ಪುತ್ರನ ನಿವಾಸಗಳ ಮೇಲೆ CBI ದಾಳಿ;ದಿನದ 10 ಬೆಳವಣಿಗೆಗಳು]

Operation Clean Money: Govt launches website to expose tax offenders

ಕಪ್ಪು ಹಣವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ನಲ್ಲಿ ಅಪನಗದೀಕರಣದ ನಿರ್ಧಾರ ಕೈಗೊಂಡಿತ್ತು. ಆನಂತರದ ಬೆಳವಣಿಗೆಗಳಲ್ಲಿ ತೆರಿಗೆ ವಂಚಕರ ದೊಡ್ಡ ಜಾಲವನ್ನೇ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಇದೀಗ, ವೆಬ್ ಸೈಟ್ ಮೂಲಕ ಆ ವಂಚಕರ ಬಣ್ಣ ಬಯಲಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.[ಸನ್ನಿ ಲಿಯೋನ್ 84 ಕೋಟಿ ಆಸ್ತಿಯ ಒಡತಿ ಆಗಿದ್ದು ಹೇಗೆ? ಬಿಸಿನೆಸ್-ಹೂಡಿಕೆ ಫಾರ್ಮುಲಾಗಳೇನು?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government has put its drive against black money hoarders and tax evaders on fast-track and launched a website to put online names of offenders, number of raids conducted.
Please Wait while comments are loading...