ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವನ್ನು ಕಾಡುತ್ತಿರುವುದೇ B.1.617.2 ಕೊರೊನಾವೈರಸ್ ರೂಪಾಂತರ!

|
Google Oneindia Kannada News

ನವದೆಹಲಿ, ಜೂನ್ 02: ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಮೂರು ರೂಪಾಂತರ ತಳಿಗಳ ಪೈಕಿ ಎರಡು ತಳಿಗಳ ಹರಡುವಿಕೆ ವೇಗ ತಗ್ಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಸ್ಪಷ್ಟಪಡಿಸಿದೆ.

ದೇಶದಲ್ಲಿ ಮೊದಲು ಕಾಣಿಸಿಕೊಂಡ ಕೊವಿಡ್-19 ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯು 'ಡೆಲ್ಟಾ' ಎಂದು ಕರೆದಿದೆ. ಕೊರೊನಾವೈರಸ್ B.1.617 ರೂಪಾಂತರವು ಭಾರತದಲ್ಲಿ ಮೂರು ತಳಿಗಳಾಗಿ ವಿಭಜನೆಗೊಂಡಿದೆ. ಈ ಪೈಕಿ ಎರಡು ತಳಿಗಳ ಹರಡುವಿಕೆ ಪ್ರಮಾಣ ಕಡಿಮೆಯಾಗಿದ್ದು, ಒಂದು ತಳಿಯು ಹೆಚ್ಚಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವೈರಸ್ ಸ್ವರೂಪ ಬದಲಾದರೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ: ಕೇಂದ್ರ ಕಳವಳವೈರಸ್ ಸ್ವರೂಪ ಬದಲಾದರೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ: ಕೇಂದ್ರ ಕಳವಳ

ಭಾರತದಲ್ಲಿನ ಕೊರೊನಾವೈರಸ್ ಎಲ್ಲ ರೂಪಾಂತರವು ಸಂಬಂಧಿತ ತಳಿ ಎಂದು ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ಕರೆದಿತ್ತು. ಆದರೆ, ಮಂಗಳವಾರ ರೂಪಾಂತರ ತಳಿಗೆ ಒಂದು ಹೆಸರು ನೀಡಿರುವ WHO ಇದು ರೂಪಾಂತರದ ಒಂದು ವಂಶಾವಳಿ ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕೊವಿಡ್-19 ರೂಪಾಂತರದ ಹರಡುವಿಕೆ

ಭಾರತದಲ್ಲಿ ಕೊವಿಡ್-19 ರೂಪಾಂತರದ ಹರಡುವಿಕೆ

ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್ ರೂಪಾಂತರ ತಳಿಗಳ ಪೈಕಿ B.1.617.2 ವಂಶಾವಳಿಯ ಸಾರ್ವಜನಿಕವಾಗಿ ಹೆಚ್ಚು ಅಪಾಯಕಾರಿಯಾಗಿಲ್ಲ ಎಂಬುದು ಸಾಕ್ಷಿ ಸಮೇತ ಸಾಬೀತಾಗಿದೆ. ಅಲ್ಲದೇ, ಇತರೆ ರೂಪಾಂತರ ತಳಿಗಳಿಗೆ ಹೋಲಿಸಿದ್ದಲ್ಲಿ ಈ ವಂಶಾವಳಿಯ ಹರಡುವಿಕೆ ವೇಗ ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಮೂರು ರೂಪಾಂತರ ತಳಿಗಳ ಪೈಕಿ B.1.617.2 ಎಂಬುದು ಸಂಬಂಧಿತ ವಂಶಾವಳಿಯಾಗಿದ್ದು, ಇತರ ಹೊರತಾಗಿ ಇತರೆ ಎರಡು ತಳಿಗಳು ತೀವ್ರವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದ್ದು ಹೆಚ್ಚು ಅಪಾಯಕಾರಿಯಾಗಿವೆ ಎಂದು ತಿಳಿದು ಬಂದಿದೆ.

ಗ್ರೀಕ್ ವರ್ಣಮಾಲೆ ಬಳಸಿದ ವಿಶ್ವ ಆರೋಗ್ಯ ಸಂಸ್ಥೆ

ಗ್ರೀಕ್ ವರ್ಣಮಾಲೆ ಬಳಸಿದ ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಕೊವಿಡ್-19 ಸಂಬಂಧಿತ ರೂಪಾಂತರ ಮತ್ತು ಬಾಧ್ಯತೆ ಆಧಾರಿತ ರೂಪಾಂತ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿದೆ. ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರ ತಳಿಗಳನ್ನು ಹೆಸರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಗ್ರೀಕ್ ವರ್ಣಮಾಲೆಯನ್ನು ಬಳಸಿಕೊಳ್ಳಲಾಗಿದೆ. ಆ ಮೂಲಕ ಯಾವುದೇ ರಾಷ್ಟ್ರದ ಹೆಸರಿನ ಜೊತೆಗೆ ಕೊವಿಡ್-19 ರೂಪಾಂತರದ ಹೆಸರು ಥಳಕು ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಆ ಮೂಲಕ ಕೊರೊನಾವೈರಸ್ ಸೋಂಕಿನ ಹರಡುವಿಕೆಯು ಒಂದು ದೇಶಕ್ಕೆ ಕಳಂಕ ಹಚ್ಚದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೊವಿಡ್ ಹರಡುವಿಕೆ ಹೆಚ್ಚುತ್ತಿರುವ ರಾಷ್ಟ್ರಗಳ ಮೇಲೆ ಲಕ್ಷ್ಯ

ಕೊವಿಡ್ ಹರಡುವಿಕೆ ಹೆಚ್ಚುತ್ತಿರುವ ರಾಷ್ಟ್ರಗಳ ಮೇಲೆ ಲಕ್ಷ್ಯ

ಕೊವಿಡ್-19 ಸೋಂಕು ಹರಡುವಿಕೆ ಹೆಚ್ಚುತ್ತಿರುವ ಹಾಗೂ 'ಡೆಲ್ಟಾ' ರೂಪಾಂತರದ ಸೋಂಕಿತ ಪ್ರಕರಣಗಳನ್ನು ವರದಿ ಮಾಡುತ್ತಿರುವ ರಾಷ್ಟ್ರಗಳ ಬಗ್ಗೆ ಗಮನ ಹರಿಸಲಾಗಿದೆ. ಈ ರೂಪಾಂತರ ರೋಗಾಣುವಿನ ಪ್ರಭಾವದ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದು ವಿಶ್ವ ಆರೋಗ್ಯ ಸಂಸ್ಥೆಯ ಆದ್ಯತೆಯಾಗಿದೆ. ಕಳೆದ ಶನಿವಾರ ವಿಯೆಟ್ನಾಂನ ಆರೋಗ್ಯ ಅಧಿಕಾರಿಗಳು ಘೋಷಿಸಿದ ಹೊಸ ಹೈಬ್ರಿಡ್ ರೂಪಾಂತರ ತಳಿಯು ಡೆಲ್ಟಾದ ಬದಲಾವಣೆಯಾಗಿದೆ ಎಂದು WHO ತಿಳಿಸಿದೆ.

ಡೆಲ್ಡಾ ರೂಪಾಂತರಕ್ಕೆ ಹರಡುವಿಕೆ ಸಾಮರ್ಥ್ಯ ಹೆಚ್ಚು

ಡೆಲ್ಡಾ ರೂಪಾಂತರಕ್ಕೆ ಹರಡುವಿಕೆ ಸಾಮರ್ಥ್ಯ ಹೆಚ್ಚು

ಪ್ರಸ್ತುತ B.1.617.2 ರೂಪಾಂತರ ತಳಿಯು ದೇಹದ ಪ್ರೋಟೀನ್ ಶಕ್ತಿಯನ್ನು ತೊಡೆದು ಹಾಕುವ ಹೆಚ್ಚುವರಿ ಅಂಶವನ್ನು ಒಳಗೊಂಡಿರುತ್ತದೆ ಅಂತಾ ನಾವು ಭಾವಿಸುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್-19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕರ್ಖೊವೆ ತಿಳಿಸಿದ್ದಾರೆ. B.1.61.2 ಹಾಗೂ ಡೆಲ್ಟಾ ರೂಪಾಂತರವು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಅಂಟಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಕೊವಿಡ್-19 ರೂಪಾಂತರದ ಜೊತೆ ದೇಶದ ಹೆಸರು ಬಳಸುವುದೇಕೆ?

ಕೊವಿಡ್-19 ರೂಪಾಂತರದ ಜೊತೆ ದೇಶದ ಹೆಸರು ಬಳಸುವುದೇಕೆ?

ಕೊರೊನಾವೈರಸ್ ಸೋಂಕಿನ B.1.617.2 ರೂಪಾಂತರ ತಳಿಯನ್ನು ಭಾರತೀಯ ತಳಿ ಎಂದು ಕರೆಯದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಧಿಕೃತ ಮೂಲಗಳಿಂದ ದೃಢಪಡಿಸುವ ಹೊರತು ರೂಪಾಂತರ ತಳಿಯ ಜೊತೆಗೆ ದೇಶದ ಹೆಸರನ್ನು ಸೇರಿಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿತ್ತು. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮೂಲದ ತಳಿ ಎಂದು ಬಳಕೆ ಮಾಡಿರುವ ಎಲ್ಲ ದತ್ತಾಂಶವನ್ನು ತೆಗೆದು ಹಾಕುವಂತೆ ಸೂಚಿಸಲಾಗಿತ್ತು. ಇದಕ್ಕೂ ಮೊದಲು ಸಿಂಗಾಪುರ್ ನಲ್ಲಿ ಪತ್ತೆಯಾಗಿರುವ ರೂಪಾಂತರ ತಳಿಯನ್ನು ಸಿಂಗಾಪುರ್ ರೂಪಾಂತರ ಎಂದು ಕರೆಯಲಾಗುತ್ತಿತ್ತು. ಅಲ್ಲಿನ ಸರ್ಕಾರ ರೂಪಾಂತರವನ್ನು ಈ ರೀತಿ ಹೆಸರಿಸದಂತೆ ತಾಕೀತು ಮಾಡಿದ್ದು, ಸಂಬಂಧಿತ ಎಲ್ಲ ದತ್ತಾಂಶಗಳನ್ನು ಡಿಲೀಟ್ ಮಾಡುವಂತೆ ಖಡಕ್ ಆದೇಶ ನೀಡಿತ್ತು.

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಮಾಹಿತಿ

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಮಾಹಿತಿ

ದೇಶದಲ್ಲಿ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಆರಂಭವಾದ 50 ದಿನಗಳ ಬಳಿಕ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ಒಂದು ವಾರದ ಪಾಸಿಟಿವಿಟಿ ದರ ಶೇ.9.07ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,38,022 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,128 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 2,80,47,534 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,56,92,342 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,29,100 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 20,26,092 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Only One Strain Of Coronavirus Variant Now Found In India Is "B.1.617.2": WHO
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X